ಆಳಂದ ದೇಶಮುಖ ಕಾಲನಿಯಲ್ಲಿ ಕೇಂದ್ರ ಪುರಸತ ಅಮೃತ 2.0 ಯೋಜನೆಯ ಪ್ರಗತಿಯನ್ನು ಜಿಲ್ಲಾಧಿಕಾರಿ ಮಹಮ್ಮದ್ ಇಕ್ರಮುಲ್ಲಾ ಶರೀಫ್ ಪರಿಶೀಲಿಸಿದರು. ಆರ್.ಕೆ.ಪಾಟೀಲ್, ಸಾಹಿತ್ಯಾ ಆಲದಕಟ್ಟಿ, ಸಂಜಯಕುಮಾರ ಇತರರಿದ್ದರು.
- ಜಿಲ್ಲಾಧಿಕಾರಿ ಮಹಮ್ಮದ್ ಇಕ್ರಮುಲ್ಲಾ ಶರೀಫ್ ತಾಕೀತು
- ಆಳಂದ ತಾಲೂಕಿನಲ್ಲಿ ಸಂಚಾರ
ಆಳಂದ: ಕುಡಿವ ನೀರಿನ ಯುಜಿಡಿ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳು ಕೇವಲ ಕಡತಕ್ಕೆ ಸೀಮಿತವಾಗದಿರಲಿ. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಮಹಮ್ಮದ್ ಇಕ್ರಮುಲ್ಲಾ ಶರೀಫ್ ಸೂಚನೆ ನೀಡಿದರು.
ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆ ನನ್ನ ಗಮನಕ್ಕಿಲ್ಲ, ಈ ಕೂಡಲೇ ಮಾಹಿತಿ ಪಡೆಯುವೆ. ಸಮಸ್ಯೆ ಕಂಡುಬಂದರೆ ಸರಿಯಾಗಿ ಸಿಲಿಂಡರ್ ವಿತರಣೆ ಮಾಡುವಂತೆ ಗ್ಯಾಸ್ ಏಜೆನ್ಸಿ ಮಾಲೀಕರಿಗೆ ಎಚ್ಚರಿಕೆ ನೀಡುವೆ. ಸುಧಾರಿಸಕೊಳ್ಳದಿದ್ದರೆ ಕ್ರಮಕ್ಕೆ ಮುಂದಾಗಲಾಗುವುದು ಎಂದು ಹೇಳಿದರು.
ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡರೆ ಕುಡಿವ ನೀರು ಸಮಸ್ಯೆ ಬಗೆಹರಿಯಲಿದೆ. ಹಲವು ತಿಂಗಳುಗಳಿಂದ ನಡೆಯುತ್ತಿರುವ ಕಾಮಗಾರಿಗಳಿಂದ ಸಂಚಾರ ದಟ್ಟಣೆ, ಧೂಳು ಹಾಗೂ ನೀರು ನಿಂತುಕೊಳ್ಳುವ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸಂಬಂಧಪಟ್ಟವರು ಗಮನಹರಿಸಿ ನಿಗದಿತ ಅವಧಿಯಲ್ಲಿ ಗುಣಮಟ್ಟದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಕಲಬುರಗಿ&ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಆರ್.ಕೆ.ಪಾಟೀಲ್, ಸಹಾಯಕ ಆಯುಕ್ತೆ ಸಾಹಿತ್ಯಾ ಆಲದಕಟ್ಟಿ, ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಮುನ್ನಾವರ್ ದೌಲಾ, ತಹಸೀಲ್ದಾರ್ ಅಣ್ಣಾರಾವ ಪಾಟೀಲ್, ತಾಪಂ ಇಒ ಮಾನಪ್ಪ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಇಇ ಸಂಜಯಕುಮಾರ, ಎಇಇ ಎಚ್.ಎನ್.ಸ್ವಾಮಿ, ಲೋಕೋಪಯೋಗಿ ಎಇಇ ಹೊನ್ನೇಶ ಅಳಗಿ, ಕಂದಾಯ ನಿರೀಕ್ಷಕ ಶರಣು ಹಕ್ಕಿ, ಗ್ರಾಮ ಲೆಕ್ಕಿಗ ಆನಂದ ಪೂಜಾರಿ ಇತರರಿದ್ದರು.
86 ಕೋಟಿ ರೂ. ವೆಚ್ಚದ ಕೇಂದ್ರ ಪುರಸತ ಅಮೃತ 2.0 ಯೋಜನೆ ಕಾಮಗಾರಿ, ಹಳೇ ತಹಸಿಲ್ ಕಚೇರಿಯಿಂದ ದರ್ಗಾ ಬೇಸ್ವರೆಗೆ ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ ಹಾಗೂ ಅಮರ್ಜಾ ಜಾಕವೈಲ್ ಕಾಮಗಾರಿ ವೀಸಿದರು.
"
ಖಜೂರಿ ಗ್ರಾಮದ 4 ಮತ್ತು 5ನೇ ವಾರ್ಡ್ನ ಕುಡಿವ ನೀರಿನ ಸಮಸ್ಯೆಯನ್ನು ಎರಡು ದಿನದಲ್ಲಿ ಬಗೆಹರಿಸಿ ವರದಿ ಸಲ್ಲಿಸುವಂತೆ ಇಒಗೆ ಸೂಚಿಸಿದ್ದೇನೆ. ಗ್ರಾಪಂಗಳಲ್ಲಿ ಕುಡಿವ ನೀರಿನ ಸಮಸ್ಯೆ ಆದರೆ ಅದಕ್ಕೆ ತಾಪಂ ಇಒ ನೇರ ಹೊಣೆ. ಚೆಕ್ಪೋಸ್ಟ್ ಹತ್ತಿರದಿಂದ ಪಟ್ಟಣಕ್ಕೆ ಪೈಪ್ಲೈನ್ ಹಾದು ಹೋಗುತ್ತಿದ್ದು, ಇದಕ್ಕೆ ಕೆಲ ವ್ಯಾಪಾರಸ್ಥರು ಅಡ್ಡಿಪಡಿಸುತ್ತಿದ್ದಾರೆ ಎಂದ ದೂರಿದೆ. ಅಂತವರಿಗೆ ನೋಟಿಸ್ ಕೊಟ್ಟು ಮಾಡಿಸಿ. ಬೇಕಿದ್ದರೆ ಪೊಲೀಸರ ಸಹಕಾರ ಪಡೆದುಕೊಳ್ಳಿ.
— > ಮಹಮ್ಮದ್ ಇಕ್ರಮುಲ್ಲಾ ಶರೀಫ್, ಜಿಲ್ಲಾಧಿಕಾರಿ
"
ಅಮೃತ 2.0 ಯೋಜನೆಯಡಿ ನಡೆಯುತ್ತಿರುವ ಕುಡಿವ ನೀರಿನ ಕಾಮಗಾರಿಯೂ ಅಧಿಕಾರಿಗಳು ಮತ್ತು ಗುತ್ತಿಗೆದಾರ ನಿಷ್ಕಾಳಜಿಯಿಂದ ನಿಧಾನಗತಿಯಲ್ಲಿ ಸಾಗುತ್ತಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ಶ್ರೀ ಕಾಮಗಾರಿ ಮುಗಿಸಲು ಸೂಚನೆ ನೀಡಬೇಕು. ಈ ಮೂಲಕ ಜನರಿಗೆ ಅನುವು ಮಾಡಿಕೊಡಬೇಕು.
— > ಆರ್.ಕೆ.ಪಾಟೀಲ್, ಅಧ್ಯಕ್ಷ ಕಲಬುರಗಿ&ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ