ಮಲಾಪುರ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೊಠಡಿ ನಿರ್ಮಾಣ ಕಾಮಗಾರಿಯನ್ನು ಜಿಪಂ ಸಿಇಒ ರಾಹುಲ್​ ಸಂಕನೂರ ಪರಿಶೀಲಿಸಿದರು. ರಮೇಶ ಪಾಟೀಲ್​, ವಿಕಾಶ, ಜಗನ್ನಾಥ ರೆಡ್ಡಿ ಇತರರಿದ್ದರು. 
ರಾಜ್ಯ

ಕೊಠಡಿ ನಿರ್ಮಾಣ ಕಾರ್ಯ ಶೀಘ್ರ ಮುಗಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ರಾಹುಲ್​ ಸಂಕನೂರ ಸೂಚನೆ
  • ಕಮಲಾಪುರ ತಾಲೂಕಿನಲ್ಲಿ ಸಂಚಾರ
ಕಮಲಾಪುರ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ರಾಹುಲ್​ ಸಂಕನೂರ ಕರೆ ನೀಡಿದರು.
ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮಂಗಳವಾರ ಭೇಟಿ ನೀಡಿ 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 4 ಕೊಠಡಿಗಳ ಕಾಮಗಾರಿ ಪರಿಶೀಲಿಸಿದ ಅವರು, ನಿಗದಿತ ವೇಗದಲ್ಲಿ ಕೆಲಸ ನಡೆಯುತ್ತಿಲ್ಲ. ಈ ನಿರ್ಲಕ್ಷ್ಯ ಸರಿಯಲ್ಲ. ಶೀಘ್ರ ಕಾಮಗಾರಿ ಆರಂಭಿಸಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಈ ಮೂಲಕ ಮಕ್ಕಳ ಕಲಿಕೆಗೆ ಅವಕಾಶ ಒದಗಿಸಿಕೊಡಬೇಕು ಎಂದು ಸೂಚನೆ ನೀಡಿದರು.
ಕುರಿಕೋಟಾದಲ್ಲಿ ನನೆಗುದಿಗೆ ಬಿದ್ದಿರುವ ಸಾರ್ವಜನಿಕ ಶೌಚಗೃಹ, ಹೊಳಕುಂದಾದಲ್ಲಿ ಸಾರ್ವಜನಿಕ ಗ್ರಂಥಾಲಯ, ಕಸ ವಿಲೇವಾರಿ ತ್ಯಾಜ್ಯ ಟಕ, ಓಕಳಿ- ವರನಾಳ ಮಧ್ಯದ ಸೇತುವೆ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಪಂ ಇಒ ರಮೇಶ ಪಾಟೀಲ್​, ನೀರು ಸರಬರಾಜು ನಿಗಮ ಜೆಇ ವಿಕಾಶ, ತಾಪಂ ಎಡಿ ಜಗನ್ನಾಥ ರೆಡ್ಡಿ, ಪ್ರಮುಖರಾದ ರಾಜೇಂದ್ರ, ಚೇತನ ಡಬರಾಬಾದ್​, ಮೆಹಬೂಬ್​ ಶಹಾ ಇತರರಿದ್ದರು.