ನಾರಾಯಣಪುರ ಜಲಾಶಯದ ಎಡದಂಡೆ ಕಾಲುವೆ ಶಹಾಪುರ ಮುಖ್ಯ ಶಾಖಾ ಕಾಲುವೆಯಲ್ಲಿ (ಎಸ್‌ಬಿಸಿ) ೪೧ನೇ ಕಿಮೀ ಬಳಿ ನಿರ್ಮಿಸಲಾಗುತ್ತಿರುವ ಕ್ರಾಸ್ ರೆಗ್ಯುಲೇಟರ್ ಕಾಮಗಾರಿಯನ್ನು ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಪರಿಶೀಲಿಸಿದರು. ಸುಮಿತ್ರಾನಂದ, ಪ್ರಮೋದಕುಮಾರ ಗೌಳಿ, ಶಿಲ್ಪಾ ಹಾರಣಗೇರಾ, ಇತರರಿದ್ದರು. 
ರಾಜ್ಯ

ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ದರ್ಶನಾಪುರ ಸೂಚನೆ
  • ಕ್ರಾಸ್ ರೆಗ್ಯುಲೇಟರ್ ಕಾಮಗಾರಿಗೆ ರು.೧.೭೪ ಕೋಟಿ
ಶಹಾಪುರ:

ಶಹಾಪುರ ನಗರಕ್ಕೆ ಬೇಸಿಗೆ ಸೇರಿ ಅಗತ್ಯ ಸಂದರ್ಭಗಳಲ್ಲಿ ಕುಡಿವ ನೀರು ಸರಬರಾಜು ಮಾಡುವ ಉದ್ದೇಶದಿಂದ ನಾರಾಯಣಪುರ ಜಲಾಶಯದ ಎಡದಂಡೆ ಕಾಲುವೆ ಶಹಾಪುರ ಮುಖ್ಯ ಶಾಖಾ ಕಾಲುವೆಯಲ್ಲಿ (ಎಸ್‌ಬಿಸಿ) ೪೧ನೇ ಕಿಮೀ ಬಳಿ ನಿರ್ಮಿಸಲಾಗುತ್ತಿರುವ ಕ್ರಾಸ್ ರೆಗ್ಯುಲೇಟರ್ ಕಾಮಗಾರಿ ನಿಗದಿತ ಅವಽಯೊಳಗೆ ಮತ್ತು ಗುಣಮಟ್ಟದಲ್ಲಿ ಮುಗಿಸಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಸಂಬಂಧಪಟ್ಟ ಅಧಿಕಾರಿಗಳಗೆ ಸೂಚಿಸಿದರು.

ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಕೃಷ್ಣಾ ಜಲಭಾಗ್ಯ ನಿಗಮದಿಂದ ಸುಮಾರು ೧.೭೪ ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಈ ಅಡ್ಡ ನಿಯಂತ್ರಕ ನಿರ್ಮಾಣದಿಂದ ಕಾಲುವೆ ನೀರು ಶಹಾಪುರದ ನಗರಸಭೆ ನೀರು ಶುದ್ಧೀಕರಣ ಘಟಕಕ್ಕೆ ತಿರುಗಿಸಿ ಅಲ್ಲಿ ಸಂಗ್ರಹಿಸುವ ಮೂಲಕ ಬೇಸಿಗೆಯಲ್ಲಿ ನೀರಿನ ಅಭಾವ ನೀಗಿಸಲು ಇದು ಸಹಕಾರಿಯಾಗಲಿದೆ ಎಂದರು.
ಶಹಾಪುರ ಮುಖ್ಯ ಶಾಖಾ ಕಾಲುವೆ ೦ದಿಂದ ೭೫ಕಿಮೀವರೆಗೂ ಇದ್ದು, ಇಲ್ಲಿ ಸಂಗ್ರಹವಾಗುವ ನೀರು ತಡೆದು ಆ ಮೂಲಕ ನಗರಕ್ಕೆ ಸರಬರಾಜು ಮಾಡುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಶೇ.೮೦ ಕಾಮಗಾರಿ ಮುಗಿದಿದ್ದು, ನೀರು ಸಂಗ್ರಹವಾಗುತ್ತಿದ್ದಂತೆ ಗೇಟ್ ಅಳವಡಿಸಲಾಗುವುದು ಎಂದು ತಿಳಿಸಿದರು.
ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು, ಇದನ್ನು ಮನಗಂಡು ಅಽಕಾರಿಗಳೊಂದಿಗೆ ಚರ್ಚಿಸಿ ಇದಕೊಂದು ನೀಲನಕ್ಷೆ ಸಿದ್ದಪಡಿಸಿ ಬೇಕಾದ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲಾಗಿದೆ ಎಂದರು. ಕೆಬಿಜೆಎನ್‌ಎಲ್ ಕಾರ್ಯಪಾಲಕ ಅಭಿಯಂತರ ಸುಮಿತ್ರಾನಂದ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಮೋದಕುಮಾರ ಗೌಳಿ, ಸಹಾಯಕ ಅಭಿಯಂತರ ಶಿಲ್ಪಾ ಹಾರಣಗೇರಾ, ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವುಮಹಾಂತ ಸಾಹು ಚಂದಾಪುರ ಇತರರಿದ್ದರು.
"

ನಾರಾಯಣಪುರ ಜಲಾಶಯದ ಎಡದಂಡೆ ವ್ಯಾಪ್ತಿಯಲ್ಲಿ ಶಹಾಪುರ, ಮೂಡಬೂಳ ಮತ್ತು ಜೇವರ್ಗಿ ಮುಖ್ಯ ಶಾಖಾ ಕಾಲುವೆಗಳಿದ್ದು, ಶಹಾಪುರ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್‌ಬಿಸಿ ಮುಖ್ಯ ಕಾಲುವೆ ಇದ್ದು, ಇಲ್ಲಿಂದ ನೀರು ಸಂಗ್ರಹಿಸಿ, ಅದನ್ನು ಅಡ್ಡ ನಿಯಂತ್ರಕ ಕಾಮಗಾರಿಯಿಂದ ಶಹಾಪುರ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.| ಶರಣಬಸಪ್ಪ ದರ್ಶನಾಪುರ ಶಾಸಕ ಶಹಾಪುರ