ಕಕ್ಕೇರಾ ಪುರಸಭೆಯಲ್ಲಿ ಸೋಮವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿದರು. ನವೀನ ಧಣಿ, ರಾಜಶೇಖರಗೌಡ ವಜ್ಜಲ್, ಮಲ್ಲಣ್ಣ ಮುಧೋಳ, ಗುಂಡಪ್ಪ ಸೊಲಾಪುರ, ಮಾನಪ್ಪ ಗೋನಾಲ್ ಇತರರಿದ್ದರು. 
ರಾಜ್ಯ

ಬಸ್ ನಿಲ್ದಾಣ ಕಾಮಗಾರಿ ಶೀಘ್ರ ಮುಗಿಸಿ

ಚನ್ನಬಸಯ್ಯ ಗುರುವಿನ

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜಾ ವೇಣುಗೋಪಾಲ ನಾಯಕ ಸೂಚನೆ
  • ಕಕ್ಕೇರಾದಲ್ಲಿ ತ್ರಿಚಕ್ರ ವಾಹನ ವಿತರಣೆ
ಕಕ್ಕೇರಾ:

ಅಂಗವಿಕಲರಿಗೆ ಸರ್ಕಾರದಿಂದ ನೀಡುವ ತ್ರಿಚಕ್ತ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಪಟ್ಟಣದ ಪುರಸಭೆ ಸೋಮವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅರ್ಹ -Àಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಂಗವಿಕಲರು ಸೇರಿ ಎಲ್ಲ ವರ್ಗದ ಬಡ ಜನರಿಗೆ ಆರ್ಥಿಕವಾಗಿ ಸಬಲರಾಗಲು ಹಲವು ಯೋಜನೆಗಳು ಅನುಷ್ಠಾನಕ್ಕೆ ತಂದಿದೆ. ಅದರಲ್ಲೂ ಅಂಗವಿಕಲರು ಯಾವುದೇ ಕಾರಣಕ್ಕೂ ಹಿಂದುಳಿಯದೆ ಆರ್ಥಿಕವಾಗಿ ಸಬಲರಾಗುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಂತರ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿ ಅಮೃತ್ ನಗರೋತ್ಥಾನ ಯೋಜನೆ ಹಂತ-೪ರಡಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ, ಅಲ್ಲಲ್ಲಿ ಅಸಮರ್ಪಕ ಕೆಲಸಗಳ ಬಗ್ಗೆ ಶಾಸಕರು ಗುತ್ತಿಗೆದಾರರನ್ನು ಪ್ರಶ್ನಿಸಿ ಕೂಡಲೇ ಸರಿಪಡಿಸುವಂತೆ ಮತ್ತು ತೆಗ್ಗು ಇರುವ ಕಡೆ ಕೆಂಪುಮಣ್ಣು ಹಾಕಿ ನೆಲ ಸಮತಟ್ಟಾಗುವಂತೆ ಮಾಡಬೇಕು ಎಂದು ತಾಕೀತು ಮಾಡಿದರು. ಅಲ್ಲದೆ ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸದೆ ಶೀಘ್ರ ಮುಗಿಸುವಂತೆ ಸೂಚನೆ ನೀಡಿದರು.
ಈ ವೇಳೆ ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜೆಟ್ಟೆಪ್ಪ ದಳಾರ, ಪುರಸಭೆ ಮುಖ್ಯಾಽಕಾರಿ ಮಾನಪ್ಪ ಗೋನಾಲ್, ಮುಖಂಡರಾದ ರಾಜಶೇಖರಗೌಡ ಪಾಟೀಲ್ ವಜ್ಜಲ್, ಮಲ್ಲಣ್ಣ ಮುಧೋಳ್, ವೆಂಕೋಬ ಸಾಹುಕಾರ್, ನವೀನ ಧಣಿ, ಗುಂಡಪ್ಪ ಸೊಲಾಪೂರ, ರವಿಚಂದ್ರ ಸಾಹುಕಾರ್, ಅಮರಪ್ಪ ಮಂಡಿ, ದ್ಯಾವಪ್ಪ ಜಂಪಾ, ಬಸಯ್ಯಸ್ವಾಮಿ ಶರಣಕುಮಾರ ಸೊಲಾಪುರ, ಬುಚ್ಚಪ್ಪ ಗುರಿಕಾರ, ಪರಶುರಾಮ ಚಿಂಚೋಡಿ ಮತ್ತು ಪುರಸಭೆ ಸದಸ್ಯರಿದ್ದರು.