Complete school work quickly. 
ರಾಜ್ಯ

ಶಾಲೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

ತುಮಕೂರು ಡೆಸ್ಕ್
ಶಿರಾ: ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಪ್ರದೇಶಾಭಿವೃದ್ಧಿ ಅನುದಾನದಡಿ 1 ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣವಾಗುತ್ತಿರುವ ಹೈಟೆಕ್​ ಶಾಲಾ ಕಟ್ಟಡದ ಕಾಮಗಾರಿ ಸ್ಥಳಕ್ಕೆ ಶಾಸಕ ಚಿದಾನಂದ್​ ಎಂ. ಗೌಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಿಮಾರ್ಣ ಹಂತದಲ್ಲಿರುವ ಕಟ್ಟಡದ ಗುಣಮಟ್ಟ ಪರಿಶೀಲಿಸಿದರು. ಬಳಸುತ್ತಿರುವ ಸಾಮಗ್ರಿಗಳು ಹಾಗೂ ಕೆಲಸದ ವೇಗಕ್ಕೆ ತೃಪ್ತಿ ವ್ಯಕ್ತಪಡಿಸಿದ ಅವರು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ, ಬರುವ ಶೈಕ್ಷಣಿಕ ವರ್ಷದ ಜೂನ್​ ತಿಂಗಳೊಳಗೆ ಶಾಲೆ ಉದ್ಘಾಟನೆಯಾಗಬೇಕು. ಆ ನಿಟ್ಟಿನಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಪೂರೈಸಿ ಎಂದು ಇಂಜಿನಿಯರ್​ಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಭಾಗದ ಶೈಕ್ಷಣಿಕ ಪ್ರಗತಿಗಾಗಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ತಾವರೆಕೆರೆಯ ಈ ಹೈಟೆಕ್​ ಶಾಲೆ ಈ ಭಾಗದ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ. ಕಾಮಗಾರಿಯು ಪಾರದರ್ಶಕವಾಗಿ ಮತ್ತು ಗುಣಮಟ್ಟದಿಂದ ಕೂಡಿರಲಿ ಎಂಬ ಉದ್ದೇಶದಿಂದ ಇಂದು ಭೇಟಿ ನೀಡಿದ್ದೇನೆ. ಜೂನ್​ನಲ್ಲಿ ಶಾಲೆ ಉದ್ಘಾಟನೆಗೊಂಡು ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲಿದೆ ಎಂದು ತಿಳಿಸಿದರು.
ಮಾರನಗೆರೆ ಮಧುಸೂಧನ್​, ಮದ್ದಕ್ಕನಹಳ್ಳಿ ರಂಗನಾಥ್​, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್​, ಭಾಸ್ಕರ್​, ಮುಖಂಡರಾದ ರಾಜು, ವಿಎಸ್ಸೆಸ್ಸೆಎನ್​ ಅಧ್ಯಕ್ಷ ಕಾಂತರಾಜು, ರಾಮಚಂದ್ರಪ್ಪ, ರಂಗನಾಥ್​, ಎಸ್​ಡಿಎಂಸಿ ಅಧ್ಯಕ್ಷ ಮಹಾಂತೇಶ್​, ಉಪಾಧ್ಯಕ್ಷ ಹರೀಶ್​, ರಮೇಶ್​, ಮೆಳೆಕೋಟೆ ಚಂದ್ರು, ಉಜ್ಜನಕುಂಟೆ ಈಶ್ವರಪ್ಪ, ರಾಘವೇಂದ್ರ ರಮೇಶ್​, ಮಂಜುನಾಥ್​, ಮಧುಸೂದನ್​, ಸತ್ಯನಾರಾಯಣ, ಶಿವಣ್ಣ, ಗೊಲ್ಲರಹಟ್ಟಿ ಗುರುಪ್ರಸಾದ್​, ಅಂಜಿನಪ್ಪ, ಬಾಬು, ಮಣಿಕಂಠ, ಅಜಯ್​, ಅವಿನಾಶ್​, ಯುವರಾಜ, ತೇಜು, ಮಂಜುನಾಥ್​ ಇದ್ದರು.