ಹುಮನಾಬಾದ್ನ ಬಸವನಗರದಲ್ಲಿ ಸೋಮವಾರ ಶ್ರೀ ಬಸವೇಶ್ವರರ ನೂತನ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭೂಮಿ ಪೂಜೆ ನೆರವೇರಿಸಿದರು. ಪ್ರಮುಖರಾದ ಮಲ್ಲಿಕಾರ್ಜುನ ಸೀಗಿ, ಗಿರೀಶ ತುಂಬಾ, ಅಶೋಕ ಇತರರಿದ್ದರು.
- ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸೂಚನೆ
- ಹುಮನಾಬಾದ್ನಲ್ಲಿ ಬಸವೇಶ್ವರ ಸಮುದಾಯ ಭವನ ಕಟ್ಟಡಕ್ಕೆ ಭೂಮಿಪೂಜೆ
ಹುಮನಾಬಾದ್: ಪಟ್ಟಣದ ಬಸವನಗರದಲ್ಲಿ ಸೋಮವಾರ ನಗರದ ಬಸವಅನುಯಾಯಿಗಳ ಬಹುದಿನಗಳ ಬೇಡಿಕೆಯಾಗಿದ್ದ ಬಸವೇಶ್ವರ ಸಮುದಾಯ ಭವನ ಕಟ್ಟಡಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆಯಡಿ ಸುಮಾರು 30 ಲಕ್ಷ ರೂ.ಅನುದಾನ ಒದಗಿಸಲಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.
ವಿಶ್ವಗುರು ಶ್ರೀ ಬಸವಣ್ಣನವರ ಜಯಂತ್ಯುತ್ಸದಂದು ಪಟ್ಟಣದಲ್ಲಿ ಬಸವೇಶ್ವರರ ನೂತನ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅವಧಿಯೊಳಗೆ ಕಾಮಗಾರಿ ಗುಣಮಟ್ಟದಿಂದ ನಡೆಸುವಂತೆ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಮಾತನಾಡಿ, ಸಂಬಂಧಿತ ಇಲಾಖೆಯವರಿಗೆ ಕಾಮಗಾರಿ ಗುಣಮಟ್ಟದಿಂದ ನಡೆಸಲು ಕಟ್ಟು ನಿಟ್ಟಿನ ಸೂಚನೆ ನೀಡಲಾಗುವುದು. ಒಟ್ಟಿನಲ್ಲಿ ಸಮುದಾಯ ಭವನ ಉತ್ತಮ ರೀತಿಯಿಂದ ಆಗಬೇಕು. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಬಸವ ಸೇವಾ ಪ್ರತಿಷ್ಠಾನದ ಅಧ್ಯ ಬಸವರಾಜ ರುದ್ರವಾಡಿ, ಪ್ರಮುಖರಾದ ಮಲ್ಲಿಕಾರ್ಜುನ ಸಂಗಮರಕರ, ಎಸ್.ಎಸ್.ಪಾರ, ಚನ್ನಬಸವಣಪ್ಪ ವಡ್ಡನಕೇರಾ, ಮಡಿವಾಳಪ್ಪ ಸ್ವಾಮಿ, ಡಾ.ಸೋಮನಾಥ ಯಳವಾರ, ಮಲ್ಲಿಕಾರ್ಜುನ ನೀಲಕಂಠ, ಅಶೋಕ ಸೊಂಡೆ, ಗಿರೀಶ ತುಂಬಾ, ಮಲ್ಲಿಕಾರ್ಜುನ ಸಿಗಿ , ಸಂತೋಷ ಪಾಟೀಲ, ಶೋಭಾ ಔರಾದೆ, ಶೋಭಾ ಪಾರ, ಈರಮ್ಮ ಕುಂಬಾರ, ಕರುಣ ಸಲಗರ, ಶರಣಪ್ಪ ಪಾಟೀಲ್, ಸಂದೇಶ ಭೀಮಶೆಟ್ಟಿ, ಮಾಣಿಕರಾವ ಪಾಟೀಲ್ ಇತರರಿದ್ದರು.