ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಗೋವಿಂದಗೆ ಎಸ್‌ಎಫ್‌ಐ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಪ್ರಮುಖರಾದ ದಿಲ್‌ಶಾದ್, ಶಿವು, ಅಭಿಷೇಕ್, ಸುನೀಲ್, ನಿಂಗಯ್ಯ ಇತರರಿದ್ದರು.
- ದೇವದುರ್ಗದಲ್ಲಿ ತಹಸೀಲ್ದಾರ್‌ಗೆ ಎಸ್‌ಎಫ್‌ಐ ಮನವಿ
ದೇವದುರ್ಗ: ಕಟ್ಟಡ ಕುಸಿತ ದುರಂತದಲ್ಲಿ ಮೃತಪಟ್ಟ ಮೂವರು ಯುವಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಆಡಳಿತಸೌಧದಲ್ಲಿ ತಹಸೀಲ್ದಾರ್ ನಾಗಮ್ಮ ಕಟ್ಟಿಮನಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಬುಧವಾರ ಮನವಿ ಸಲ್ಲಿಸಿತು.
ಉತ್ತಮ ಶಿಕ್ಷಣ ಪಡೆಯುವ ಕನಸಿನೊಂದಿಗೆ ಹಳ್ಳಿಗಳಿಂದ ಬಂದಿದ್ದ ವಿದ್ಯಾರ್ಥಿಗಳು, ಆಡಳಿತದ ನಿರ್ಲಕ್ಷೃ ಹಾಗೂ ಕಟ್ಟಡಗಳ ಸುರಕ್ಷತಾ ಲೋಪದಿಂದ ಜೀವ ಕಳೆದುಕೊಂಡಿದ್ದಾರೆ.
ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಮೃತಪಟ್ಟ ಯುವಕರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕಟ್ಟಡ ಮಾಲೀಕರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ನಿರ್ಲಕ್ಷೃ ತೋರಿದ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ಗಾಯಾಳುಗಳಿಗೆ ಉಚಿತ ಹಾಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು.
ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಅಥವಾ ಜೀವನೋಪಾಯಕ್ಕೆ ಸೂಕ್ತ ನೆರವು ನೀಡಬೇಕು. ಎಲ್ಲ ಹಳೇ ಹಾಗೂ ಶಿಥಿಲಗೊಂಡಿರುವ ಕಟ್ಟಡಗಳ ತುರ್ತು ಸುರಕ್ಷತೆ ಪರಿಶೀಲಿಸಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಜಿಲ್ಲಾ ಸಮಿತಿ ಸದಸ್ಯ ದಿಲ್‌ಶಾದ್, ಮುಖಂಡರಾದ ಶಿವು, ಅಭಿಷೇಕ್, ಸುನೀಲ್, ನಿಂಗಯ್ಯ ಸುಣ್ಣದಕಲ್, ಯಲ್ಲಪ್ಪ ಸುಣದಕಲ್, ಮಲ್ಲು ದೊಡ್ಡಮನಿ, ರಂಗನಾಥ , ಮಂಜುನಾಥ, ಶಿವಕುಮಾರ್ ಇತರರಿದ್ದರು.