ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು. ಎಸ್.ಶರವಣ, ಇಂಟೆಕ್ ರಾಜು, ರಾಜಶೇಖರ್, ಉಮೇಶ್ ಇತರರಿದ್ದರು.
- ಕಾಂಗ್ರೆಸ್‌ನ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ತ್ರಿವೇಣಿ
- ಸ್ವಾಭಿಮಾನಿ ಗಾಣಿಗರ ಸಂಘ
ಹುಣಸೂರು: ಒಗ್ಗಟ್ಟಿನ ಮಂತ್ರವೊಂದೇ ಸಮುದಾಯದ ಏಳಿಗೆಗೆ ದಾರಿ ಎಂದು ಕಾಂಗ್ರೆಸ್‌ನ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಂ.ತ್ರಿವೇಣಿ ಅಭಿಪ್ರಾಯಪಟ್ಟರು.
ತಾಲೂಕು ಸ್ವಾಭಿಮಾನಿ ಗಾಣಿಗರ ಸಂಘದಿಂದ ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ಅಭಿನಂದನಾ ಮತ್ತು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗಾಣಿಗ ಸಮಾಜ ತಾಲೂಕಿನಲ್ಲಿ ಒಂದಾಗಿ ಹೋರಾಡಿದಲ್ಲಿ ಮಾತ್ರ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಉತ್ತಮ ಜೀವನ ಸಿಗಲು ಸಾಧ್ಯ. ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಇಂದು ಸನ್ಮಾನಿತರಾಗುತ್ತಿರುವುದು ಹೆಮ್ಮೆಯ ವಿಚಾರ. ಭಾರತ ಪುರುಷ ಪ್ರಧಾನ ಸಮಾಜದಿಂದ ಮಹೀಳಾ ಪ್ರಧಾನ ಸಮಾಜವಾಗಬೇಕೆನ್ನುವುದೇ ನನ್ನ ಬಯಕೆ ಎಂದರು.
ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್, ಜಿಲ್ಲಾಧ್ಯಕ್ಷ ಉಮೇಶ್, ತಾಲೂಕು ಅಧ್ಯಕ್ಷ ಇಂಟೆಕ್ ರಾಜು. ಹುಣಸೂರು ನಗರಸಭೆ ಮಾಜಿ ಅಧ್ಯಕ್ಷ ಎಸ್.ಶರವಣ ಮಾತನಾಡಿದರು. ಮುಖಂಡರಾದ ಡಾ.ಪೂರ್ಣಿಮಾ, ದೇವರಾಜ ಒಡೆಯರ್, ತರೀಕಲ್ ರಾಜು, ಡಿ.ಕೆ.ಕುನ್ನೇಗೌಡ ಇತರರು ಹಾಜರಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ 75ಕ್ಕೂ ಹೆಚ್ಚು ಮಕ್ಕಳಿಗೆ ಗಣ್ಯರು ಪ್ರತಿಭಾ ಪುರಸ್ಕಾರ ವಿತರಿಸಿದರು.