ಶ್ರೀನಿವಾಸಪುರ communityತಾಲೂಕು ಹೊದಲಿ ಗ್ರಾಪಂ ವ್ಯಾಪ್ತಿಯ ದಾಸರ ತಿಮ್ಮನಹಳ್ಳಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನಾಗ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಬಿಜೆಪಿ ಮುಖಂಡ ಗುಂಜೂರು ಶ್ರೀನಿವಾಸ್ ರೆಡ್ಡಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಬಿಜೆಪಿ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಇದ್ದರು.
- ಮಾಜಿ ಸ್ಪೀಕರ್ ಕೆ.ಆರ್. ರಮೇಶ ಕುಮಾರ್ ಭರವಸೆ
ಶ್ರೀನಿವಾಸಪುರ: ದೇವಾಲಯ ನಿಮಾರ್ಣ ಆಗೋದು ಗ್ರಾಮಕ್ಕೆ ಒಳ್ಳೆಯದು. community ಜತೆಗೆ ಕಾಲಕಾಲಕ್ಕೆ ಪೂಜಾ ಕಾರ್ಯಕ್ರಮಗಳು ನಡೆಯುವುದು ಬಹಳ ಮುಖ್ಯವಾಗಿದೆ. ದೇವಾಲಯ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಮಾಡಿ ಸಮುದಾಯ ಭವನ ಮಂಜೂರು ಮಾಡಿಸಿಕೊಡಲಾಗುವುದು ಎಂದು ಮಾಜಿ ಸ್ಪೀಕರ್ ಕೆ.ಆರ್. ರಮೇಶ ಕುಮಾರ್ ಭರವಸೆ ನೀಡಿದರು.
ತಾಲೂಕಿನ ಹೊದಲಿ ಗ್ರಾಪಂ ವ್ಯಾಪ್ತಿಯ ದಾಸರ ತಿಮ್ಮನಹಳ್ಳಿಯಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ, ನಾಗ ಪ್ರತಿಷ್ಠಾಪನೆ ಶ್ರೀ ಸೀತಾರಾಮ ಉತ್ಸವಮೂರ್ತಿ, ಶ್ರೀ ಸೀತಾರಾಮ ಕಲ್ಯಾಣೋತ್ಸವ, ಹನುಮ ಜಯಂತಿಯಲ್ಲಿ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಸಮುದಾಯ ಭವನ ನಿಮಾರ್ಣ ಕಾರ್ಯ ಸರ್ಕಾರದಲ್ಲಿ ಮನವಿ ಮಾಡಿ ಹಣ ಮಂಜೂರು ಮಾಡಿಸಲಾಗುವುದು ಎಂದರು.
ಗ್ರಾಮದಲ್ಲಿ ಎಲ್ಲರೂ ಒಂದಾಗಿ ಧಾರ್ಮಿಕ ಕಾರ್ಯಕ್ರಮ ನಡೆಸುವುದು ಬಹಳ ಮುಖ್ಯ. ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಅವಕಾಶ ಮಾಡಿಕೊಡಬಾರದು. ಶೀಘ್ರ ಕೆ.ಸಿ ವ್ಯಾಲಿ ನೀರು ಈ ಭಾಗದ ಎಲ್ಲ ಕೆರೆಗಳಿಗೂ ತುಂಬಲಿದೆ. ಅಂತರ್ಜಲ ವೃದ್ಧಿಯಾಗುತ್ತದೆ ಜಮೀನುಗಳನ್ನು ಮಾರುವುದಕ್ಕೆ ಹೋಗಬೇಡಿ ಶ್ರಮವಹಿಸಿ ಕೃಷಿ ಚಟುವಟಿಕೆಗಳ ನಡೆಸಿ ಹೈನುಗಾರಿಕೆ ಅಭಿವೃದ್ಧಿ ಪಡಿಸಿಕೊಂಡು ಆರ್ಥಿಕವಾಗಿ ರೈತರು ಮುಂದೆ ಬರಬೇಕೆಂಬುದು ನನ್ನ ಆಶಯ ಎಂದು ತಿಳಿಸಿದರು.
ದೇವಾಲಯ ನಿಮಾರ್ಣಕ್ಕೆ 10 ಲಕ್ಷ ರೂ. ನೆರವು ನೀಡಿದ ಬೆಂಗಳೂರಿನ ವಿಜಯನಗರ ಶಾಸಕ ಕೃಷ್ಣಪ್ಪ ಅವರ ಪುತ್ರ ಪ್ರದಿಪ್ ಕೃಷ್ಣಪ್ಪ, ಯುವ ಮುಖಂಡರು ಸಮಾಜ ಸೇವಕರನ್ನು ಶ್ರೀ ಆಂಜನೇಯ ಸ್ವಾಮಿ ಸೇವಾ ಟ್ರಸ್ಟ್ನಿಂದ ಗೌರವಿಸಲಾಯಿತು.
ಶ್ರೀ ಆಂಜನೇಯಸ್ವಾಮಿ ಸೇವಾ ಟ್ರಸ್ಟಿನ ಅಧ್ಯಕ್ಷ ಶಂಕರ್ರೆಡ್ಡಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಮುಖಂಡ ಶ್ರೀನಿವಾಸ್ ರೆಡ್ಡಿ, ಮುರಳಿ ನಾಯಕ್ ಇದ್ದರು.