ಹೊಸಕೋಟೆ ತಾಲೂಕು ಮಾದರ ಮಹಾಸಭಾದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಗುಟ್ಟಳ್ಳಿ ವಿ ನಾಗರಾಜ್​ ಅವರನ್ನು ಜಿಲ್ಲಾಧ್ಯಕ್ಷ ಸುಬ್ಬರಾಜ್​ ಸನ್ಮಾನಿಸಿದರು. ನಾಗರಾಜ, ಎಂ. ಮುನಿರಾಜ್​, ಯಲ್ಲಪ್ಪ, ಕೃಷ್ಣಪ್ಪ, ಗಣೇಶ್​ ಇದ್ದರು. 
ರಾಜ್ಯ

ಸಮುದಾಯದ ಮಕ್ಕಳ ಸಾಕ್ಷರತೆಗೆ ಸಂಘಟನೆ / HOSAKOTE

ಹೊಸಕೋಟೆ : ಮಾದಿಗ ಸಮುದಾಯ ಹಿಂದುಳಿದ ಸಮುದಾಯ ಎಂಬ ಹಣೆ ಪಟ್ಟಿಯಿಂದ ಹೊರಬರಬೇಕಾದರೆ ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕೆಂಬ ಉದ್ದೇಶದಿಂದ ಸಂಟನೆಯನ್ನು ಸ್ಥಾಪಿಸಲಾಗಿದೆ ಎಂದು ಮಾದರ ಮಹಾ ಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಡಾ. ಎಚ್​. ಎಂ. ಸುಬ್ಬರಾಜ್​ ತಿಳಿಸಿದರು.
ನಗರದ ಖಾಸಗಿ ಸಭಾಂಗಣದಲ್ಲಿ ತಾಲೂಕು ಮಾದರ ಮಹಾ ಸಭಾದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದಾಯದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀೆಗಳಲ್ಲಿ ಭಾಗವಹಿಸಿ ಹಲವು ಸರ್ಕಾರಿ ಹುದ್ದೆಗಳಿಗೆ ಸಮುದಾಯದ ವಿದ್ಯಾರ್ಥಿಗಳು ಆಯ್ಕೆಯಾಗಬೇಕಿದ್ದು, ಅದಕ್ಕೆ ಬೇಕಾದ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದೇವನಹಳ್ಳಿ ಭಾಗದಲ್ಲಿ ಸುಮಾರು 11.5 ಎಕರೆ ಪ್ರದೇಶದಲ್ಲಿ ವಸತಿ ಶಾಲೆಯನ್ನು ಸಮುದಾಯದ ಮಕ್ಕಳಿಗಾಗಿ ನಿರ್ಮಿಸಲಾಗಿದೆ. ಈ ಮೂಲಕ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀೆ ತರಬೇತಿ ಕಾರ್ಯಾಗಾರ ನಡೆಸಲಾಗುವುದು, ಬಡ ವಿದ್ಯಾರ್ಥಿಗಳಿಗೆ ಊಟ, ವಸತಿ ಸಮೇತ ತರಬೇತಿ ನೀಡಿ ಉದ್ಯೋಗದೊಟ್ಟಿಗೆ ಅವರನ್ನು ಕಳುಹಿಸಲಾಗುವುದು ಎಂದರು.
ವಿಶೇಷ ಆಹ್ವಾನಿತ ಸದಸ್ಯ ವಿಜಯ್​ ಕುಮಾರ್​ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಮಹಾ ಸಭಾ ಹುಟ್ಟಿದೆ. ಅದರಲ್ಲೂ ಪೌರಕಾರ್ಮಿಕರ ಮಕ್ಕಳಿಗೆ ವಿಶೇಷ ಗಮನ ಹರಿಸಲಾಗುವುದು ಎಂದರು.
ಪದಾಧಿಕಾರಿಗಳ ನೇಮಕ : ತಾಲೂಕು ಅಧ್ಯಕ್ಷ ಗುಟ್ಟಳ್ಳಿ ವಿ. ನಾಗರಾಜ, ಗೌರವಾಧ್ಯಕ್ಷ ಡಿ. ಎಂ. ಮುನಿರಾಜ್​, ಡಿ. ಯಲ್ಲಪ್ಪ ಹಾಗೂ ಎಂ. ಗುರಪ್ಪ, ಉಪಾಧ್ಯಕ್ಷರಾದ ಎಸ್​. ವಿ. ಶ್ರೀನಿವಾಸ್​, ದೇವರಾಜ್​, ಕೆ.ಆರ್​.ಬಿ. ಶಿವಾನಂದ, ಮಂಜು ಸೂರ್ಯ, ಕಾರ್ಯದರ್ಶಿ ಕೆ. ನರಸಿಂಹಯ್ಯ, ಖಜಾಂಚಿ ಸಿ. ನಾರಾಯಣಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ. ನರಸಿಂಹಯ್ಯ, ರಮೇಶ್​, ಗೋಪಾಲ್​, ರಮೇಶ್​, ಗಣೇಶ್​, ಸುಮಿತ್ರಾ, ಎಂ. ರವಿ. ವಿಶೇಷ ಆಹ್ವಾನಿತ ಸದಸ್ಯರಾದ ಪೂಜಪ್ಪ, ಮೂರ್ತಿ, ಶಿವಾನಂದ್​, ರಮೇಶ್​, ನರಸಿಂಹಮೂರ್ತಿ, ಕಾನೂನು ಸಲಹೆಗಾರರಾಗಿ ಕೃಷ್ಣಪ್ಪ ಹಾಗೂ ಗಣೇಶ್​ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಯಿತು.