ದೇವನಹಳ್ಳಿ ತಾಲೂಕು ವೀರಶೈವ ಸಮಾಜದಿಂದ 2 ಕೋಟಿ ವೆಚ್ಚದಲ್ಲಿ ನಿಮಾರ್ಣವಾಗಲಿರುವ ನೂತನ ಕಟ್ಟಡ ಕಾಮಗಾರಿಗೆ ಬೆಳ್ಳಾವಿ ವೀರಸಿಂಹಾಸನ ಮಠದ ಶ್ರೀ ಮಹಂತ ಶಿವಾಚಾರ್ಯ ಸ್ವಾಮೀಜಿ ಭೂಮಿಪೂಜೆ ನೆರವೇರಿಸಿದರು. ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಸಿ.ಜಗನ್ನಾಥ್, ತಾಲೂಕು ವೀರಶೈವ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ಎಸ್.ನಾಗೇಶ್, ಮಹಾಸಭಾದ ರಾಜ್ಯ ಸಮಿತಿ ಸದಸ್ಯ ವಿರೂಪಾಕ್ಷ, ಜಿಲ್ಲಾ ಉಪಾಧ್ಯಕ್ಷ ಜಗದೀಶ, ನಳಿನ ಮಂಜುನಾಥ್, ಕಾರ್ಯದರ್ಶಿ ಶಾಂತಮೂರ್ತಿ, ತಾಲೂಕು ಮಹಿಳಾ ಅಧ್ಯಕ್ಷೆ ಶಶಿಕಲಾ ಮುಖಂಡರು ಇದ್ದರು.
ದೇವನಹಳ್ಳಿ : ತಾಲೂಕು ವೀರಶೈವ ಸಮಾಜದಿಂದ ನಾಲ್ಕು ಮಹಡಿಗಳ ನೂತನ ಕಟ್ಟಡವನ್ನು ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಸಮಾಜದ ದಾನಿಗಳು, ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ತಾಲೂಕು ವೀರಶೈವ ಸಂಘದ ಅಧ್ಯಕ್ಷ ಎಂ.ಎಸ್.ರಮೇಶ್ ಹೇಳಿದರು.
ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯ ನಿಸರ್ಗ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಮಾಜದ ಕಾರ್ಯಚಟುವಟಿಕೆಗಳಿಗೆ ಒಂದು ಸ್ವಂತ ಕಟ್ಟಡದ ಅವಶ್ಯಕತೆ ಇತ್ತು. ಸಮಾಜದ ಮುಖಂಡರು, ದಾನಿಗಳ ಸಹಾಯದಿಂದ ನಿವೇಶನ ಖರೀದಿಸಲಾಗಿತ್ತು. ಇದೀಗ ಕಟ್ಟಡ ನಿಮಾರ್ಣ ಕಾಮಗಾರಿಗೆ ಭೂಮಿಪೂಜೆ ನೆರವೇರಿದೆ. ಸಮುದಾಯದವರು ಇನ್ನಷ್ಟು ಸಹಕಾರ ನೀಡಿದರೆ ಕಟ್ಟಡ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯಲಿದೆ ಎಂದರು.
ಮುಖಂಡರಾದ ಎಂ.ಎಸ್.ಉಮೇಶ್, ಮಹದೇವಯ್ಯ, ಕಾಂತರಾಜ್, ನಾಗಭೂಷಣ್, ಮಂಜುನಾಥ್ ಶಿವಕುಮಾರ್ ಹಾಗೂ ಇತರರು ಇದ್ದರು.