ಫರಹತಾಬಾದ್​ ಗ್ರಾಮದ ವೆಂಕಟರಮಣ ದೇವಸ್ಥಾನದ ರಥೋತ್ಸವ, ದ್ವಾರಬಾಗಿಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್​ ಮಾತನಾಡಿದರು. ಕನಕಪ್ಪ ಜಾಧವ, ಕೇಶವ ಮೋಟಗಿ, ತಾಪಂ ಮಾಜಿ ಸದಸ್ಯ ನಾಗೇಂದ್ರಪ್ಪ ನಿಂಬರ್ಗಿ, ಗ್ರಾಪಂ ಮಾಜಿ ಸದಸ್ಯ ಚನ್ನಬಸಪ್ಪ ಸಜ್ಜನ ಇತರರಿದ್ದರು. 
ರಾಜ್ಯ

ಫರಹತಾಬಾದ್​ ಹೋಬಳಿ ಅಭಿವೃದ್ಧಿಗೆ ಬದ್ಧ

ಪ್ರಮುಖ ಮುಖ್ಯಾಂಶಗಳು

  • ವೆಂಕಟರಮಣ ದೇವಸ್ಥಾನದ ದ್ವಾರಬಾಗಿಲು ಉದ್ಘಾಟನೆ
ಕಲಬುರಗಿ: ಫರಹತಾಬಾದ್​ ಹೋಬಳಿಯ 26 ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್​ ಹೇಳಿದರು.
ತಾಲೂಕಿನ ಫರಹತಾಬಾದ್​ ಗ್ರಾಮದ ಶರಣ ನಗರದ ಶ್ರೀ ವೆಂಕಟರಮಣ ದೇವಸ್ಥಾನದ ರಥೋತ್ಸವದಲ್ಲಿ ಶನಿವಾರ ಪಾಲ್ಗೊಂಡು ದೇವಸ್ಥಾನದ ದ್ವಾರಬಾಗಿಲು, ಹೈಮಾಸ್ಟ್​ ದೀಪ ಉದ್ಘಾಟಿಸಿ ಮಾತನಾಡಿದರು.
ಅಫಜಲಪುರ ಶಾಸಕರ ನಿಧಿ ಅಡಿ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ವೆಂಕಟರಮಣ ದೇವಸ್ಥಾನದ ದ್ವಾರಬಾಗಿಲು ಮತ್ತು ಹೈಮಾಸ್ಟ್​ ವಿದ್ಯುತ್​ ದೀಪ ಅಳವಡಿಸಲಾಗಿದೆ. ಅಲ್ಲದೆ ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಶ್ರೀದಲ್ಲಿ ಕಾಮಗಾರಿ ಆರಂಭವಾಗಲಿದೆ. ಸ್ಥಳಿಯರಿಗೆ ತ್ವರಿತವಾಗಿ ಆರೋಗ್ಯ ಸೌಲಭ್ಯ ಸಿಗಲಿದೆ. ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುತ್ತಿದೆ. ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಸೋಮಶೇಖರ ಕಲಬುರಗಿ, ವೆಂಕಟರಮಣ ದೇವಸ್ಥಾನ ಸಮಿತಿ ಅಧ್ಯಕ್ಷ ಕನಕಪ್ಪ ಜಾಧವ, ಗೋ ಸಂರಕ್ಷಕ ಕೇಶವ ಮೋಟಗಿ, ತಾಪಂ ಮಾಜಿ ಸದಸ್ಯ ನಾಗೇಂದ್ರಪ್ಪ ನಿಂಬರ್ಗಿ, ಗ್ರಾಪಂ ಮಾಜಿ ಸದಸ್ಯ ಚನ್ನಬಸಪ್ಪ ಸಜ್ಜನ, ಕಾಂಗ್ರೆಸ್​ ಯುವ ಮುಖಂಡರಾದ ಶರಣು ಆವಂಟಿ, ಶರಣು ಸಜ್ಜನ, ಬಸವರಾಜ ಹಲಬುರ್ಗಿ, ಬಾಬು ಹಾಲಕಾಯಿ, ಬಾಬಾ, ಸುಬ್ರರಾವ್​ ಪಾಟೀಲ್​ ಇತರರಿದ್ದರು. ಈರಣ್ಣ ಸೋನಾರ ನಿರೂಪಿಸಿದರು. ಇದಕ್ಕೂ ಮುನ್ನ ಯುಗಾದಿ ಹಬ್ಬದ ಅಂಗವಾಗಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವ ಜರುಗಿತು.