ಶೆಟ್ಟಿಹಳ್ಳಿ ಗ್ರಾಮದಲ್ಲಿ 7 ಲಕ್ಷ ರೂ. ವೆಚ್ಚದ ಹೈಟೆಕ್ ಮಾದರಿಯ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಗೋವಿಂದರಾಜ್, ನಟರಾಜ್, ನವೀನ್ ಕುಮಾರ್, ಮಧು ಕುಮಾರ್, ರಾಮಸ್ವಾಮಿ, ರಂಗಣ್ಣ, ಇದ್ದರು.
ನುಗ್ಗೇಹಳ್ಳಿ: ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ 7 ಲಕ್ಷ ರೂ. ವೆಚ್ಚದ ಹೈಟೆಕ್ ಮಾದರಿಯ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಬುಧವಾರ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಗ್ರಾಮದ ಶಾಲಾ ಕೊಠಡಿಗಳ ರಿಪೇರಿ ಹಾಗೂ ಬಡಾವಣೆಗಳಿಗೆ ನಿರಂತರ ಜ್ಯೋತಿ ಯೋಜನೆ ಕಲ್ಪಿಸುವ ಭರವಸೆ ನೀಡಿದರು. ತಾಲೂಕು ಕಾಂಗ್ರೆಸ್ ಮುಖಂಡರಾಗಿದ್ದ ಕಬ್ಬಳಿ ರಂಗೇಗೌಡ ಅವರ ಪುತ್ರ ನಾಗೇಶ್ ಅವರ ಸ್ಮರಣಾರ್ಥಕವಾಗಿ ನಿರ್ಮಾಣ ಮಾಡಿರುವ ಸಮುದಾಯ ಭವನವನ್ನು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಲೋಕಾರ್ಪಣೆ ಮಾಡಿದ್ದಾರೆ. ಈ ಭಾಗದ ಹಳ್ಳಿಯ ರೈತರು ಶುಭ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಿ ಎಂದು ಮನವಿ ಮಾಡಿದರು.
ಗ್ರಾ.ಪಂ.ಮಾಜಿ ಸದಸ್ಯ ಗೋವಿಂದರಾಜು, ಇಂಜಿನಿಯರ್ ಸಿದ್ದೇಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ವಿಕ್ಟರ್, ನವೀನ್ ಕುಮಾರ್, ಮಧು ಕುಮಾರ್ ಮುಖಂಡರಾದ ಬಸವನಪುರ ರಾಮಸ್ವಾಮಿ, ಗಂಗಣ್ಣ, ನಟರಾಜ್, ಗೋವಿಂದೇಗೌಡ, ಚಾಕ್ಲೇಟ್ ರಂಗಣ್ಣ, ಬಾಬು, ಚಂದ್ರು, ಪಾಂಡುರಂಗ, ವೆಂಕಟೇಶ್ವರ ಸ್ವಾಮಿ ದೇವಾಲಯ ಸಮಿತಿ ಕಾರ್ಯದರ್ಶಿ ನಟರಾಜ್ ಇತರರಿದ್ದರು.