Committed to protecting the rights of graduates.
ವೇಮಗಲ್: ಶಿಕ್ಷಣ, ಉದ್ಯೋಗ, ಪದವೀಧರರ ಹಕ್ಕುಗಳ ಪರಿವರ್ತನೆಗಾಗಿ ಜತೆಗೆ ಯುವಜನರ ಭವಿಷ್ಯಕ್ಕಾಗಿ ಮತ ನೀಡಿದಲ್ಲಿ ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಆಗ್ನೇಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್ ಹೇಳಿದರು.
ನವೆಂಬರ್ ಮೊದಲನೇ ವಾರ ನಿಗದಿಯಾದ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಅಂಗವಾಗಿ ವೇಮಗಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಗಳವಾರ ಪ್ರಚಾರ ನಡೆಸಿ ಮಾತನಾಡಿದರು. ನಿಮ್ಮೆಲ್ಲರ ಒಗ್ಗಟ್ಟಿನ ಬೆಂಬಲ, ಆಶೀರ್ವಾದದಿಂದ ಜನಸೇವೆಗೆ ಮತ್ತಷ್ಟು ಶಕ್ತಿ ದೊರೆಯಲಿದೆ ಎಂದರು.
ಪ್ರಚಾರದ ವೇಳೆ ಪದವೀಧರರ ಸಮಸ್ಯೆಗಳು, ಉದ್ಯೋಗಾವಕಾಶಗಳ ವೃದ್ಧಿ, ಶಿಕ್ಷಣ ಕ್ಷೇತ್ರದ ಸುಧಾರಣೆ ಹಾಗೂ ಯುವಜನರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಭರವಸೆ ನೀಡಿದರು.
ಯೋಜನಾ ಪ್ರಾಧಿಕಾರದ ಸದಸ್ಯ ಬಿ.ನಾಗರಾಜ್, ಕಾಂಗ್ರೆಸ್ ಯುವ ಮುಖಂಡರಾದ ವೀರೇಂದ್ರ ಪಾಟೀಲ್, ವಿ.ಎನ್.ಸಂದೀಪ್, ನಾಗರಾಜ್ , ಬರ್ಖತ್ ವುಲ್ಲಾ ಖಾನ್ ಇತರರು ಇದ್ದರು.