ಕೆಂಭಾವಿಯ ಉತ್ತರಾದಿ ಮಠದಲ್ಲಿ ಸೋಮವಾರದಿಂದ ಆರಂಭವಾದ ಅಧಿಕ ಮಾಸದ ವಿಶೇಷ ಧಾರ್ಮಿಕ ಶಿಬಿರದಲ್ಲಿ ಮಣ್ಣೂರ ವೇದೇಶ ಸಂಸತ ವಿದ್ಯಾಪಿಠದ ಉಪ ಕುಲಪತಿ ಪಂ.ಸರ್ವೇಶಾಚಾರ್ಯ ಅಕಮಂಚಿ ಜತೆ ಶಿಬಿರಾರ್ಥಿಗಳು.
- ಉಪ ಕುಲಪತಿ ಪಂ.ಅಕಮಂಚಿತ ಸಲಹೆ
- ಕೆಂಭಾವಿಯಲ್ಲಿ ಅಧಿಕ ಮಾಸದ ಕಾರ್ಯಕ್ರಮ
ಕೆಂಭಾವಿ: ಸನಾತನ ಹಿಂದೂ ಧರ್ಮ ರಕ್ಷಣೆಗೆ ಪ್ರತಿಯೊಬ್ಬರೂ ಬದ್ಧರಾಗುವ ಮೂಲಕ ತಮ್ಮ ತಮ್ಮ ಸಂಸತಿ, ಸಂಪ್ರದಾಯ, ಗುರುಗಳ&ಭಗವಂತನ ಮೇಲೆ ಸದಾ ಭಕ್ತಿ ಇರಿಸಬೇಕು ಎಂದು ಮಣ್ಣೂರ ವೇದೇಶ ಸಂಸತ ವಿದ್ಯಾಪಿಠದ ಉಪ ಕುಲಪತಿ ಪಂ.ಸರ್ವೇಶಾಚಾರ್ಯ ಅಕಮಂಚಿ ಹೇಳಿದರು.
ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತಿರ್ಥರ ಆೆಯ ಅನುಸಾರ ಕೂಡಲಿ ರುವಿಜಯತೀರ್ಥ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಅಧಿಕ ಮಾಸ ನಿಮಿತ್ತ ಪಟ್ಟಣದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡ ಏಳು ದಿನಗಳ ಧಾರ್ಮಿಕ ಶಿಬಿರದ ನೇತೃತ್ವ ವಹಿಸಿ ಸೋಮವಾರ ಮಾತನಾಡಿದದರು.
ಧರ್ಮ ಜಾಗೃತಿ, ದೇಶ ಭಕ್ತಿ, ಸನಾತನ ಹಿಂದೂ ಧರ್ಮದ ರಕ್ಷಣೆಯ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕಾದರೆ ಮೊದಲು ನಮ್ಮ ಧರ್ಮದ ಆಚರಣೆಯನ್ನು ನಾವು ಚಾಚೂ ತಪ್ಪದೆ ಪಾಲಿಸಬೇಕು. ದೇಶದ ಜನರ ರಕ್ಷಣೆಗೆ ಗಡಿಯಲ್ಲಿ ಕಾಯಲು ನಮ್ಮ ಸೈನಿಕರು ಹಗಲಿರುಳು ಶ್ರಮ ವಹಿಸಿದಂತೆ ನಮ್ಮ ನಮ್ಮ ಧರ್ಮ ರಕ್ಷಣೆ ಮಾಡಲು ನಮ್ಮ ಸಂಸತಿಯನ್ನು ಮೇಲೆತ್ತರಕ್ಕೆ ಒಯ್ಯಲು ನಾವೂ ಹಗಲಿರುಳು ಕಂಕಣಬದ್ಧರಾಗಿ ನಿಲ್ಲಬೇಕು ಎಂದು ಮಾರ್ಮಿಕವಾಗಿ ನುಡಿದರು.
ಈಗ ಅಧಿಕ ಮಾಸದ ಸಂಭ್ರಮ. ಅಧಿಕಸ್ಯ ಅಧಿಕಂ ಫಲಂ ಎಂಬಂತೆ ಈ ಮಾಸದಲ್ಲಿ ನಾವು ಮಾಡುವ ಪ್ರತಿಯೊಂದು ಉತ್ತಮ ಕಾರ್ಯಗಳು ಭಗವಂತನಿಗೆ ಅರ್ಪಿತವಾಗುತ್ತವೆ. ಈ ಮಾಸದಲ್ಲಿ ವಿಶೇಷವಾಗಿ ದಾನ, ಜಪ, ಅನುಷ್ಠಾನ, ಭಾಗವತ ಶ್ರವಣ, ಗುರುಗಳ ಸೇವೆ, ಭಗವಂತನ ಚಿಂತನ ಮಾಡಬೇಕು. ಪೂಜ್ಯ ಶ್ರೀಗಳ ಆೆ ಹಾಗೂ ಅವರ ಆಶೀರ್ವಾದದಿಂದ ಇಲ್ಲಿ ಧಾರ್ಮಿಕ ಶಿಬಿರ ಏರ್ಪಡಿಸಿದ್ದು ಇದರ ಲಾಭ ಪಡೆದು ಎಲ್ಲರೂ ಸನಾತನ ಸಂಸತಿ ರಕ್ಷಣೆಗೆ ಮುಂದಾಗುವಂತೆ ಕರೆ ನೀಡಿದರು.
ನಂತರ ಶ್ರೀ ರುವಿಜಯತೀರ್ಥರಿಂದ ಸತ್ಯನಾರಾಯಣ ದೇವರಿಗೆ, ಸುಮಧ್ವ ಮಾರುತಿ ಮತ್ತು ಯತಿಚತುಷ್ಠಯ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಸಂಸ್ಥಾನ ಪೂಜೆ, ಸಂಜೆ ಆಶೀರ್ವಚನ ನಡೆಯಿತು. ಹಣಮಂತ್ರಾವ ಕುಲಕರ್ಣಿ ಅವರಿಂದ ಅನ್ನ ಸಂತರ್ಪಣೆ ನಡೆಯಿತು. ಜಯಸತ್ಯಪ್ರಮೋದ ಸೇವಾ ಸಂದ ಪದಾಧಿಕಾರಿಗಳು, ಸತ್ಯಪ್ರಮೋದ ಯುವ ಸೇನೆ, ಪ್ರಮೋದಿನ ಮಹಿಲಾ ಭಜನಾ ಮಂಡಳಿ ಪದಾಧಿಕಾರಿಗಳಿದ್ದರು.