ಹುಮನಾಬಾದ್ ತಾಲೂಕಿನ ಮಾಣಿಕನಗರದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸೋಮವಾರ ಕರೆದಿದ್ದ ಸಭೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಜಗನ್ನಾಥ ಹಲಮಡಗಿ ಉದ್ಘಾಟಿಸಿದರು. ಬಸವಕುಮಾರ ಪಾಟೀಲ್, ಲಿಂಗರಾಜ ಅರಸ್, ವಿಠ್ಠಲ ಸೇಡಂಕರ ಇತರರಿದ್ದರು.
- ಆಯೋಗ ಸದಸ್ಯ ಡಾ.ಜಗನ್ನಾಥ ಹಲಮಡಗಿ ಅಭಯ
- ಮಾಣಿಕನಗರದಲ್ಲಿ ಸಭೆ
ಹುಮನಾಬಾದ್: ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಮಕ್ಕಳ ಸುರಕ್ಷತೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬದ್ಧವಾಗಿದೆ ಎಂದು ಆಯೋಗದ ಸದಸ್ಯ ಡಾ. ಜಗನ್ನಾಥ ಹಲಮಡಗಿ ಹೇಳಿದರು.
ಮಾಣಿಕನಗರದ ಮಾಣಿಕ್ಯ ಸೌಧದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸೋಮವಾರ ಕರೆದಿದ್ದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ, ಬಿಸಿಯೂಟ ಸೇರಿ ಮಕ್ಕಳಿಗೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿ ಅಧಿಕಾರಿಗಳು ಹಾಗೂ ಶಾಲಾ ಮುಖ್ಯಸ್ಥರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಆಯೋಗದ ಸದಸ್ಯ ವೆಂಕಟೇಶ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಆರ್ಟಿಇ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೇರಿ ವಿವಿಧ ಕಾಯ್ದೆಗಳ ಕುರಿತು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ್, ಸಮಾಜ ಕಲ್ಯಾಣಾಧಿಕಾರಿ ಲಿಂಗರಾಜ ಅರಸ್, ಬಿಸಿಎಂ ಅಧಿಕಾರಿ ವಿಠ್ಠಲ ಸೇಡಂಕರ, ಸಿಡಿಪಿಒ ಹಿರೇಮಠ, ತಾಲೂಕು ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ, ಎಸ್ಟಿ ಇಲಾಖೆ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ತಾಪಂ ಇಒ ದೀಪಿಕಾ ನಾಯ್ಕ ಇತರರಿದ್ದರು. ಮಾಣಿಕ ಪ್ರಭು ಹಿಂದಿ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ನಾಡಗೀತೆ ನಡೆಸಿಕೊಟ್ಟರು. ಮಲ್ಲಪ್ಪ ಜಗಜೀವಣಿ ನಿರೂಪಣೆ ಮಾಡಿದರು. ಕಿರಣ ಕುಲಕರ್ಣಿ ವಂದಿಸಿದರು.