ಯಡ್ರಾಮಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ ಅಧ್ಯಕ್ಷತೆಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಅನೀಲಕುಮಾರ ಮಾನಪಡೆ, ಚಿದಾನಂದ ಆಶಾಳ ಇದ್ದರು.
- ಮಲ್ಲಿಕಾರ್ಜುನ ಹಲಕರ್ಟಿ ಅಭಿಮತ
- ಯಡ್ರಾಮಿಯಲ್ಲಿ ಪ್ರಗತಿ ಪರಿಶೀಲನಾ ಸಭೆ
ಯಡ್ರಾಮಿ: ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ಸದಸ್ಯರ ಜತೆಗೆ ಅಧಿಕಾರಿಗಳು ಕಾಳಜಿ ವಹಿಸಿದರೆ ಫಲಾನುಭವಿಗಳಿಗೆ ಯೋಜನೆ ಲಾಭ ದೊರೆಯುಲಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಅಧಿಕಾರಿಗಳು ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಪರಿಶೀಲನೆ ವೇಳೆ ಲೋಪಗಳು ಕಂಡು ಬಂದಲ್ಲಿ ಸಮಿತಿಗೆ ಮಾಹಿತಿ ನೀಡಿ ಸಮನ್ವಯದಿಂದ ಕೆಲಸ ಮಾಡಬೇಕು. ಸಭೆಗೆ ಗೈರಾದ ಸಾರಿಗೆ ಇಲಾಖೆ ಜೇವರ್ಗಿ ಮುಖ್ಯಸ್ಥರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
ವಿಬಿ&ಜಿ ರಾಮ್ ಜಿ ಸಹಾಯಕ ನಿರ್ದೇಶಕ ಅನೀಲಕುಮಾರ ಮಾನಪಡೆ, ಪಂಚಾಯತ್ರಾಜ್ ಸಹಾಯಕ ನಿರ್ದೇಶಕ ಚಿದಾನಂದ ಆಶಾಳ, ಗ್ಯಾರಂಟಿ ಸಮಿತಿ ಸದಸ್ಯರಾದ ಮಹಿಬೂಬ್ ಮನಿಯಾರ್, ಕಾವೇರಿ ಮಾಲಿಪಾಟೀಲ್, ಇಸ್ಮಾಯಿಲ್ ಇಜೇರಿ, ಸೈದಪ್ಪ ಇಜೇರಿ, ನಾನಾಗೌಡ ಯಲಗೋಡ, ಸಿದ್ದು ಹಿರೇಗೌಡ, ಮಹಾಂತಪ್ಪ ದೊರಿ, ಹಸನ್ಪಟೇಲ್ ಬಿಳವಾರ, ಭೀಮಣ್ಣ ಪೂಜಾರಿ, ಹಣಮಂತರಾಯ ಹೆಡಗಿಜೋಳ, ವಿರೇಶ ಕುಂಬಾರ ಇತರರಿದ್ದರು.