ಹೊಸಪೇಟೆಯಲ್ಲಿ ಸಮಾನತೆ ವೇದಿಕೆಯಿಂದ ಆಯೋಜಿಸಲಾಗಿದ್ದ ಬುದ್ಧ, ಬಸವ, ಅಂಬೇಡ್ಕರ್ ಜಯಂತ್ಯುತ್ಸವವನ್ನು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮದ್ ಇಮಾಮ್ ನಿಯಾಜಿ ಉದ್ಘಾಟಿಸಿದರು. ಪ್ರಾಂಶುಪಾಲ ಡಾ.ಟಿ.ಎಚ್.ಬಸವರಾಜ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ, ಜಿಲ್ಲಾ ಪ್ರಭಾರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಧರ್ಮನಗೌಡ ಇತರರಿದ್ದರು.
- ಹುಡಾ ಅಧ್ಯಕ್ಷ ಎಚ್.ಎನ್.ಮೊಹಮದ್ ಇಮಾಮ್ ನಿಯಾಜಿ ಸಲಹೆ
ಹೊಸಪೇಟೆ: ಭಗವಾನ್ ಬುದ್ಧ, ಸಮಾನತೆಯ ಹರಿಕಾರ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಈ ದೇಶ ಕಂಡ ಮಹಾನ್ ಪುರುಷರಾಗಿದ್ದು, ಸಮ ಸಮಾಜ ನಿರ್ಮಾಣಕ್ಕೆ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲ ಸಾಗಬೇಕಿದೆ ಎಂದು ಹುಡಾ ಅಧ್ಯಕ್ಷ ಎಚ್.ಎನ್.ಮೊಹಮದ್ ಇಮಾಮ್ ನಿಯಾಜಿ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಸೋಮವಾರ ಸಮಾನತೆ ವೇದಿಕೆ ವತಿಯಿಂದ ಆಯೋಜಿದ್ದ ಬುದ್ಧ-ಬಸವ-ಅಂಬೇಡ್ಕರ್ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಧರ್ಮದವರು ಒಂದೇ ತಾಯಿಯ ಮಕ್ಕಳಿದ್ದಂತೆ. ಪ್ರತಿಯೊಬ್ಬರೂ ಮಾನವರಾಗುವುದರೊಂದಿಗೆ ಸೌಹಾರ್ದದ ಸಂದೇಶ ಸಾರಬೇಕಾಗಿದೆ ಎಂದರು.
ಕೊಪ್ಪಳ ಜಿಲ್ಲೆ ಹಿಟ್ನಾಳ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಚ್.ಬಸವರಾಜ ಮಾತನಾಡಿ, ಮೇಲ್ವರ್ಗದಲ್ಲಿ ಜನಿಸಿದ ಬಸವಣ್ಣ ದಮನಕ್ಕೊಳಗಾದವರು ಧ್ವನಿಯಾಗಿ ಬೀದಿಗೆ ಬಂದರು. ಅನುಭವ ಮಂಟಪ ಕನ್ನಡದ ಮೊದಲ ಶಾಲೆ ಹಾಗೂ ಮೊದಲ ವಿವಿ, ಬಸವಣ್ಣ ಅವರು ಮೊದಲ ಶಿಕ್ಷಕರಾಗಿ ಗುರುತಿಸಿಕೊಳ್ಳುತ್ತಾರೆ ಎಂದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಗುಜ್ಜಲ ನಾಗರಾಜ, ಜಿಲ್ಲಾ ಪ್ರಭಾರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಧರ್ಮನಗೌಡ, ಸಾಹಿತಿ ಪೀರ್ ಬಾಷಾ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರಿ, ಪ್ರಮುಖರಾದ ನೂರ್ ಜಹಾನ್, ಶೈನಾಜ್ ಬೇಗಂ, ಎಂ.ಸಿ.ವೀರಸ್ವಾಮಿ, ಗೋಸಲ ಭರಮಪ್ಪ, ನಿಂಬಗಲ್ ರಾಮಕೃಷ್ಣ ಇತರರಿದ್ದರು.