College student jumps into Sankey Tank in Bengaluru  
ರಾಜ್ಯ

ಸ್ಯಾಂಕಿ ಕೆರೆಯಲ್ಲಿ 20 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ; ಪ್ರಿಯಕರನಿಗೆ ಸಾಯೋದಾಗಿ ಕೊನೇ ಮೆಸೇಜ್​​ ಮಾಡಿದ್ದ ಯುವತಿ..Bengaluru

ಪ್ರಮುಖ ಮುಖ್ಯಾಂಶಗಳು

  • ಸ್ಯಾಂಕಿ ಟ್ಯಾಂಕ್​​ ಕೆರೆಗೆ ಹಾರಿ ಸೂಸೈಡ್​ ಮಾಡಿಕೊಂಡ ಯುವತಿ.
  • ಪ್ರಿಯಕರನಿಗೆ ಸಾಯೋದಾಗಿ ಮೆಸೇಜ್​ ಮಾಡಿ ಆತ್ಮಹತ್ಯೆ.
  • 20 ವರ್ಷದ ತೇಜು ತಾಯಿಯೊಂದಿಗೆ ವಾಸವಾಗಿದ್ದಳು.
ಬೆಂಗಳೂರು: ಇಲ್ಲಿನ ಮಲ್ಲೇಶ್ವರಂ ಸ್ಯಾಂಕಿ ಕೆರೆಯಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪ್ರೀತಿ ಹಾಗೂ ಪೋಷಕರ ಡೈವೋರ್ಸ್​​​​​ನಿಂದ ನೊಂದು ಈ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ತೇಜು ಆತ್ಮಹತ್ಯೆ

ಮೃತ ಯುವತಿಯನ್ನು ತೇಜು ಎಂದು ಗುರುತಿಸಲಾಗಿದೆ. ತೇಜು ತೇಜು ತಾಯಿ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ವರ್ಷದಿಂದ ಪತಿಯಿಂದ ಡಿವೋರ್ಸ್​ ಪಡೆದುಕೊಂಡಿದ್ದರು ಎನ್ನಲಾಗಿದೆ. ಆಕೆ ಚಿಕ್ಕಬಾಣಾವರ ಚಿಕ್ಕಬಾಣಾವರ ಸಮೀಪದ ಕಾಲೇಜಿನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದರು ಎನ್ನಲಾಗಿದೆ.

ಸಾಯುವ ಮುನ್ನ ಮೆಸೇಜ್

ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪ್ರಿಯಕರನಿಗೆ ಸಾಯುವ ಬಗ್ಗೆ ಮೆಸೇಜ್​ ಮಾಡಿದ್ದಳು. ಆ ಬಗ್ಗೆ ಆತ ತೇಜು ತಾಯಿಗೆ ಫಾರ್ವಡ್​​ ಮಾಡಿ ವಿಷಯ ಮುಟ್ಟಿಸಿದ್ದ ಎಂದು ಹೇಳಲಾಗಿದೆ. ನಂತರ ಆಕೆ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಳು. ಆಕೆಗಾಗಿ ಹುಡುಕಾಟ ನಡೆಸುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನುವುದು ತಿಳಿದುಬಂದಿದೆ.
ಸೋಮವಾರ ರಾತ್ರಿ ಸ್ಯಾಂಕಿ ಕೆರೆ ಬಳಿ ಒಬ್ಬಳೆ ಬಂದಿದ್ದಾಳೆ. ಅಲ್ಲಿ ಯಾರು ಇಲ್ಲದ್ದನ್ನು ತಿಳಿದು, ಕೆರೆಗೆ ಹಾರಿ ಸಾವನ್ನಪ್ಪಿದ್ದಾಳೆ. ಮಂಗಳವಾರ ಮೃತದೇಹ ತೇಲುತ್ತಿರುವುದನ್ನು ಕಂಡ ಸ್ಥಳೀಯರು ಹಾಗೂ ವಾಕಿಂಗ್​​​ಗೆ ಬಂದ ಜನರು ಪೊಲೀಸರಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪೋಷಕರಿಗೆ ಮಾಹಿತಿ

ಸದ್ಯ ಘಟನಾ ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆ ಬೆನ್ನಲ್ಲೇ ಯುವತಿಯ ಪೋಷಕರಿಗೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಬಂದ ತೇಜು ತಾಯಿಯ ರಕ್ತಸಂಬಂಧಿಯ ಗೋಳಾಟ ಮುಗಿಲು ಮುಟ್ಟಿತ್ತು.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತೇಜು ಅವರ ಪೋಷಕರು, ಸಂಬಂಧಿಕರು ಹಾಗೂ ಪ್ರಿಯಕರನಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ ತಂಡವನ್ನು ಕರೆಸಲಾಗಿದ್ದು, ಇದು ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಕಾರಣವಿದೆಯೇ ಎಂಬುದರ ಕುರಿತು ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ, (ಏಜೆನ್ಸೀಸ್).