ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ 
ರಾಜ್ಯ

ಕಠಿಣ ಪರಿಶ್ರಮದಿಂದ ಉನ್ನತ ಹುದ್ಧೆ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಪರಿಶ್ರಮದಿಂದ ಯಶಸ್ವಿ ಸಾಧ್ಯ
  • ಚಿಕ್ಕೋಡಿ ಪಿಎಸ್ಐ ರೂಪಾ ಗುಡೋಡಗಿ ಅಭಿಪ್ರಾಯ
  • ವಾರ್ಷಿಕೋತ್ಸವ ಸಮಾರಂಭ
ಕಠಿಣ ಪರಿಶ್ರಮದಿಂದ ಉನ್ನತ ಹುದ್ದೆಗೆರಲು ಸಾಧ್ಯ
| ಪಿಎಸ್‌ಐ ರೂಪಾಲಿ ಗುಡೋಡಗಿ ಅಭಿಮತ | ಬಿಳ್ಕೋಡುವ ಸಮಾರಂಭ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ವಿದ್ಯಾರ್ಥಿಗಳು ನಿರಂತರ ಅಧ್ಯಯನದೊಂದಿಗೆ ಕಠಿಣ ಪರಿಶ್ರಮಪಟ್ಟರೆ ಉನ್ನತ ಹುದ್ದೆಗೆರಲು ಸಾಧ್ಯ ಎಂದು ಪಟ್ಟಣದ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ರೂಪಾಲಿ ಗುಡೋಡಗಿ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನು ವಿದ್ಯಾರ್ಥಿಗಳು ಭವಿಷ್ಯದ ವಕೀಲರಾಗಿದ್ದರೆ, ದೇಶದ ಅಭಿದ್ದಿಗೆ ವಕೀಲರ ಪಾತ್ರ ಮಹತ್ವದ್ದಾಗಿತ್ತು, ವೃತ್ತಿಯೊಂದಿಗೆ ಸಾಮಾಜಿಕ ಸೇವೆಯನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ಸೂಚನೆ.
ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎಂ ಆರ್ ಸಾಗರೆ ಮಾತನಾಡಿ ವಕೀಲ ವೃತ್ತಿಯಲ್ಲಿ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿತ್ತು , ಕಾನೂನು ಪದವಿಯಿಂದ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಸಹ ವಿಪುಲ ಅವಕಾಶಗಳಿವೆ ಎಂದು ಮಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ದೀಪಾಲಿ ಪಾಟೀಲ ಪ್ರಾಸ್ತಾವಿಕವಾಗಿ ಕಾರಣ.
ಪ್ರೊ.ಎಸ್. ಡಿ.ಖಾಜಿ,ಡಾ.ವಿ.ಎಸ್.ಬೀಳಗಿ, ಪ್ರೊ.ಎಸ್. ಬಿ.ನಾಗರಾಳೆ, ಪ್ರೊ.ಮೇಘಾ ಶೆಟ್ಟಿ, ಪ್ರೊ.ಗಂಗಾ ಗೋಲಶೆಟ್ಟಿ, ವಕೀಲರಾದ ತಾನಾಜಿ ಕದಮ,ಡಾ.ಎಸ್. ಡಿ ಶಿರಹಟ್ಟಿ ,ಲೋಹಿತ ನರವಾಡೆ, ಸೋಮಶೇಖರ ಬಾಡಕರ ಇತರರಿದ್ದರು.