ನೀಟ್​ ಪರೀಕ್ಷೆಗೆ ಸಂಬಂಧಿಸಿದಂತೆ ಕಲಬುರಗಿ ಡಿಸಿ ಕಚೇರಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಾತನಾಡಿದರು. ಅಡ್ಡೂರು ಶ್ರೀನಿವಾಸಲು, ರಾಯಪ್ಪ ಹುಣಸಗಿ, ಶಾಲೂ ಇತರರಿದ್ದರು. 
ರಾಜ್ಯ

ಭಾರಿ ಕಟ್ಟುನಿಟ್ಟಿಗೆ ಜಿಲ್ಲಾಧಿಕಾರಿ ಸೂಚನೆ

ಪ್ರಮುಖ ಮುಖ್ಯಾಂಶಗಳು

  • ನೀಟ್​ ಪರೀಕ್ಷೇ 21ರಂದು
ಕಲಬುರಗಿ: ವೈದ್ಯಕಿಯ ಕೋರ್ಸ್​ ಪ್ರವೇಶಕ್ಕೆ ನೀಟ್​ ಮರು ಪರೀಕ್ಷೆ ಜೂನ್​ 21ರಂದು ನಡೆಯಲಿದ್ದು, ಯಾವುದೇ ಹಂತದಲ್ಲೂ ಲೋಪವಾಗದಂತೆ, ಸುಸೂತ್ರ ಹಾಗೂ ಕಟ್ಟುನಿಟ್ಟಾಗಿ ನಡೆಸುವಂತೆ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಮತ್ತು ಪರೀಕ್ಷೆ ಕೇಂದ್ರದ ಮುಖ್ಯಸ್ಥರೊಂದಿಗೆ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಸುಮಾರು 20 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಸುಮಾರು 9 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪರೀೆ ಬರೆಯಲು ಹೆಸರು ನೋಂದಾಯಿಸಿದ್ದಾರೆ ಎಂದರು.
ಪರೀೆಗೆ ಮುನ್ನವೆ ನಿಗದಿತ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ, ಅಭ್ಯರ್ಥಿ ಬರೆಯಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ, ವಿದ್ಯುತ್​, ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಲಭ್ಯ ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತ 200 ಮೀಟರ್​ ಪ್ರದೇಶ ನಿಷೇದಾೆ ಇರಲಿದ್ದು, ಎಲ್ಲಿಯೂ ಅಕ್ರಮಕ್ಕೆ ಅವಕಾಶವಿಲ್ಲ. ಪೊಲೀಸ್​ ಇಲಾಖೆ ಕೇಂದ್ರಗಳ ಸುತ್ತ ಹೆಚ್ಚಿನ ಭದ್ರತೆ ಒದಗಿಸಬೇಕು. ವಿದ್ಯಾರ್ಥಿಗಳು ಮೊಬೈಲ್​ ಸೇರಿ ಯಾವುದೇ ಎಲೆಕ್ಟ್ರಾನಿಕ್​ ಉಪಕರಣ ಪರೀಕ್ಷೆ ಕೇಂದ್ರಕ್ಕೆ ತರುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್​ಪಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಶಾಲೂ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರ್​ ಐ.ಎ.ಎಸ್​. ಅಧಿಕಾರಿ ಶಿಖರ್​ ಮೋಘಾ, ಪರೀೆಯ ನಗರ ಸಂಯೋಜಕ, ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಭೂಪೇಂದ್ರ, ವಿ.ಟಿ.ಯು ಪ್ರಾಧ್ಯಾಪಕ ಶಂಭುಲಿಂಗ ಸೇರಿ ಇತರರಿದ್ದರು.