Collection of customer information is mandatory.
ಲಾಡ್ಜ್ ಹೋಟೆಲ್ ಮಾಲೀಕರಿಗೆ ಪೊಲೀಸ್ ಎಚ್ಚರಿಕೆ
ಗೌರಿಬಿದನೂರು : ಲಾಡ್ಜ್ ಮತ್ತು ಹೋಟೆಲ್ ಮಾಲೀಕರು ಕಡ್ಡಾಯವಾಗಿ ಕೊಠಡಿಗಳನ್ನು ಬಾಡಿಗೆ ಪಡೆಯುವವರ ಗುರುತಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಬೇಕು ಎಂದು ಸಿಪಿಐ ಅಂಜನ್ ಕುಮಾರ್ ತಿಳಿಸಿದರು.
ನಗರ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಲಾಡ್ಜ್ ಮಾಲೀಕರ ಸಭೆಯಲ್ಲಿ ಮಾತನಾಡಿ, ಸುರಕ್ಷತೆ ದೃಷ್ಠಿಯಿಂದ ಪ್ರವೇಶದ್ವಾರ, ಕಾರಿಡಾರ್ ಸೇರಿ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು. ಸುರಕ್ಷತೆ ಹಾಗೂ ನಿಯಮಾವಳಿಗಳನ್ನು ಉಲ್ಲಂಸಿದರೆ ಲೈಸೆನ್ಸ್ ರದ್ದುಪಡಿಸುವುದು ಸೇರಿ ಕ್ರಮ ಎದುರಿಸಬೇಕಾಗುತ್ತದೆ ಎಂದರು.
ನಗರ ಪೊಲೀಸ್ ಠಾಣೆ ಪಿಎಸ್ಐ ವರಲಕ್ಷ್ಮಿ ಮಾತನಾಡಿ, ಲಾಡ್ಜ್ಗೆ ಬರುವ ಪ್ರತಿಯೊಬ್ಬ ಗ್ರಾಹಕರಿಂದ ಆಧಾರ್ ಕಾರ್ಡ್ ಅಥವಾ ಇತರ ಅಧಿಕೃತ ಗುರುತಿನ ಚೀಟಿಯ ಪ್ರತಿ ಪಡೆಯಬೇಕು. ಕಾನೂನುಬಾಹಿರ ಚಟುವಟಿಕೆಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡುವುದು ಅಪರಾಧ. ಅಪರಾಧಿಗಳು ಅಥವಾ ಶಂಕಿತ ವ್ಯಕ್ತಿಗಳು ತಂಗಿದ್ದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.
ಅಪರಾಧ ವಿಭಾಗದ ಪಿಎಸ್ಐ ಲಲಿತಮ್ಮ, ಪೇದೆಗಳಾದ ಕುಮಾರ್ ನಾಯಕ್, ಮಂಜು, ಸುಬ್ರಮಣಿ ಇದ್ದರು.