ಹೊಸಕೋಟೆಯ ಪಶು ಇಲಾಖೆಯಲ್ಲಿ ಆಯೋಜಿಸಿದ್ದ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಪಶು ಸಖಿಯರಿಗೆ ಶಾಸಕ ಶರತ್ ಬಚ್ಚೇಗೌಡ ಸಮವಸ್ತ್ರ ವಿತರಿಸಿದರು. ಬಮುಲ್ ನಿರ್ದೇಶಕ ಬಿ.ವಿ. ಸತೀಶ್ ಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿ, ದಿ ಟೌನ್ ಬ್ಯಾಂಕ್ ಅಧ್ಯಕ್ಷ ಬಲ್ಪ್ ಮಂಜುನಾಥ್, ಉಪಾಧ್ಯಕ್ಷ ಅಕ್ಬರ್ ಪಾಷಾ ಇದ್ದರು.
ಹೊಸಕೋಟೆ : ತಾಲೂಕಿನ ಜಡಿಗೇನಹಳ್ಳಿ ಬಳಿ 10 ಮೆಟ್ರಿಕ್ ಟನ್ ಸಾಮರ್ಥ್ಯದ ಹಣ್ಣು ಮತ್ತು ತರಕಾರಿ ಸಂಗ್ರಹಕ್ಕೆ 50 ಕೋಟಿ ರೂ. ವೆಚ್ಚದಲ್ಲಿ ನೂತನ ಕೋಲ್ಡ್ ಸ್ಟೋರೇಜ್ ನಿರ್ಮಿಸುವ ಮೂಲಕ ಹಣ್ಣು ತರಕಾರಿಗಳನ್ನು ದೀರ್ ಕಾಲ ಉಳಿಯುವಂತೆ ಮಾಡುವ ಯೋಜನೆ ಶ್ರೀ ಜಾರಿಗೊಳಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ನಗರದ ಪಶುಸಂಗೋಪನಾ ಇಲಾಖೆ ಆವರಣದಲ್ಲಿ ಪಶು ಇಲಾಖೆ, ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳಿಂದ ಫಲಾನುಭವಿಗಳಿಗೆ ನಾಲ್ಕು ಕೋಟಿ ರೂ. ವೆಚ್ಚದ ವಿವಿಧ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಶು ಇಲಾಖೆಯಿಂದ 60 ಮೇವು ಕತ್ತರಿಸುವ ಯಂತ್ರ, ರಾಸುಗಳಿಗೆ ನೆಲಹಾಸು ರಬ್ಬರ್ ಮ್ಯಾಟ್ ವಿತರಣೆ, ಪಶುಸಖಿಯರಿಗೆ ಸಮವಸ್ತ್ರ, ರಾಸುಗಳಿಗೆ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಅಭಿಯಾನಕ್ಕೆ ಚಾಲನೆ ಹಾಗೂ ನೂತನ ಸಭಾ ಭವನ ಉದ್ಘಾಟನೆ, ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಕೃಷಿಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಿದ ರೈತರಿಗೆ ಸಹಾಯ ಧನ, ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳಿವಿನ ಮನೆ ನಿಮಾರ್ಣಕ್ಕೆ ಎಲೆಕ್ಟ್ರಿಕಲ್ ಸ್ಪ್ರೇಯರ್, ಪವರ್ ವೀಡರ್, 4 ಸ್ಟ್ರೋಕ್ ಬ್ರಷ್ಕಟರ್, ಪ್ಲಾಸ್ಟಿಕ್ ಚಂದ್ರಿಕೆ ವಿತರಣೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಹನಿ ನೀರಾವರಿ, ಹಸಿರುಮನೆ, ಕೃಷಿಹೊಂಡ ನಿಮಾರ್ಣ, ಟ್ರಾ$್ಯಕ್ಟರ್ ಆಧಾರಿತ ಬೂಮರ್, ಸೋಲಾರ್ ಪಂಪ್ ಸೆಟ್ಗಳ ಅಳವಡಿಕೆಗೆ ಸಹಾಯ ಧನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಿರ್ದೇಶಕ ಎಚ್.ಎಸ್.ಗೋಪಾಲ್, ವಿಷ್ಣು, ಕೃಷಿ ಸಮಾಜದ ಅಧ್ಯಕ್ಷ ಕೃಷ್ಣಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್, ಕೃಷಿ ಇಲಾಖೆ ಪ್ರಸನ್ನ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ$್ಮಣ್, ತಾಪಂ ನಿವೃತ್ತ ಇಒ ಡಾ.ಸಿ.ಎನ್. ನಾರಾಯಣಸ್ವಾಮಿ ಇತರರು ಇದ್ದರು.
ಕಾಂಗ್ರೆಸ್ ಪಂಚ ಭಾಗ್ಯ ಮಾತ್ರ ನೀಡುತ್ತಿದ್ದು, ಬೇರೆ ವರ್ಗದವರಿಗೆ ಸೌಲಭ್ಯಗಳ ಕೊರತೆ ಎಂಬ ಮಾತು ಸತ್ಯಕ್ಕೆ ದೂರವಾಗಿದೆ. ರೈತರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಿಂದ ನಾಲ್ಕು ಕೋಟಿ ರೂ. ವೆಚ್ಚದ ಸೌಲಭ್ಯ, ಕೋಲ್ಡ್ ಸ್ಟೋರೇಜ್ ನಿಮಾರ್ಣಕ್ಕೆ ಕ್ರಮ, ಬಮುಲ್ನಿಂದ ರೈತರಿಗೆ ಸಹಾಯ ಧನ ಮಾಡಲಾಗಿದೆ. ಬೆಂಗಳೂರಿಗೆ ಅತಿ ಹತ್ತಿರದ ನಗರವಾದರೂ ಈ ಭಾಗದಲ್ಲಿ ರೈತರು ಇನ್ನೂ ಕೃಷಿ, ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತಸ ಸಂಗತಿ.