ರಾಜ್ಯ

ಸಿಎಂ ಸಿದ್ದರಾಮಯ್ಯ ಅಭಿಮಾನಿ ಯಾದಗಿರಿಯಲ್ಲಿ ಆತ್ಮಹತ್ಯೆಗೆ ಯತ್ನ

ಕಲಬುರಗಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (CM Siddaramaih ) ಅವರು ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿ ಅವರ ಅಭಿಮಾನಿಯೊಬ್ಬ ಯಾದಗಿರಿಯಲ್ಲಿ ಆತ್ಮಹತ್ಯೆಗೆ (siddramayya fan attempt suicide) ಯತ್ನಿಸಿದ ಘಟನೆ ಇಂದು ನಡೆದಿದೆ.
ಭೀಮು ಪೂಜಾರಿ ಎಂಬುವರೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದವರು. ಪ್ರತಿಭಟನೆ ಕಾಲಕ್ಕೆ ವಿಷ ಸೇವಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಮಾತಿನಂತೆ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು ಮುಂದಾಗಿದ್ದು,ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಆಗ್ರಹಿಸಿ ಅಭಿಮಾನಿಗಳು ಯಾದಗಿರಿ (Yadagiri) ಮತ್ತು ಕಲಬುರಗಿಯಲ್ಲಿ(Kalaburagi) ಇಂದು ಪ್ರತಿಭಟನೆ ನಡೆಸಿದರು. ಕುರುಬ (Kuruba) ಸಮಾಜದವರು ಹಾಗೂ ಕಾಂಗ್ರೆಸ್ (Congress) ಬೆಂಬಲಿತರು ಪ್ರತಿಭಟನೆ ನಡೆಸಿದರು