ಬೆಂಗಳೂರು: ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಆರ್ಥಿಕವಾಗಿ ಸುಧಾರಣೆ ಮಾಡಲು ರೈತರ ಉತ್ಪಾದಕ ಸಂಸ್ಥೆಗಳು ಮತ್ತು ರೈತ ಉತ್ಪಾದಕ ಕಂಪನಿಗಳು ನೆರವಾಗಿವೆ. ಇದರಿಂದ ರೈತರಿಗೆ ವೆಚ್ಚದಲ್ಲಿ ಕಡಿಮೆ, ವ್ಯವಹಾರದ ಶಕ್ತಿ ಸುಧಾರಣೆ ಮತ್ತು ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆಗೊಂಡಿದ್ದು, ಆರ್ಥಿಕವಾಗಿ ಬಲಗೊಳ್ಳುತ್ತಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಪ್ರಗತಿ ಪೋರ್ಟಲ್ ಹಾಗೂ ಕರ್ನಾಟಕ ಯಶೋಗಾಥೆಗಳ ಕೈಪಿಡಿಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಇದರಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರ ಸುಧಾರಣೆ ಆಗಿರುವ ಕುರಿತು ಅಧ್ಯಯನದಲ್ಲಿ ಕಂಡು ಬಂದಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರು ಕೃಷಿಗೆ ಸಂಬಂಧಿಸಿದಂತೆ ನಿರಂತರವಾಗಿ ನಿರ್ಬಂಧಕ್ಕೆ ಒಳಗಾಗಿ ಲಾಭದ ಕೊರತೆ, ಸೀಮಿತಿ ಮಾರುಕಟ್ಟೆ ಪ್ರವೇಶ,ಅಸಮರ್ಪಕ ಸಾಲ ಮತ್ತು ದುರ್ಬಲ ಏಕೀಕರಣ ಸವಾಲಾಗಿವೆ. ಇದರಿಂದ ಹೊರ ತರುವ ಉದ್ದೇಶದಿಂದ ಎ್ಪಿಒ ಮತ್ತು ಎ್ಪಿಸಿ ಸ್ಥಾಪಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ 8 ಎ್ಪಿಒ ಸ್ಥಾಪಿಸಿದ್ದು, ಹಣಕಾಸು ಮತ್ತು ಆಡಳಿತ ಸವಾಲುಗಳನ್ನು ಎದುರಿಸುತ್ತಿವೆ. ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಎ್ಪಿಒಗಳಲ್ಲಿ ಶೇ.55 ಸದಸ್ಯ ರೈತರ ಅಭಿಪ್ರಾಯ ಕೇಳಿದಾಗ ಕೃಷಿ ಆದಾಯದಲ್ಲಿ ಶೇ.20 ರಿಂದ 30 ಏರಿಕೆ ಕಂಡಿರುವುದು ಗೊತ್ತಾಗಿದೆ. ಅದೇ ರೀತಿಯಾಗಿ ಶೇ.64 ರೈತರು ಸಾಮೂಹಿಕ ಖರೀದಿ ವ್ಯವಸ್ಥೆಯಿಂದ ಬೀಜ, ರಸಗೊಬ್ಬರ ಇತ್ಯಾದಿಗಳು ಶೇ.6-8 ಕಡಿಮೆ ದರದಲ್ಲಿ ಪಡೆದಿದ್ದಾರೆ.
ಶೇ.61 ಸದಸ್ಯರು ಉತ್ಪನ್ನಗಳನ್ನು ಎ್ಪಿಒಗಳ ಮೂಲಕ ಮಾರಾಟ ಮಾಡಿದಾಗ ಸ್ಥಳೀಯ ವ್ಯಾಪಾರಿಗಳಿಗಿಂತ ಉತ್ತಮ ಮಾರುಕಟ್ಟೆ ದರ ದೊರೆತಿದೆ. ಶೇ.80 ಸದಸ್ಯರು ಸಾಲ ಮಂಜೂರಾತಿ ಮತ್ತು ಹಣ ಬಿಡುಗಡೆ ಪ್ರಕ್ರಿಯೆ ಸುಗಮವಾಗಿದೆ. ಶೇ.90ಕ್ಕಿಂತ ಹೆಚ್ಚು ರೈತರು ಕೃಷಿ ತಂತ್ರಜ್ಞಾನ, ಮಾರುಕಟ್ಟೆ ಪ್ರವೇಶ ಮತ್ತು ಡಿಜಿಟಲ್ ವ್ಯವಹಾರಗಳ ಕುರಿತು ತರಬೇತಿ ಪಡೆದಿದ್ದಾರೆ. ಶೇ.69 ಸದಸ್ಯರು ಬಲವಾದ ನಾಯಕತ್ವ ಮತ್ತು ಪಾರದರ್ಶಕ ಆಡಳಿತವೇ ಯಶಸ್ವಿನ ಮೂಲ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.82 ರೈತರು ಸರಿಯಾದ ಬೆಂಬಲ ಬೆಲೆ ದೊರೆತರೆ ಎ್ಪಿಒಗಳು ರೈತರ ಜೀವನಮಟ್ಟದಲ್ಲಿ ಪರಿವರ್ತನೆ ತರಬಲ್ಲವು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಬೇಕು ಪಿಪಿಪಿ ಯೋಜನೆ
ಸಾರ್ವಜನಿಕರಿಗೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸಲು ಮೂಲಸೌಕರ್ಯ ಕಲ್ಪಿಸಲು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳನ್ನು(ಪಿಪಿಪಿ) ಯೋಜನೆ ರಾಜ್ಯದಲ್ಲಿ ಯಶಸ್ವಿಯಾಗಿದೆ. ಕೋವಿಡ್ ಅವಧಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಪಿಪಿ ಅಡಿಯಲ್ಲಿ ಹೆಚ್ಚಿನ ಡಯಾಲಿಸಿಸ್ ಸೌಲಭ್ಯಗಳು ಅಸ್ತಿತ್ವಕ್ಕೆ ಬಂದವು. ಈ ವಿಧಾನ ಸರ್ಕಾರದ ಆಸ್ಪತ್ರೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಈಗ ರೋಗಿಗಳಿಗೆ ಸಮಗ್ರ ಸೇವೆಯನ್ನು ಒದಗಿಸಲು ಸಾಧ್ಯವಾಗಿದೆ. ಪಿಪಿಪಿ ಮಾದರಿಯಲ್ಲಿ ಡಯಾಲಿಸಿಸ್ ಸೌಲಭ್ಯಗಳನ್ನು ಸ್ಥಾಪಿಸುವುದರಿಂದ ಹಿಂದುಳಿದ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ಸಿಗಲಿದೆ.
ಬಡವರ ಕೈಹಿಡಿದ ಪಿಎಂಕೆವಿವೈ
ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ(ಪಿಎಂಕೆವಿವೈ) ಯುವಕ/ಯುವತಿಯರಿಗೆ ಕೌಶಲ ಕಲಿಸಿ ಉದ್ಯೋಗ ಮತ್ತು ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ಮೈಸೂರು ನಗರದ ಸಿದ್ಧಾರ್ಥನಗರದಲ್ಲಿ ತರಬೇತಿ ಕೇಂದ್ರ ನಡೆಸಿದ ಅಧ್ಯಯನ ತಂಡ ಲಾನುಭವಿಗಳ ಬದುಕಿನಲ್ಲಿ ಆಗಿರುವ ಸಕಾರಾತ್ಮಕ ಬದಲಾವಣೆಯನ್ನು ಉಲ್ಲೇಖಿಸಿದೆ. ಏರ್‌ಲೈನ್ ಬ್ಯಾಗೇಜ್ ಹ್ಯಾಂಡ್ಲರ್, ಕೃಷಿ ಸೇವಾ ಇನ್‌ಪುಟ್ ಡೀಲರ್, ಪ್ರಾಣಿ ಆರೋಗ್ಯ ಕಾರ್ಯಕರ್ತ, ಕಸೂತಿ ಕೆಲಸ, ಹೇರ್ ಸ್ಟೈಲಿಸ್ಟ್, ಸಹಾಯಕ ವಿದ್ಯುತ್ ತಜ್ಞ, ಆಹಾರ ಉತ್ಪನ್ನ ಪ್ಯಾಕೇಜಿಂಗ್ ತಂತ್ರಜ್ಞ, ಹೊಲಿಗೆ ಯಂತ್ರ ಚಾಲಕ, ಡೇಟಾ ಎಂಟ್ರಿ ಆಪರೇಟರ್ ಮುಂತಾದ ತರಬೇತಿ ನೀಡಲಾಗುತ್ತಿದೆ.