Puls polio campaign 
ರಾಜ್ಯ

ಪೋಲಿಯೊ ಅಭಿಯಾನಕ್ಕೆ ಸಿಎಂ ಚಾಲನೆ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • * ರಾಜ್ಯಾದ್ಯಂತ 64.84 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ
ಬೆಂಗಳೂರು: ಆರೋಗ್ಯ ಇಲಾಖೆ ರಾಜ್ಯಾದ್ಯಂತ ಭಾನುವಾರ (ಜೂ.28) ಪಲ್ಸ್ ಪೋಲಿಯೊ ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದು, ಬೆಳಗ್ಗೆ 8 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಇದರೊಂದಿಗೆ ರಾಜ್ಯಾದ್ಯಂತ 5 ವರ್ಷದೊಳಗಿನ 64.84 ಲಕ್ಷ ಮಕ್ಕಳನ್ನು ತಲುಪುವ ಗುರಿ ಹೊಂದಲಾಗಿದ್ದು, ಪೋಲಿಯೊ ಹನಿ ವಿತರಣೆಗೆ 36,076 ಬೂತ್‌ಗಳನ್ನು ಗುರುತಿಸಲಾಗಿದೆ. ಗುಡ್ಡಗಾಡು ಪ್ರದೇಶಗಳನ್ನು ತಲುಪಲು 988 ಮೊಬೈಲ್ ತಂಡ ರಚಿಸಲಾಗಿದೆ. 2,125 ಟ್ರಾನ್ಸಿಟ್ ತಂಡವು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಿಸಲಿವೆ.
ಈ ಕಾರ್ಯಕ್ರಮಕ್ಕೆ 1.14 ಲಕ್ಷ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. 7,197 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮೊದಲನೇ ದಿನ (ಜೂ.28) ಬೂತ್‌ಗಳಲ್ಲಿ ಲಸಿಕೆ ನೀಡಲಾಗುವುದು. ಕಾರಣಾಂತರಗಳಿಂದ ಭಾನುವಾರದಂದು ಲಸಿಕೆ ಹಾಕಿಸಲು ಸಾಧ್ಯವಾಗದವರಿಗೆ, ನಂತರದ ಎರಡು ದಿನ ನಡೆಸುವ ಮನೆ ಮೆನೆ ಭೇಟಿ ಅವಧಿಯಲ್ಲಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.