ಡಿಸಿಎಂ ಡಾ.ಜಿ ಪರಮೇಶ್ವರ್ 
ರಾಜ್ಯ

ಕಾಂಗ್ರೆಸ್​ ಶಾಸಕರೊಂದಿಗೆ ಸಿಎಂ ಡಿಕೆ ಶಿವಕುಮಾರ್​ ಸಭೆ: ಡಿಸಿಎಂ ಪರಮೇಶ್ವರ್​..DCM Parameshwara

ಪ್ರಮುಖ ಮುಖ್ಯಾಂಶಗಳು

  • ಆಡಳಿತ ಪಕ್ಷದ ಶಾಸಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಸಿಎಂ ಸಭೆ ಕರೆದಿದ್ದಾರೆ ಎಂದ ಡಿಸಿಎಂ
  • ಕೇಂದ್ರದ ಮಾರ್ಗಸೂಚಿಯಂತೆ ರಾಜ್ಯದ 102 ತಾಲೂಕುಗಳಲ್ಲಿ ಬರ ಎಂದು ಘೋಷಣೆ
  • ಹನೂರು ಕೇಸ್​ ಸಿಐಡಿಗೆ ವಹಿಸಿದ್ದರಲ್ಲಿ ವಿಶೇಷತೆ ಏನಿಲ್ಲ ಎಂದ ಡಿಸಿಎಂ

ಬೆಂಗಳೂರು: ನಿತ್ಯ ಅನೇಕ ಶಾಸಕರು ಸಿಎಂ ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿದ್ದರು. ನಮಗೂ ಸಮಯ ಕೊಡಿ ಎಂದು ಕೇಳುತ್ತಿದ್ದರು. ಹೀಗಾಗಿ ಇವತ್ತೇ ಶಾಸಕರೊಂದಿಗೆ ಸಿಎ ಸಭೆ ಮಾಡುತ್ತಿದ್ದಾರೆ. ಶಾಸಕರ ಸಮಸ್ಯೆ ಕೇಳಿ ಉತ್ತರ ಕೊಡುತ್ತಾರೆ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಡಾ.ಜಿ ಪರಮೇಶ್ವರ್​ ಅವರು, ಬ್ಯಾಚ್​ ಟು ಬ್ಯಾಚ್​ ಮೂಲಕ ಪ್ರತಿಯೊಬ್ಬ ಶಾಸಕರ ಕೆಲಸ, ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ಡಾ.ಜಿ ಪರಮೇಶ್ವರ್  ಹೇಳಿದರು. 

ಇಂದೇ ಸಭೆ

ಸಿಎಂ ಭೇಟಿಗಾಗಿ ಶಾಸಕರು ಮನವಿ ಮಾಡುತ್ತಲೇ ಇದ್ದರು. ನಮಗೂ ಸಮಯ ಕೊಡಿ ಎಂದು ಕೇಳ್ತಾ ಇದ್ದರು.
ಹೀಗಾಗಿ ಬೆಂಗಳೂರಿಗೆ ಬಂದು  ಸಮಯ ವ್ಯರ್ಥ ಮಾಡೋದು ಬೇಡ. ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡಿ, ನಾನೇ ಅವಕಾಶ, ಸಮಯ ಕೊಡುತ್ತೇನೆ.ಸಮಸ್ಯೆ ಇದ್ದರೂ, ಮಂತ್ರಿಗಳು, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ. ಸಮಸ್ಯೆ ಬಗೆಹರಿಸುತ್ತೇವೆ ಎಂದಿದ್ದರು. ಇದರ ಸಲುವಾಗಿ ಬುಧವಾರ (ಆ.26)ರಂದು ಸಭೆ ಆಯೋಜಿಸಲಾಗಿತ್ತು. ಆದರೆ, ಕಾರಣಾಂತರದಿಂದಾಗಿ ಇಂದೇ ಸಭೆ ಆಯೋಜಿಸಲಾಗಿದೆ ಎಂದು ಪರಮೇಶ್ವರ್​ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಶಾಸಕರ ಜೊತೆ ಮಾತ್ರ ಸಭೆ ಯಾಕೆ ಎನ್ನುವ ವಿಚಾರಕ್ಕೆ ಮಾತನಾಡಿದ ಅವರು, ಚುನಾವಣೆ ದೃಷ್ಟಿಕೋನದ ಜೊತೆ ನಮ್ಮ ಪಕ್ಷ ಒಗ್ಗಟ್ಟಾಗಿ ಇರಬೇಕು ಅಲ್ಲವೇ. ಈಗ ನಾವು ಆಡಳಿತ ಪಕ್ಷ ಆಗಿ‌ ಅವರ ಸಮಸ್ಯೆ ಬಗೆಹರಿಸದಿದ್ರೆ ಹೇಗೆ..ಯಾವುದೇ ಸರ್ಕಾರ ಇದ್ದಾಗ ಆಡಳಿತ ಪಕ್ಷಕ್ಕೆ ಒತ್ತು ಕೊಡ್ತಾರೆ.

ಸಿದ್ದರಾಮಯ್ಯ ಸಹ ಹೀಗೆ ಮಾಡಿದ್ದರು

ಸಿದ್ದರಾಮಯ್ಯನವರ ಕಾಲದಲ್ಲೂ ಇಂತಹ ಸಭೆಗಳು ನಡೆದಿವೆ. ಈಗಲೂ ಆಡಳಿತ ಪಕ್ಷದ ಶಾಸಕರ ಸಭೆ ಕರೆಯಲಾಗಿದ್ದು, ಮಂತ್ರಿಗಳಿಗೆ ಎರಡು ಜವಾಬ್ದಾರಿಗಳಿರುತ್ತವೆ. ಜಿಲ್ಲಾ ಉಸ್ತುವಾರಿ ಸಚಿವರು ಪಕ್ಷದ ಕೆಲಸದ ಜೊತೆಗೆ ಜಿಲ್ಲೆಯ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
 ಜಿಲ್ಲಾ  ಮಂತ್ರಿಗಳಿಗೆ ಎರಡೆರಡು ಜವಾಬ್ದಾರಿ ಇದ್ದೇ ಇರುತ್ತದೆ. ಪಕ್ಷದ ಕೆಲಸ ಮತ್ತು ಸರ್ಕಾರ, ಜನರ ಕೆಲಸ ಮಾಡಬೇಕು. ಹೀಗಾಗಿ ಮಂತ್ರಿಗಳಿಗೆ ವಿಶೇಷ ಜವಾಬ್ದಾರಿ ಕೊಡ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಸಮಸ್ಯೆ ಮತ್ತು ಅಭಿವೃದ್ಧಿ ಕಾರ್ಯಗಳನ್ನೂ ಮಾಡಬೇಕು. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಿದರು. 

ಬರ ನಿರ್ವಹಣೆ ಹಾಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ

ಕೇಂದ್ರಕ್ಕೆ ಬರ ಅಧ್ಯಯನಕ್ಕೆ ಮನವಿ ಸಲ್ಲಿಸುವ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ‌ ಪರಮೇಶ್ವರ್, ಕೇಂದ್ರ ಸರ್ಕಾರದ 2020ರ ಮಾರ್ಗಸೂಚಿ ಪ್ರಕಾರವೇ ಬರ ಪೀಡಿತ ಪ್ರದೇಶ ಘೋಷಿಸಬೇಕಾಗುತ್ತದೆ. ಸದ್ಯ 102 ತಾಲೂಕುಗಳಲ್ಲಿ ನಿಯಮದಡಿ ವರದಿ ಬಂದಿದ್ದು, ವಸ್ತುಸ್ಥಿತಿ ಅಧ್ಯಯನ ನಡೆಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ, ಕೇಂದ್ರಕ್ಕೆ ಅಧಿಕೃತ ಮೆಮೊರಂಡಮ್ (ಪ್ರಸ್ತಾವನೆ) ಸಲ್ಲಿಸಲಾಗುವುದು ಎಂದು ತಿಳಿಸಿದರು.  

 ಸಿಐಡಿಗೆ ಕೇಸ್​ ಕೊಟ್ಟಿದ್ದು ಹೊಸದೇನು ಅಲ್ಲ

 ಹನೂರು ಕೇಸ್ ಸಿಐಡಿಗೆ ಹಸ್ತಾಂತರ ವಿಚಾರದ ಬಗ್ಗೆ ಮಾತನಾಡಿದ ಅವರು, ರೆಗ್ಯೂಲರ್ ಆಗಿ ಇಂಥಾ ಘಟನೆ ಆದಾಗ, ಸರ್ಕಾರಕ್ಕೆ ಅನುಮಾನ, ಡೌಟ್ ಬಂದಾಗ ಅದನ್ನ ಸಿಐಡಿಗೆ ಕೊಡ್ತಾರೆ. ಅದೇ ರೀತಿ ಮಾಡಿದ್ದಾರೆ, ಇದರಲ್ಲಿ ಹೊಸದೇನೂ ಇಲ್ಲ ಎಂದು ಸ್ಪಷ್ಟನೆ ಕೊಟ್ಟರು, (ಏಜೆನ್ಸೀಸ್).