CM DK Shivakumar We will appeal against the CWRC to the CWMA
- 15 ದಿನ ತಮಿಳುನಾಡಿಗೆ 3500 ಕ್ಯೂಸೆಕ್ ಕಾವೇರಿ ನೀರು ಬಿಡಬೇಕು ಅಂತ ಹೇಳಿದ್ದಾರೆ
- ದೆಹಲಿಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ
- ತಮಿಳುನಾಡು ಸಿಎಂ ಕರ್ನಾಟಕಕ್ಕೆ ಬರ್ತಾರೆ, ಹೇಳಿಕಾಪ್ಟರ್ ವ್ಯವಸ್ಥೆ ಮಾಡಿದ್ದೇವೆ
- ನಾವು CWRC ಆರ್ಡರ್ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದ ಸಿಎಂ
ನವದೆಹಲಿ: ತಮಿಳುನಾಡಿಗೆ 3500 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ(CWRC) ಆದೇಶ ಕೊಟ್ಟಿದೆ. ಆದರೆ ನಮಗೆ ಇನ್ನೂ ವರುಣ ಕೃಪೆ ತೋರಿಲ್ಲ. 2 ಬಾರಿ ಅವ್ರು ತಮಿಳುನಾಡು ಮನವಿಯನ್ನ ರಿಜೆಕ್ಟ್ ಮಾಡಿದ್ರು. ಸಿಡಬ್ಲ್ಯೂಆರ್‌ಸಿ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ನಮ್ಮ ಕಾನೂನು ತಂಡ ಕೆಲಸ ಮಾಡುತ್ತಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಮುಂದಿನ 15 ದಿನಗಳ ಕಾಲ 3500 ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ(CWRC) ಆದೇಶ ಹೊರಡಿಸಿದ ಬೆನ್ನಲ್ಲೇ ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ನಾನಾ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದಿಂದ ಮುಂದೆ ಕ್ರಮ ತೆಗೆದುಕೊಳ್ಳೋದೇನು ಎಂದು ದೆಹಲಿಯಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು.
ಡಿಕೆ ಶಿವಕುಮಾರ್ ಏನಂದ್ರು?
ಕಾವೇರಿ ನೀರಾವರಿ ವಿಚಾರದಲ್ಲಿ ನಿನ್ನೆ ನೀರು ಬಿಡಬೇಕು ಅಂತ ಹೇಳಿದ್ದಾರೆ, ಆದ್ರೆ ನಮಗೆ ಇನ್ನೂ ವರುಣ ಕೃಪೆ ತೋರಿಲ್ಲ. 2 ಬಾರಿ ತಮಿಳುನಾಡು ಮನವಿಯನ್ನ ರಿಜೆಕ್ಟ್ ಮಾಡಿದ್ದರು. ನಾವು ಈ ಆರ್ಡರ್ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ . ಬಗ್ಗೆ ನಮ್ಮ ಮಂತ್ರಿಗಳೊಂದಿಗೂ ಚರ್ಚೆ ಮಾಡ್ತೀವಿ. ಆಮೇಲೆ ತೀರ್ಮಾನ ಮಾಡ್ತೇವೆ.ವಿಪಕ್ಷ ನಾಯಕರ ಬಳಿ ಸಹ ಈ ಬಗ್ಗೆ ಮಾತನಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ಕೊಟ್ಟರು.
ತಮಿಳುನಾಡಿನ ಸಿಎಂ ಬರ್ತಾರೆ
ಮುಂದುವರೆದು, ತಮಿಳುನಾಡು ಸಿಎಂ ನನ್ನತ್ರ ಬಂದು ಮಾತಾಡೋಕೆ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ಹತ್ರ ಕೂಡ ಫೋನ್ ನಲ್ಲಿ ಮಾತಾಡಿದ್ದಾರೆ. ನಾವು ಅವರಿಗೆ ಗೌರವ ಕೊಡ್ಬೇಕು. ಕಾವೇರಿ ಜಲ ಪ್ರದೇಶ ನೋಡಿ ಅಂತ ರಿಕ್ವೆಸ್ಟ್ ಮಾಡಿದ್ದೇನೆ. ಅದ್ಕೆ ಅಂತ ಹೇಳಿಕಾಪ್ಟರ್ ವ್ಯವಸ್ಥೆ ಎಲ್ಲಾ ಮಾಡಿದ್ದೇವೆ. ಅವ್ರ ವಿಚಾರ ಏನಿದೆ ಅಂತ ಅರ್ಥ ಆಗಿಲ್ಲ. ಬರ್ತೀನಿ ಅಂದಾಗ ಗೌರವದಿಂದ ಅತಿಥಿಯನ್ನ ಸ್ವೀಕಾರ ಮಾಡೋದು ನಮ್ಮ ಕರ್ತವ್ಯ ಎಂದು ಹೇಳಿದರು.
ಕಾವೇರಿ ನೀರು ನಿರ್ವಹಣಾ ಸಮಿತಿ(CWRC) ಆದೇಶ ಹೊರಡಿಸಿದ ಬಗ್ಗೆ ಆದೇಶ ಹೊರಡಿಸಲು ಸಿದ್ಧತೆ ಆಗ್ತಾ ಇದೆ. ಸೀನಿಯರ್ ಅಡ್ವೋಕೇಟ್ ಜತೆ ಚರ್ಚೆ ಮಾಡಿದ್ದೇನೆ ಎಂದು ದೆಹಲಿಯಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದರು.
ರಾಮಲಿಂಗಾರೆಡ್ಡಿ ಹೇಳಿದ್ದೇನು?
ಇಂದು ನಗರದಲ್ಲಿ ನಡೆದ ಕಾವೇರಿ ನಿಯಂತ್ರಣ ಸಮಿತಿ ಸಭೆಯಲ್ಲಿ ಕಾವೇರಿ ನೀರು ಹಂಚಿಕೆಗೆ ಕರ್ನಾಟಕದ ವಾಸ್ತವ ಪರಿಸ್ಥಿತಿ ಹಾಗೂ ರಾಜ್ಯದ ನಿಲುವನ್ನು ಸಮರ್ಥವಾಗಿ ಮಂಡಿಸಲಾಗಿದೆ. ಕರ್ನಾಟಕದಿಂದ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಸಮಿತಿ ಸೂಚಿಸಿದೆ. ಈ ಕುರಿತು ರಾಜ್ಯದ ಕೃಷಿ ಜಲಾಶಯದ ನೀರಿನ ಲಭ್ಯತೆ, ರೈತರ ಅಗತ್ಯತೆಗಳು ಮತ್ತು ಕುಡಿಯುವ ನೀರಿನ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕಾನೂನು ಮತ್ತು ತಾಂತ್ರಿಕ ಆಯಾಮಗಳನ್ನು ಪರಿಶೀಲಿಸಲಾಗಿದೆ, ಅಗತ್ಯವಿದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರ ಮುಂದೆ ಕರ್ನಾಟಕದ ನಿಲುವನ್ನು ಬಲವಾಗಿ ಪ್ರತಿಪಾದಿಸಲಾಗಿದೆ. ಕರ್ನಾಟಕದ ನೆಲ, ಜಲ ಮತ್ತು ರೈತರ ಹಿತ ಕಾಪಾಡುವುದು ನಮ್ಮ ಮೊದಲ ಆದ್ಯತೆ ಎಂದು ಎಕ್ಸ್ನಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿಯವರು ಮಾತನಾಡಿದರು, (ಏಜೆನ್ಸೀಸ್).