ರಾಜ್ಯ

ಆ ಒಬ್ಬ ವ್ಯಕ್ತಿಗೆ ಇಡೀ ಸರ್ಕಾರವೇ ಶರಣು, ಸಿಎಂ ಡಿಕೆಶಿ ಕೂಡ ಟ್ರ್ಯಾಪ್ ಆಗಿರಬಹುದು!...ಸ್ಟಿಂಗ್​ ಆಪರೇಷನ್​ ಬಗ್ಗೆ ಎಚ್​​ಡಿಕೆ ಸ್ಫೋಟಕ ಹೇಳಿಕೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಚರ್ಚೆಯ ನಡುವೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಭೇಟಿ ತಪ್ಪಲ್ಲ ಎಂದಿದ್ದಾರೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಚರ್ಚೆಯ ನಡುವೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳ ಭೇಟಿ ತಪ್ಪಲ್ಲ ಎಂದಿದ್ದಾರೆ.

ಇಂದು ಲೋಕಭವನದಲ್ಲಿ ನೂತನ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‌ಡಿಕೆ, ಮಾಜಿ ಮುಖ್ಯಮಂತ್ರಿಯವರನ್ನೇ ಇಟ್ಟುಕೊಂಡು ಸ್ಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಈ ಬಗ್ಗೆ ದೂರು ಕೂಡ ಕೊಟ್ಟಿದ್ದಾರೆ. ಈ ಸ್ಟಿಂಗ್ 2023ರಲ್ಲಿ ನಡೆದಿದೆ, ಆದರೆ ನಾನು ಮೊದಲು ಇದು 2011ರದ್ದು ಎಂದುಕೊಂಡಿದ್ದೆ, ನಂತರ ಕೆಲವು ಸ್ನೇಹಿತರು 2023ರದ್ದು ಎಂದು ತಿಳಿಸಿದರು. ಇದರ ಕಾನೂನಾತ್ಮಕ ಪರಿಣಾಮಗಳು ಏನಾಗುತ್ತವೆ ಎಂಬುದನ್ನು ಕಾದು ನೋಡಬೇಕು. ಆದರೆ, ಈಗ ರಾಜ್ಯದಲ್ಲಿ ನಡೆದಿರುವ ವಾತಾವರಣವನ್ನು ಗಮನಿಸಿದರೆ, ಇಡೀ ಸರ್ಕಾರವೇ ಆ ಒಬ್ಬ ವ್ಯಕ್ತಿಗೆ ಸಂಪೂರ್ಣವಾಗಿ ಶರಣಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ ಎಂದು ಆರೋಪಿಸಿದರು.

ಆ ವ್ಯಕ್ತಿಯ ನಡವಳಿಕೆಗಳನ್ನು ನೋಡಿದರೆ ಸಿಎಂ ಡಿ ಕೆ ಶಿವಕುಮಾರ್ ಅವರೇ ಸ್ಟಿಂಗ್‌ಗೆ ಒಳಗಾಗಿರಬಹುದು, ಆ ವ್ಯಕ್ತಿ ಸ್ಟಿಂಗ್ ಮಾಡಿ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದು, ಸರ್ಕಾರದ ಮೇಲೆ ಆತ ಪ್ರಭಾವ ಬೀರಿದ್ದಾನೆ, ಪೊಲೀಸರ ಮುಂದೆ ಕೂಡ ಕಾಲ್ ಮೇಲೆ ಕಾಲ್ ಹಾಕಿ ಕುಳಿತುಕೊಳ್ಳುತ್ತಾನೆ. ಸರ್ಕಾರ ಆ ವ್ಯಕ್ತಿಗೆ ಯಾಕೆ ಈ ಮಟ್ಟಕ್ಕೆ ಹೆದರಿದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದ್ದು, ಇದಕ್ಕೆಲ್ಲಾ ಕಾಲವೇ ಉತ್ತರ ನೀಡಲಿದೆ ಎಂದರು.

ಇದನ್ನೂ ಓದಿ:ಎಸ್‌ಐಆರ್ ವಿರುದ್ಧದ ಪತಿಭಟನೆ ಬೆನ್ನಲ್ಲೇ ಡಿಎಂಕೆ ಹೈವೋಲ್ಟೇಜ್ ಸಭೆ: ತೃತಿಯ ರಂಗ ರಚನೆಗೆ ಸ್ಟಾಲಿನ್ ಮಾಸ್ಟರ್ ಪ್ಲಾನ್...? | DMK Holds Key Meet

ಪ್ರಿಯಾಂಕ್ ಖರ್ಗೆ ವಿರುದ್ಧ ಎಚ್‌ಡಿಕೆ ವಾಗ್ದಾಳಿ

ಸಿಜೆಪಿ ಕಾಂಗ್ರೆಸ್​ ಒಂದೇ ಎಂಬ ಹೇಳಿಕೆ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಎಷ್ಟು ಫಂಡ್ ಕೊಡುತ್ತೇವೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದರು. ದೇವೆಗೌಡರ ಕುಟುಂಬದಲ್ಲಿ ಏಳೆಂಟು ಹುದ್ದೆಗಳಿವೆ, ನನ್ನ ಗೃಹ ಖಾತೆಯ ಮೇಲೆಕೆ ಕಣ್ಣು ಎಂದು ಹೇಳಿಕೆ ನೀಡಿರುವ ಸಚಿವ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ನಮ್ಮಲ್ಲಿ ಅಷ್ಟು ಹುದ್ದೆಗಳು ಎಲ್ಲಿವೆ ಎಂದು ಮರುಪ್ರಶ್ನಿಸುತ್ತಾ, ನಾನು ಅವರ ಹುದ್ದೆಯ ಮೇಲೆ ಕಣ್ಣುಹಾಕಿಲ್ಲ, ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಯಾವುದೇ ಹುದ್ದೆ ಪಡೆಯಲು ಅವಕಾಶವಿದೆ. ಆದರೆ ಗೃಹ ಮಂತ್ರಿ ಎನ್ನುವುದು ಅಕ್ರಮಗಳನ್ನು ಮುಚ್ಚಿಹಾಕಲು ಇರುವ ಹುದ್ದೆಯಲ್ಲ. ನಿಮ್ಮದೇ ಜಿಲ್ಲೆಯಲ್ಲಿ ನಡೆದಿರುವ ಘಟನೆಗಳಿಗೆ ಗೃಹ ಸಚಿವರಾಗಿ ನೀವು ಎಷ್ಟು ಪರಿಹಾರ ಕೊಡಿಸಿದ್ದೀರಿ..? ನಿಮಗೆ ಸಿಗುವ ಸರ್ಟಿಫಿಕೇಟ್‌ಗಳು ನೀವು ರಕ್ಷಣೆ ಕೊಡುವವರಿಂದಲೇ ಸಿಗುತ್ತವೆ ಎಂದು ವಾಗ್ದಾಳಿ ನಡೆಸಿದರು.

ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಅವರು, ಅಲೋಕ್ ಕುಮಾರ್ ಅವರ ವಿಚಾರದಲ್ಲಿ ಮುಖ್ಯ ಕಾರ್ಯದರ್ಶಿಗಳು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಆದರೆ, ಅವರನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ಮಾಡಲು ಸರ್ಕಾರದೇಕೆ ಇಷ್ಟಪಡುತ್ತಿಲ್ಲ? ಎಂದು ಪ್ರಶ್ನಿಸಿದರು.