ಬೆಂಗಳೂರು: ನಾರಾಯಣ ಸಮೂಹ ಸಂಸ್ಥೆಗಳು, ಬೆಂಗಳೂರಿನಲ್ಲಿ ಆಯೋಜಿಸಿದ್ದ ಕ್ಲಬ್ಸ್ ಕಲ್ಮಿನೇಷನ್' ಹಾಗೂ 'ರೀಡಿಂಗ್ ಕಾರ್ನಿವಲ್' ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಮಾಪ್ತಿಗೊಂಡಿತು.
ಕರ್ನಾಟಕದ 32 ಶಾಲೆಗಳ ಅತ್ಯುತ್ತಮ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಕತರಲಾಯಿತು. ಫಿನಾಲೆಯಲ್ಲಿ ಭಾಗವಹಿಸಿದ ಫೈನಲಿಸ್ಟ್‌ಗಳು ರಾಜ್ಯಾದ್ಯಂತ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಬೃಹತ್ ಸಮೂಹದಿಂದ ಆಯ್ಕೆಯಾಗಿ ಬಂದವರಾಗಿದ್ದಾರೆ. ಎರಡೂ ಸ್ಪರ್ಧೆಗಳು ಬಹು-ಹಂತದ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಒಳಗೊಂಡಿದ್ದವು:
ಶಾಲಾ ಮಟ್ಟದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲು ಸಾವಿರಾರು ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳಲ್ಲಿ ಸ್ಪರ್ಧಿಸಿದ್ದರು. ಕ್ಲಸ್ಟರ್ ಮಟ್ಟದಲ್ಲಿ ಶಾಲಾ ಮಟ್ಟದಲ್ಲಿ ವಿಜೇತರಾದವರು ತಮ್ಮ ಕ್ಲಸ್ಟರ್ ವ್ಯಾಪ್ತಿಯ ಇತರ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿದ್ದರು. ಕ್ಲಸ್ಟರ್ ಮಟ್ಟದ ಅತ್ಯುತ್ತಮ ಪ್ರತಿಭೆಗಳು ಬೆಂಗಳೂರಿನ ಈ ಮಹಾವೇದಿಕೆಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಿದರು, ಪ್ರತಿ ವಿಭಾಗದಲ್ಲಿ ರಾಜ್ಯದ ಮೊದಲ 3 ತಂಡಗಳನ್ನು ಅಧಿಕೃತವಾಗಿ ಘೋಷಿಸಲಾಯಿತು.
ವಿದ್ಯಾರ್ಥಿಗಳು ನೈಜ ಪ್ರಪಂಚದ ಸವಾಲುಗಳನ್ನು ಎದುರಿಸುವ ರೀತಿಯಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದೇವೆ. ಕೇವಲ ಕಂಠಪಾಠದ ಬದಲು ಪ್ರಾಯೋಗಿಕ ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸುತ್ತಿದ್ದೇವೆ. ಸಿನರ್ಜಿ-ಎಕ್ಸ್‌ನಲ್ಲಿ ಏರೋಸ್ಪೇಸ್ ಸಂಕೀರ್ಣತೆಗಳನ್ನು ಕಲಿಯುವುದಿರಲಿ ಅಥವಾ ಐಡಿಯಾ ವಾಲ್ಟ್‌ನಲ್ಲಿ ಆರ್ಥಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದಿರಲಿ, ಈ ಕ್ಲಬ್‌ಗಳು ಭಾರತದ ಮುಂದಿನ ಪೀಳಿಗೆಯ ಉದ್ಯಮಿಗಳು ಮತ್ತು ಸೃಜನಾತ್ಮಕ ಪ್ರತಿಭೆಗಳ ಉಗಮಸ್ಥಾನಗಳಾಗಿವೆ ಎಂದು ನಾರಾಯಣ ಸಮೂಹ ಸಂಸ್ಥೆಗಳ ನಿರ್ದೇಶಕಿ ಡಾ.ಸಿಂಧುರಾ ನಾರಾಯಣ ಪೊಂಗುರು ಹೇಳಿದರು.