ಮುಳಬಾಗಿಲು ತಾಲೂಕು clean ಆವಣಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀರಾಮಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಆವಣಿ ಗ್ರಾಮವನ್ನು ಸ್ವಚ್ಛಗೊಳಿಸಲಾಯಿತು. ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್​.ವಿ. ಬಾಬು, ನರೇಗಾ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು. 
ರಾಜ್ಯ

ಆವಣಿ ಗ್ರಾಮದಲ್ಲಿ ಸ್ವಚ್ಛ ಕಾರ್ಯ clean

ಮುಳಬಾಗಿಲು: ತಾಲೂಕಿನ ಆವಣಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀರಾಮಲಿಂಗೇಶ್ವರ clean ದೇವರ ಜಾತ್ರಾ ಮಹೋತ್ಸವ, ಮಹಾಶಿವರಾತ್ರಿ ಹಾಗೂ ಬ್ರಹ್ಮರಥೋತ್ಸವ ಅಂಗವಾಗಿ ಗ್ರಾಮವನ್ನು ಸ್ವಚ್ಛಗೊಳಿಸಲು 250ಕ್ಕೂ ಹೆಚ್ಚು ಸಿಬ್ಬಂದಿ ಮುಳಬಾಗಿಲು ತಾಪಂ ಕಾರ್ಯನಿರ್ವಹಣಾಧಿಕಾರಿ ಎನ್​.ವಿ.ಬಾಬು ನೇತೃತ್ವದಲ್ಲಿ ಆಗಮಿಸಿ ದೇವಾಲಯ, ರಥಬೀದಿ, ಸೀತಾ ಪಾರ್ವತಿ ಬೆಟ್ಟದ ಸೇರಿ ಗ್ರಾಮದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.
ಎಲ್ಲ ಗ್ರಾಪಂಗಳ ಕಸ ಸಂಗ್ರಹಿಸುವ ವಾಹನಗಳ ಮೂಲಕ ಕಸ ಸ್ಥಳಾಂತರ ಮಾಡಲಾಯಿತು.
ಮಹಾಶಿವರಾತ್ರಿ ಹಬ್ಬದಿಂದ 10 ದಿನಗಳ ಕಾಲ ಜಿಲ್ಲೆಯಲ್ಲೇ ಅತಿ ದೊಡ್ಡ ಜನ ಮತ್ತು ಜಾನುವಾರು ಜಾತ್ರೆ ನಡೆಯಲಿದ್ದು, ಇದನ್ನು ಮನಗೊಂಡು ಮುಳಬಾಗಿಲು ತಾಪಂ ಆವಣಿ ಗ್ರಾಮದ ಸಂಪೂರ್ಣ ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಆವಣಿ ಗ್ರಾಪಂ ಸೇರಿ ವಿವಿಧ ಇಲಾಖೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಇಲಾಖೆಗಳ ಸೌಲಭ್ಯಗಳನ್ನು ಆವಣಿ ಜಾತ್ರೆಗೆ ನೀಡಲು ಸಿದ್ಧಗೊಂಡಿವೆ.
ತಾಪಂ ಮಾಜಿ ಸದಸ್ಯ ರವಿಶಂಕರ್​, ಗ್ರಾಪಂ ಮಾಜಿ ಅಧ್ಯಕ್ಷೆ ಲಕ್ಷಿ$್ಮಪ್ರಿಯ, ಮಾಜಿ ಸದಸ್ಯರಾದ ಶ್ರೀ ರಾಮಪ್ಪ, ತಮ್ಮಣ್ಣ, ಗ್ರಾಪಂ ಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್​.ರಮೇಶ್​, ಅಶ್ವಥನಾರಾಯಣ, ವೈ.ಆರ್​.ಭವಾನಿ, ನಂದೀಶ್​, ವರದರಾಜ್​, ತುಳಸಿರಾಮಶೆಟ್ಟಿ, ವಿಜಯಮ್ಮ, ರಾಮಣಪ್ಪ, ಚಂದ್ರ, ವಿ. ವೆಂಕಟಸ್ವಾಮಿ, ಚಂದ್ರಶೇಖರ್​ ಇದ್ದರು.
ಜಿಪಂ ಸಿಇಒ ಪ್ರವಿಣ್​ ಪಿ.ಬಾಗೇವಾಡಿ ಮಾರ್ಗದರ್ಶನದಂತೆ ತಾಲೂಕಿನಲ್ಲಿ ಸ್ವಚ್ಛ ಶನಿವಾರ ಶ್ರಮದಾನ ಕಾರ್ಯಕ್ರಮ ಆವಣಿಯಲ್ಲಿ ಆರಂಭಿಸಲಾಗಿದೆ. ಇದೇ ರೀತಿ ತಾಲೂಕಿನ ಪ್ರೇಕ್ಷಣಿಯ ಸ್ಥಳಗಳನ್ನು ಮೊದಲಾದ್ಯತೆಯಲ್ಲಿ ಸ್ವಚ್ಛಗೊಳಿಸಲಾಗುವುದು.
- ಎನ್​.ವಿ.ಬಾಬು
ತಾಪಂ ಇಒ ಮುಳಬಾಗಿಲು
ತಾಲೂಕಿನ ಎಲ್ಲ ಗ್ರಾಪಂಗಳಿಂದ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಆವಣಿ ಗ್ರಾಮವನ್ನು ಸ್ವಚ್ಛಗೊಳಿಸಿದ್ದಾರೆ, ಆದಿ ಜಾಂಬವಂತಸ್ವಾಮಿ ದೇವಾಲಯ ಮತ್ತಿತರ ಕರೆಗಳಲ್ಲಿ ಇನ್ನು ಸ್ವಲ್ಪ ಸ್ವಚ್ಛತಾ ಕಾರ್ಯ ಬಾಕಿ ಉಳಿದಿದ್ದು, ಸೋಮವಾರ ಅವಣಿ, ದೇವರಾಯಸಮುದ್ರ, ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯತಿಗಳ ಸಿಬ್ಬಂದಿ ಪಾಲ್ಗೊಂಡು ಸ್ವಚ್ಛತೆ ಪೂರ್ಣಗೊಳಿಸಲಿದ್ದಾರೆ.
- ಎಸ್​.ರಮೇಶ್​
ಪಿಡಿಒ ಆವಣಿ ಗ್ರಾಪಂ