ಮನ್ನಾಎಖೇಳ್ಳಿಯಿಂದ ಬಾಪುರ ಕ್ರಾಸ್ವರೆಗೆ ಬಿಜೆಪಿ ಬೀದರ್ ದಕ್ಷಿಣ ಕ್ಷೇತ್ರದ ವತಿಯಿಂದ ತ್ರಿವರ್ಣ ಧ್ವಜದೊಂದಿಗೆ ಬೈಕ್ ರ‍್ಯಾಲಿ ನಡೆಯಿತು. ಮಂಡಲ ಅಧ್ಯಕ್ಷ ಗುರುನಾಥ ರಾಜಗೀರ, ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಕೋಳಿ, ಚಂದ್ರಯ್ಯ ಸ್ವಾಮಿ, ರಾಜರೆಡ್ಡಿ ಶಾಬಾದ, ಪ್ರಭು ಮೆಂಗಾ, ಸುರೇಶ ಮಾಶೆಟ್ಟಿ, ಸಂತೋಷ ಹಳ್ಳಖೇಡ ಇತರರಿದ್ದರು.
ಚಿಟಗುಪ್ಪ: ದೇಶದ 80ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಬಿಜೆಪಿ ಬೀದರ್ ದಕ್ಷಿಣ ಕ್ಷೇತ್ರದ ವತಿಯಿಂದ ಮನ್ನಾಎಖೇಳ್ಳಿಯಲ್ಲಿ ಶುಕ್ರವಾರ ಸ್ವಚ್ಛತಾ ಅಭಿಯಾನ, ಮಹನೀಯರ ಪ್ರತಿಮೆಗಳಿಗೆ ಪುಷ್ಪನಮನ ಹಾಗೂ ಬೈಕ್ ರ‍್ಯಾಲಿ ನಡೆಯಿತು.
ಬಸವೇಶ್ವರ ವೃತ್ತ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಸುತ್ತಲಿನ ಪ್ರದೇಶವನ್ನು ಮುಖಂಡರು ಹಾಗೂ ಕಾರ್ಯಕರ್ತರು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಮೂಡಿಸಿದರು. ಬಳಿಕ ವಿಶ್ವಗುರು ಬಸವೇಶ್ವರ ಹಾಗೂ ಡಾ.ಅಂಬೇಡ್ಕರ್ ಪ್ರತಿಮೆಗಳಿಗೆ ಪುಷ್ಪನಮನ ಸಲ್ಲಿಸಿ ಅವರ ಸಾಮಾಜಿಕ ಸಂದೇಶ, ಸಮಾನತೆ, ಸ್ವಾಭಿಮಾನ ಮತ್ತು ರಾಷ್ಟ್ರ ನಿರ್ಮಾಣದ ಆದರ್ಶಗಳನ್ನು ಸ್ಮರಿಸಿದರು. ನಂತರ ಮನ್ನಾಎಖೇಳ್ಳಿಯಿಂದ ಬಾಪುರ ಕ್ರಾಸ್ವರೆಗೆ ತಿರಂಗಾದೊಂದಿಗೆ ನಡೆದ ಬೈಕ್ ರ‍್ಯಾಲಿ ನಡೆಸಿ ದೇಶಭಕ್ತಿ ಘೋಷಣೆಗಳನ್ನು ಮೊಳಗಿಸಿದರು.
ಸ್ವಾತಂತ್ರ್ಯೋತ್ಸವ ಧ್ವಜಾರೋಹಣಕ್ಕೆ ಸೀಮಿತವಾಗದೆ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು. ಸ್ವಚ್ಛತೆ, ಶಿಸ್ತು, ರಾಷ್ಟ್ರಾಭಿಮಾನ ಹಾಗೂ ಸಾಮಾಜಿಕ ಜವಾಬ್ದಾರಿ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಸಂಜುಕುಮಾರ ಕೋಳಿ, ಪ್ರಮುಖರಾದ ಚಂದ್ರಯ್ಯ ಸ್ವಾಮಿ, ರಾಜರೆಡ್ಡಿ ಶಾಬಾದ, ಪ್ರಭು ಮೆಂಗಾ, ಸುರೇಶ ಮಾಶೆಟ್ಟಿ, ಹೇಮಾ ತುಕ್ಕಾರೆಡ್ಡಿ, ಸಂತೋಷಿ ನಿಡವಂಚಾ, ಸಂತೋಷ ಹಳ್ಳಖೇಡ, ರಾಜಕುಮಾರ ಪಾಂಚಾಳ, ಪಂಡಿತ ಆರ್ಯ, ಜಗನಾಥ ಪಾಟೀಲ್, ಘಾಳೆಪ್ಪ ಚಟ್ನಳ್ಳಿ, ಚನ್ನಬಸವ ಸೋಪಣ್ಣ, ಶ್ರೀನಿವಾಸ ಪೋದ್ದಾರ, ರಾಮಲು ಮಂತ್ರಿ, ಬಕ್ಕಪ್ಪ ಬಸರೆಡ್ಡಿ, ರಾಕೇಶ ಪಾಟೀಲ್, ಅಯ ಪಾಟೀಲ್, ಕಿರಣ್ ಬೆಲ್ದಾಳೆ, ವಿಠ್ಠಲ್ ಮರಕುಂದಾ, ವಿಲಾಸ ಮೊಗದಾಳ, ಅರವಿಂದ ಬುಳ್ಳಾ, ಶರಣು ಮಡಿವಾಳ, ಸಿದ್ದಪ್ಪ ಬಾವಗಿ, ಪ್ರವಿಣ ತರಿ, ನಾಗೇಶ ಹಳೆಂಬುರೆ, ಗಂಗಾಧರ ಇತರರಿದ್ದರು.