ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಶಿವಗಂಗೆ ಬೆಟ್ಟದಲ್ಲಿ ಶನಿವಾರ ಸಿಸ್ಕೋ ಕಂಪನಿ ಹಾಗೂ ಜಾಗೃತಿ ಟ್ರಸ್ಟ್​ಸ್ವಯಂಸೇವಕರು ಟ್ರಕ್ಕಿಂಗ್​ ಅಂಡ್​ ಪ್ಲಾಕಿಂಗ್​ನಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.  
ರಾಜ್ಯ

ಶಿವಗಂಗೆ ಬೆಟ್ಟದಲ್ಲಿಸ್ವಚ್ಛತಾ ಅಭಿಯಾನ / DABASPETE

ದಾಬಸ್​ಪೇಟೆ : ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಶಿವಗಂಗೆ ಬೆಟ್ಟದಲ್ಲಿ ಶನಿವಾರ ಸ್ವಚ್ಛತಾ ಅಭಿಯಾನ ನಡೆಸಿದರು. ಸಿಸ್ಕೋ ಕಂಪನಿ ಹಾಗೂ ಜಾಗೃತಿ ಟ್ರಸ್ಟ್​ಸ್ವಯಂಸೇವಕರು ಶಿವಗಂಗೆಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡು ತಪ್ಪಲಿನಲ್ಲಿ ಬಿದ್ದ ತ್ಯಾಜ್ಯಗಳನ್ನು ಹೆಕ್ಕಿ ತೆಗೆದರು.
ಕಾರ್ಪೊರೇಟ್​ ಸಂಸ್ಥೆಯೊಂದು ಸಾಮಾಜಿಕ ಹೊಣೆಗಾರಿಕೆ ಮತ್ತು ಸಮುದಾಯದ ಸಹಭಾಗಿತ್ವದ ಉದಾಹರಣೆಯಾಗ್ಚಿ ಸಿಸ್ಕೋ ಹಾಗೂ ಜಾಗೃತಿ ಟ್ರಸ್ಟ್​ನ 130ಕ್ಕೂ ಹೆಚುಸ್ವಯಂ ಸೇವಕರು ಸ್ಥಳಿಯ ಪ್ರತಿನಿಧಿಗಳೊಂದಿಗೆ ಸ್ವಚ್ಛತಾ ಕಾರ್ಯ ನಡೆಸಿದರು. ಪ್ರತಿವರ್ಷ ಲಾಂತರ ಯಾತ್ರಿಕರು ಭೇಟಿ ನೀಡುವ ಪುಣ್ಯಕ್ಷೇತ್ರ ಶಿವಗಂಗೆ ಬೆಟ್ಟವನ್ನು ಸ್ವಚ್ಛಗೊಳಿಸಿದರು.
ಟ್ರೆಕ್ಕಿಂಗ್​ ಅಂಡ್​ ಪ್ಲಾಕಿಂಗ್​ ಎಂಬ ಹೆಸರಿನಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟ್ರೆಕ್ಕಿಂಗ್​ ವೇಳೆ ಕಣ್ಣಿಗೆ ಬಿದ್ದ ಪ್ಲಾಸ್ಟಿಕ್​ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯ ಮಾಡಿದರು. ಸ್ವಯಂಸೇವಕರು ಕಠಿಣ ಮೆಟ್ಟಿಲುಗಳು, ಕಲ್ಲುಗಳ ನಡುವಿನ ದಾರಿಯಲ್ಲಿ ಸಾಗಿ ಬೆಟ್ಟದ ಶಿಖರ ತಲುಪಿದರು. ದೀರ್ಕಾಲದಿಂದ ಪ್ರಕೃತಿ ಸೌಂದರ್ಯ ಹಾಳು ಮಾಡುತ್ತಿದ್ದ ಬಾಟಲಿಗಳು, ಪ್ಲಾಸ್ಟಿಕ್​ ಚೀಲಗಳು ಮತ್ತು ಕಾಗದದ ತುಂಡುಗಳನ್ನು ಸಂಗ್ರಹಿಸಿದರು.
120 ಚೀಲಗಳಲ್ಲಿ ಅಂದಾಜು 1,500 ಕೆ.ಜಿ. ಪ್ಲಾಸ್ಟಿಕ್​ ತ್ಯಾಜ್ಯ ಸಂಗ್ರಹಿಸಿದರು. ಕಸದಿಂದ ಕೂಡಿದ್ದ ಉದ್ಯಾನವನವನ್ನು ಸ್ವಚ್ಛ ಮಾಡಿ ಸ್ಥಳಿಯರ ಬಳಕೆಗೆ ಮುಕ್ತಗೊಳಿಸಿದರು. ಇದೇ ವೇಳೆ ಪ್ಲಾಸ್ಟಿಕ್​ ಬಳಕೆತಡೆಯಲು 10 ಜಾಗೃತಿ ಪೋಸ್ಟರ್​ಗಳನ್ನು ಪ್ರದರ್ಶಿಸಿದರು. ಬೆಟ್ಟದ ಕೆಳಗೆ, ಮೇಲೆ ಅಂಗಡಿಗಳನ್ನು ಇಟ್ಟುಕೊಂಡಿರುವವರು ಹಾಗೂ ಇಲ್ಲಿಗೆ ಬರುವ ಪ್ರವಾಸಿಗರು ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡುವ ಕುರಿತುಜಾಗೃತಿ ಟ್ರಸ್ಟ್​ನಕೆ.ಟಿ. ದೀಪಕ್​ ಮಾಹಿತಿ ನೀಡಿದರು.
ನಿತ್ಯ ಜಾಗೃತಿ : ಸ್ವಚ್ಛತೆ ಕಾರ್ಯ ಒಂದು ದಿನಕ್ಕೆ ಸೀಮಿತವಾದುದಲ್ಲ. ಶಾಶ್ವತ ತ್ಯಾಜ್ಯ ನಿರ್ವಹಣಾ ಕ್ರಮಗಳನ್ನು ಪ್ರೇರೇಪಿಸುವ ಕುರಿತುಸದಾ ಜಾಗೃತಿ ಮೂಡಿಸಲಾಗುವುದು ಎಂದು ಜಾಗೃತಿ ಟ್ರಸ್ಟ್​ನ ಕ್ರಿಸ್ಟಿ ರಾಜ್​

ಅನೇಕ ಸ್ವಯಂಸೇವಕರಿಗೆ ಇದು ಮೊದಲ ಟ್ರಕ್ಕಿಂಗ್​ ಮತ್ತು ಸ್ವಚ್ಛತಾ ಕಾರ್ಯ. ಈ ಕೆಲಸ ಕಷ್ಟವಾಗಿದ್ದರೂ, ಅತ್ಯಂತ ತೃಪ್ತಿದಾಯಕ ಪ್ರಯಾಣವಾಗಿತ್ತು. ಐತಿಹಾಸಿಕ ಸ್ಥಳಗಳನ್ನು ರಸಲು ಮತ್ತು ಸಮುದಾಯಗಳನ್ನು ಪ್ರೇರೇಪಿಸಲು ಈ ರೀತಿಯ ಕಾರ್ಯಗಳು ಮುಖ್ಯ.