ರಬಕವಿ/ಬನಹಟ್ಟಿ ಸಮೀಪದ ಆಸಂಗಿ ಗ್ರಾಮದಲ್ಲಿ ನಡೆದ ಋತುಚಕ್ರ ನೈರ್ಮಲ್ಯ ದಿನಾಚರಣೆ ಅಂಗವಾಗಿ ಜಾಗತಿ ಕಾರ್ಯಕ್ರಮ ನಡೆಯಿತು. ಪಿಡಿಒ ಎಸ್.ವಿ. ಮಠದ, ಸುನಿತಾ ಕುಂಬಾರ, ಎಂ.ಕೆ. ಮುಲ್ಲಾ, ಮೀನಾಕ್ಷಿ ಆರ್., ಸುಮಿತ್ರಾ ಬೋರಗಿ ಇತರರಿದ್ದರು.
- ಪಿಡಿಒ ಎಸ್.ವಿ. ಮಠದ ಹೇಳಿಕೆ
- ಆಸಂಗಿಯಲ್ಲಿ ಋತುಚಕ್ರ ನೈರ್ಮಲ್ಯ ದಿನಾಚರಣೆ
ರಬಕವಿ/ಬನಹಟ್ಟಿ: ಮಹಿಳೆಯರಲ್ಲಿ ಋತುಚಕ್ರವು ಸಹಜ ಪ್ರಕ್ರಿಯೆಯಾಗಿದ್ದು, ಅದರ ಬಗ್ಗೆ ಇರುವ ಮೂಢನಂಬಿಕೆಗಳು ಮತ್ತು ತಪ್ಪು ಕಲ್ಪನೆಗಳನ್ನು ದೂರ ಮಾಡುವ ಅಗತ್ಯವಿದೆ ಎಂದು ಪಿಡಿಒ ಎಸ್.ವಿ. ಮಠದ ಹೇಳಿದರು.
ಸಮೀಪದ ಆಸಂಗಿ ಗ್ರಾಮದ ಆಶ್ರಯ ಪ್ಲಾಟ್‌ನಲ್ಲಿ ಗ್ರಾಮ ಪಂಚಾಯಿತಿ, ಮಹಾಲಕ್ಷ್ಮಿ ಮಹಿಳಾ ಮಂಡಳ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಋತುಚಕ್ರ ನೈರ್ಮಲ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹಳೆಯ ವಿಧಾನಗಳನ್ನು ಅನುಸರಿಸುವುದು ಆರೋಗ್ಯದ ದಷ್ಟಿಯಿಂದ ಹಾನಿಕಾರಕವಾಗಿದ್ದು, ಮಹಿಳೆಯರಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಮಾನಸಿಕ ದಢತೆ ಕುರಿತು ಅರಿವು ಮೂಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸುನಿತಾ ಕುಂಬಾರ, ಎಂ.ಕೆ. ಮುಲ್ಲಾ, ಮೀನಾಕ್ಷಿ ಆರ್., ಸುಮಿತ್ರಾ ಬೋರಗಿ, ಶಾಂತಾ ಹಡಪದ ಸೇರಿ ಮಹಿಳಾ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.