ಕಪ್ಪಲಮಡಗು ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ Cleanliness
- ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸದ ರಾಶಿಗಳು
- 6 ತಿಂಗಳಿಂದ ಕೆಟ್ಟು ನಿಂತಿರುವ ಹೈಮಾಸ್ಟ್ ವಿದ್ಯುತ್ ದೀಪಗಳು
ಮುಳಬಾಗಿಲು: ಸ್ವಚ್ಛ ಭಾರತ ಅಭಿಯಾನವನ್ನು ಅನುಷ್ಠಾನಗೊಳಿಸಬೇಕಾದ ಗ್ರಾಪಂಗಳಿಗೆ ಅನುದಾನ ಕೊರತೆಯಿಂದ ಸ್ವಚ್ಛತೆ ಎಂಬುದು ಗ್ರಾಮಗಳಲ್ಲಿ ಮರೀಚಿಕೆಯಾಗಿದೆ ಎಂಬುದಕ್ಕೆ ರಾಷ್ಟ್ರೀಯ ಹೆದ್ದಾರಿ -75ರಲ್ಲಿ ಇರುವ ಕಪ್ಪಲಮಡಗು ಗ್ರಾಪಂ ಕೈಗನ್ನಡಿಯಾಗಿದೆ.Cleanliness
ಗ್ರಾಮದ ಮಧ್ಯಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಸದ ರಾಶಿಗಳು ಹಾಗೆ ಉಳಿದಿದ್ದು, ರಸ್ತೆ ಬದಿಯಲ್ಲಿರುವ ಗ್ರಾಪಂಗೆ ಮತ್ತು ಇದರ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಆಡಳಿತ ಮಂಡಳಿಗೆ ಇದರ ಅರಿವೇ ಇಲ್ಲದಿರುವುದು ವಿರ್ಪಯಾಸದಂತಿದೆ.
ಗ್ರಾಮಗಳ ಚರಂಡಿ ಸ್ವಚ್ಛತೆ ಕಂಡು ಹಲವು ತಿಂಗಳಾಗಿದ್ದು, ಕನಿಷ್ಠ ಗ್ರಾಪಂ ಕೇಂದ್ರವಾದರೂ ಸ್ವಚ್ಛತೆಯಿಂದ ಕೂಡಿರಬೇಕೆಂಬ ಪರಿಕಲ್ಪನೆ ಇಲ್ಲವಾಗಿರುವುದು ವ್ಯವಸ್ಥೆಯಲ್ಲೇ ಅವ್ಯವಸ್ಥೆ ಮನೆ ಮಾಡಿರುವುದು ಎದ್ದುಕಾಣುತ್ತಿದೆ. ಇನ್ನಾದರೂ ಸ್ವಚ್ಛ ಭಾರತ ಪರಿಕಲ್ಪನೆ ಗ್ರಾಮ ಹಂತದಲ್ಲಿ ಮಾಡುವ ಕಾರ್ಯಕ್ಕೆ ಗ್ರಾಪಂ ಮತ್ತು ಅಭಿವೃದ್ಧಿ ಅಧಿಕಾರಿ ಮತ್ತು ಅಧೀನ ಸಿಬ್ಬಂದಿ ಕಾರ್ಯಯೋನ್ಮುಖವಾಗಬೇಕಿದೆ.
ಹೆದ್ದಾರಿಯ ಈ ಗ್ರಾಪಂನಲ್ಲಿ ಪೆಟ್ರೋಲ್ ಬಂಕ್ಗಳು, ಬಾರ್ ಆ್ಯಂಡ್ ರೆಸ್ಟೋರೆಂಟ್ ಸೇರಿ ವಾಣಿಜ್ಯ ಚಟುವಟಿಕೆಗಳ ಅಂಗಡಿ ಮುಂಗಟ್ಟುಗಳಿದ್ದು, ಆಸ್ತಿ ತೆರಿಗೆ ಸೇರಿ ಸ್ಥಳಿಯವಾಗಿ ಸಂಪನ್ಮೂಲ ಕ್ರೋಡಿಕರಣದಲ್ಲೂ ಗ್ರಾಮ ಪಂಚಾಯಿತಿ ಹಿಂದುಳಿದಂತೆ ಕಾಣುತ್ತಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವೇಳೆ ಗ್ರಾಪಂನ ಅರ್ಧ ಕಟ್ಟಡ ಹೆದ್ದಾರಿಗೆ ಸೇರಿದ್ದು, ಹೆದ್ದಾರಿಯಿಂದ ಬಂದ ಅನುದಾನಲ್ಲಿ ಗ್ರಾಪಂ ಹೊಸ ಕಟ್ಟಡ ನಿಮಾರ್ಣಕ್ಕೆ ಮುಂದಾಗದೆ ಇರುವ ಗ್ರಾಮಕ್ಕೆ ಕಪ್ಪು ಚುಕ್ಕೆಯಾಗಿದೆ.
ಹೊಸ ಕಟ್ಟಡ ನಿಮಾರ್ಣಕ್ಕೆ ಸ್ಥಳ ಅಭಾವ ನಿಮಾರ್ಣವಾಗಿದ್ದು, ಗ್ರಾಮದ ಹೊರಭಾಗದಲ್ಲಿ ತಾಲೂಕು ಆಡಳಿತ ಸರ್ಕಾರಿ ಜಾಗ ಮಂಜೂರು ಮಾಡಲು ಮೀನಮೇಷ ಎಣಿಸುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ಪ್ರದರ್ಶನದ ಗೊಂಬೆಗಳಾದ ಹೈಮಾಸ್ಟ್ ವಿದ್ಯುತ್ ದೀಪಗಳು: ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಜನರ ತೆರಿಗೆ ಹಣದಲ್ಲಿ ಅಳವಡಿಸಿರುವ ಹೈ--ಮಸ್ಟ್ ವಿದ್ಯುತ್ ಬೀದಿ ದೀಪಗಳು ಕೆಟ್ಟು ನಿಂತಿದ್ದು, ಈ ಬಗ್ಗೆಯೂ ಗ್ರಾಮ ಪಂಚಾಯಿತಿಯಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸದೇ ಇರುವುದು ಎದ್ದು ಕಾಣುತ್ತಿದೆ. ಕಪ್ಪಲಮಡಗು ಮತ್ತು ಶ್ರೀರಂಗಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪಗಳು ಪ್ರದರ್ಶನದ ಗೊಂಬೆಗಳಾಗಿದ್ದು, ರಾತ್ರಿ ವೇಳೆ ವಿದ್ಯುತ್ ವಿದ್ಯುತ್ ಕಂಬಗಳೇ ಕಾಣದಂತಾಗುತ್ತವೆ. ಇನ್ನೂ ಶ್ರೀರಂಗಪುರ ಹೈಮಾಸ್ಟ್ ವಿದ್ಯುತ್ ಲೈಟ್ ಕಂಬದಿಂದ ದೀಪಗಳ ಗುಚ್ಛ ಸಡಿಲಗೊಂಡು ನೇತಾಡುತ್ತಿದ್ದು, ಯಾವಾಗ ಬೇಕಾದರೂ ಓಡಾಡುವವರ ಮೇಲೆ ಬೀಳುವುದಕ್ಕಿಂತ ಮೊದಲು ದುರಸ್ತಿ ಮಾಡಬೇಕಿದೆ.
ಗ್ರಾಮಗಳ ಸ್ವಚ್ಛತೆಗೆ ಅನುದಾನ ಕೊರತೆ ಇದೆ. ಸರ್ಕಾರದಿಂದ ಬಂದ ನಂತರ ಸ್ವಚ್ಛತೆ ಕಾರ್ಯಗಳು ಕೈಗೊಳ್ಳಲಾಗುವುದು, ಸ್ಥಳಿಯವಾಗಿ ಸಂಗ್ರಹವಾಗುವ ತೆರಿಗೆ ಗ್ರಾಮಗಳ ಜಲಗಾರರಿಗೆ ವೇತನ ನೀಡಲು ಸಾಕಾಗುತ್ತಿಲ್ಲ. ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಸರಿಪಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು.
3 ವರ್ಷಗಳ ಹಿಂದೆ ಕಪ್ಪಲಮಡಗು ಮತ್ತು ಶ್ರೀರಂಗಪುರ ಬಳಿ ಅಳವಡಿಸಿರುವ ಹೈಮಾಸ್ಟ್ ವಿದ್ಯುತ್ ದೀಪಗಳು ಕೆಟ್ಟು 6 ತಿಂಗಳಾಗಿದ್ದು, ಇವುಗಳನ್ನು ಸರಿಪಡಿಸಬೇಕೆಂದು ಪಿಡಿಒಗೆ ಪತ್ರ ಬರೆಯಲಾಗಿದೆ. ಗ್ರಾಮಗಳ ಸ್ವಚ್ಛತೆಗೂ ಅನುದಾನ ಸರ್ಕಾರ ಬಿಡುಗಡೆ ಮಾಡಬೇಕು. ಗ್ರಾಪಂ ನೂತನ ಕಟ್ಟಡ ನಿಮಾರ್ಣಕ್ಕೆ ಸ್ಥಳ ಗುರುತಿಸಿ ತಹಸೀಲ್ದಾರ್ ಕಚೇರಿಗೆ ದಾಖಲೆಗಳ ಮಾಹಿತಿ ನೀಡಿದ್ದರೂ ಇದುವರೆಗೂ ಸ್ಥಳ ಒದಗಿಸದ ಕಾರಣ ಗ್ರಾಪಂ ಕಟ್ಟಡ ನಿಮಾರ್ಣ ಸಾಧ್ಯವಾಗಿಲ್ಲ.