ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದದಲ್ಲಿ ಸದಸ್ಯರು ಹಳೇ ತಹಸೀಲ್ದಾರ್, ಜಿಲ್ಲಾಧಿಕಾರಿಗಳ ಕಚೇರಿ ಪರಿಸರವನ್ನು ಸ್ವಚ್ಛಗೊಳಿಸಿದರು. ಮಹಾಂತೇಶ ಕುಪ್ಪದ, ಸಚಿನ್ ಚವಾಣ್, ಸಚಿನ ಕಾಳೆ, ಶಂಕರ ಸನಾಪ, ವಿನಾಯಕ ಮುದ್ದೇಬಿಹಾಳ ಇತರರಿದ್ದರು. 
ರಾಜ್ಯ

ಜಿಲ್ಲಾಧಿಕಾರಿ ಕಚೇರಿ ಆವರಣ ಸ್ವಚ್ಛತೆ

ಪ್ರಮುಖ ಮುಖ್ಯಾಂಶಗಳು

  • ಡಾ. ನಾನಾಸಾಹೇಬ ಧರ್ಮಾಧಿಕಾರಿ ಜನ್ಮದಿನ ನಿಮಿತ್ತ ಭಕ್ತರಿಂದ ಸಮಾಜ ಸೇವೆ
ವಿಜಯಪುರ: ಡಾ. ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನ ವತಿಯಿಂದ ವಿಜಯಪುರ, ಅಗಸನಾಳ, ಬರಡೋಲದಿಂದ ಬಂದಿದ್ದ 150 ಸದಸ್ಯರು ಹಳೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳ ಪರಿಸರದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿತ್ತು.
ಒಂದು ಟ್ರ್ಯಾಕ್ಟರ್‌ನಷ್ಟು ಹಸಿ ಕಸ ಹಾಗೂ 8 ರಿಂದ 10 ಟ್ರ್ಯಾಕ್ಟರ್‌ನಷ್ಟು ಒಣಕಸವನ್ನು ಸದಸ್ಯರು ಸಂಗ್ರಹಿಸಿ ವಿಲೇವಾರಿ ಮಾಡಿದರು.
ಮಹಾನಗರ ಪಾಲಿಕೆ ಸಿಬ್ಬಂದಿ ಕಸ ವಿಲೇವಾರಿಗೆ ಸಹಕರಿಸಿದರು.
ಪ್ರತಿಷ್ಠಾನದ ಸದಸ್ಯರು ಪ್ರತಿ ವರ್ಷ ಡಾ. ನಾನಾಸಾಹೇಬ ಧರ್ಮಾಧಿಕಾರಿ ಜನ್ಮದಿನ ನಿಮಿತ್ತ ಸಮಾಜ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪ್ರತಿಷ್ಠಾನ ವಿಜಯಪುರ ಸೇರಿ ಹಲವು ಊರುಗಳಲ್ಲಿ ನಿರಂತರ ಆಧ್ಯಾತ್ಮಿಕ ಶ್ರವಣ ಹಮ್ಮಿಕೊಂಡು ಜನರಲ್ಲಿನ ಅಜ್ಞಾನ ತೊಲಗಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ. ಜತೆಗೆ ಸ್ವಚ್ಛತಾ ಅಭಿಯಾನ, ಬೋರ್‌ವೆಲ್ ರೀಚಾರ್ಚ್, ರಕ್ತದಾನ ಶಿಬಿರ, ವೃಕ್ಷಾರೋಪಣ ಮುಂತಾದ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬಂದಿದೆ.
ಮಹಾಂತೇಶ ಕುಪ್ಪದ, ಸಚಿನ್ ಚವಾಣ್, ಸಚಿನ ಕಾಳೆ, ಶಂಕರ ಸನಾಪ, ವಿನಾಯಕ ಮುದ್ದೇಬಿಹಾಳ, ಅಭಿಷೇಕ ಚೌಹಾಣ, ಅಶೋಕ ಜಾಧವ, ಆರ್ಯ ಭೈರಗೊಂಡ, ಪರಶುರಾಮ ಭಜಂತ್ರಿ, ಚಂದ್ರಕಾಂತ ನಾವಿ, ವಿಠಲ ಚೌಧರಿ ಮುಂತಾದವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.