ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಆಗುತ್ತಿರುವುದನ್ನು ಗ್ರಾಪಂ ಪಿಡಿಒ ಮತ್ತು ಇತರ ಅಧಿಕಾರಿಗಳು ಬುಧವಾರ ಪರಿಶೀಲಿಸಿದರು. 
ರಾಜ್ಯ

ಬಂದಳ್ಳಿ ಗ್ರಾಮಕ್ಕೆ ಶುದ್ಧ ನೀರು ಸರಬರಾಜು

ಯಾದಗಿರಿ: ತಾಲೂಕಿನ ಬಂದಳ್ಳಿ ಗ್ರಾಮದ ಗೌರಿ ಓಣಿಗೆ ಕೊಳವೆ ಬಾವಿಯಿಂದ ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮ ಪಂಚಾಯಿತಿ ಪಿಡಿಒ ಅವರು ತಿಳಿಸಿದ್ದಾರೆ. ಈ ಗ್ರಾಮಕ್ಕೆ ಕಲುಷಿತ ನೀರು ಸರಬರಾಜು ಆಗುತ್ತಿದೆ ಎಂಬ ದೂರಿನಲ್ಲಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ನೀರು ಪರೀಕ್ಷೆಗೆ ಒಳಪಡಿಸಿದಾಗ ಕೊಳವೆಬಾವಿಯಲ್ಲಿ ಕುಡಿಯಲು ಯೋಗ್ಯವಾದ ನೀರು ಇರುತ್ತದೆ ಎಂದು ವರದಿ ಬಂದಿದೆ. ಆದರೂ ಸಾರ್ವಜನಿಕರ ದೂರಿನ ಮೇರೆಗೆ ಒಂದು ತಿಂಗಳ ಹಿಂದೆ ಇದನ್ನು ಬಂದ್​ ಮಾಡಿಸಿ ಭೀಮಣ್ಣ ಅಕ್ಕಿ ಅವರ ಹೊಲದಲ್ಲಿರುವ ಕೊಳವೆ ಬಾವಿಯಿಂದ ಉಚಿತವಾಗಿ ಶುದ್ಧ ನೀರು ಪಡೆದು ಗ್ರಾಮಸ್ಥರಿಗೆ ಸರಬರಾಜು ಮಾಡಲಾಗುತಿದೆ ಎಂದು ಅವರು ತಿಳಿಸಿದ್ದಾರೆ.