Clean drinking water from moisture
ಚಿಂತಾಮಣಿ: ಗಾಳಿಯ ತೇವಾಂಶದಿಂದ ಶುದ್ಧ ಕುಡಿಯುವ ನೀರು ಉತ್ಪಾದಿಸುವ ಘಟಕಕ್ಕೆ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು.
ತಾಲೂಕಿನ ಕೈವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೈನ್ ಯೂನಿರ್ವಸಿಟಿ ಸಹಯೋಗದೊಂದಿಗೆ 1 ಕೋಟಿ 78 ಲಕ್ಷ ರೂ. ವೆಚ್ಚದ ನಾಲ್ಕು ಘಟಕಗಳ ಪೈಕಿ ಎರಡು ಘಟಕಗಳಿಗೆ ಚಾಲನೆ ನೀಡಿ ಮಾತನಾಡಿ, ವಾತಾವರಣ ಮತ್ತು ಗಾಳಿಯಿಂದ ಕುಡಿಯುವ ನೀರಿನ ಉತ್ಪಾದನೆಯ ಘಟಕಕ್ಕೆ ಕೇಂದ್ರ ಸರ್ಕಾರ ಹಣಕಾಸು ನೆರವು ಮತ್ತು ಬೆಂಬಲ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಾಗಿದ್ದು, ಅದಕ್ಕೆ ಬೇಕಾದ ಸ್ಥಳವನ್ನು ರಾಜ್ಯ ಸರ್ಕಾರ ಒದಗಿಸಿದೆ ಎಂದರು.
ಜೈನ್ ವಿಶ್ವವಿದ್ಯಾಲಯಕ್ಕೆ ಹೊದಾಗ ಗೀತಾ ಬಾಲಕೃಷ್ಣ ಈ ವಿಚಾರ ಹೇಳಿದರು. ತಾಲೂಕಿನ ಮುಂಗಾನಹಳ್ಳಿ ಹೋಬಳಿಯ ಇರಗಂಪಲ್ಲಿ ಬಳಿ ಪ್ರಾಯೋಗಿಕವಾಗಿ ಒಂದು ಟಕ ಪ್ರಾರಂಭ ಮಾಡಲಿಕ್ಕೆ ಪ್ರಯತ್ನ ಪಟ್ಟರೂ, ಉದ್ಘಾಟನೆ ಆಗಲಿಲ್ಲ.ನಾನು ಸಚಿವ ಆಗುವುದಕ್ಕಿಂತ ಮುಂಚಿತವಾಗಿ ಅದು ಗೊಂದಲದಲ್ಲಿತ್ತು. ಸಮಸ್ಯೆಗೆ ದಾರಿ ಹುಡುಕಿ ಕೈವಾರದಲ್ಲಿ ಜಾಗ ಕೊಡಿಸಿ ಸೋಮವಾರ ಉದ್ಘಾಟನೆ ನೆರವೇರಿಸಿರುವುದಾಗಿ ಸಚಿವ ಸುಧಾಕರ್ ವಿವರಿಸಿದರು.
ಜೈನ ಯೂನಿವರ್ಸಿಟಿ ನಿರ್ದೇಶಕ ಪ್ರೊ.ಗೀತಾ ಬಾಲಕೃಷ್ಣ ಮಾತನಾಡಿದರು.
ಡಿಎಚ್ಒ ಡಾ.ಮಹೇಶ್, ಟೆಕ್ನಿಕಲ್ ಇಂಜಿನಿಯರ್ ಸೆಂತಿಲ್, ಡಾ.ಸಹಕಾರ ಮೋಹನ್, ಗ್ಯಾರಂಟಿ ಯೋಜನೆ ಸಮಿತಿಯ ತಾಲೂಕು ಅಧ್ಯಕ್ಷ ಮುನಿನಾರಾಯಣಪ್ಪ, ಜಿಪಂ ಮಾಜಿ ಸದಸ್ಯ ಎಸ್.ಎನ್.ಚಿನ್ನಪ್ಪ, ಮಾಜಿ ಗ್ರಾಪಂ ಅಧ್ಯಕ್ಷ ಟೆಂಟ್ ಸೀನಪ್ಪ, ನಂಜುಂಡಪ್ಪ, ಮಂಜುನಾಥ್, ಚಂದ್ರಪ್ಪ, ಅಂಬರೀಷ್, ಮುಸ್ತಫಾ, ಅಸ್ಲಾಂ ಪಿಟ್ಟು, ಮೌಲಾ, ಮಂಜುನಾಥ್ರೆಡ್ಡಿ ಇತರರು ಇದ್ದರು.