ಬೀದರ್ ತಾಲೂಕಿನ ಕಾಡವಾದ ಸಮೀಪದ ವಿಂಟೇಜ್ ರಿಟ್ರೀಟ್ ಸಭಾಂಗಣದಲ್ಲಿ ಅಲಿಯಂಬರ್ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಸಾಗರ್ ಪಡಸಲೆ, ದಿಲೀಪ್ ರಾಯಗೊಂಡೆ, ಮನ್ಮಥ್ ಮಡಿವಾಳ ಇತರರಿದ್ದರು.
- ಅಲಿಯಂಬರ್ ಸರ್ಕಾರಿ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ಬೀದರ್: ತಾಲೂಕಿನ ಅಲಿಯಂಬರ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 2006ರ ಎಸ್ಎಸ್ಎಲ್ಸಿ ಬ್ಯಾಚ್ನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾಡವಾದ ಸಮೀಪದ ವಿಂಟೇಜ್ ರಿಟ್ರೀಟ್ ಸಭಾಂಗಣದಲ್ಲಿ ಬುಧವಾರ ಜರುಗಿತು.
20 ವರ್ಷಗಳ ಬಳಿಕ ಹಳೆಯ ವಿದ್ಯಾರ್ಥಿಗಳು ಸಮ್ಮಿಲಗೊಂಡರು. ಶಾಲಾ ದಿನಗಳು ಹಾಗೂ ಸ್ನೇಹದ ಮಧುರ ಣಗಳನ್ನು ಪರಸ್ಪರ ಹಂಚಿಕೊಂಡರು. ಆಟಗಳು, ಮನೋರಂಜನಾ ಚಟುವಟಿಕೆಗಳು ಹಾಗೂ ಫೋಟೋ ಸೆಷನ್ ಸಂಭ್ರಮ ಇಮ್ಮಡಿಗೊಳಿಸಿದವು.
ಸ್ನೇಹ ಅಮೂಲ್ಯ ಸಂಪತ್ತು. ಕಾಲ, ಪರಿಸ್ಥಿತಿಗಳು ಬದಲಾಗಬಹುದು. ಆದರೆ, ನಿಜವಾದ ಸ್ನೇಹ ಎಂದೂ ಬದಲಾಗುವುದಿಲ್ಲ. ಎರಡು ದಶಕಗಳ ನಂತರವೂ ಹಳೆಯ ವಿದ್ಯಾರ್ಥಿಗಳು ಗಾಢ ಗೆಳೆತನ, ಪರಸ್ಪರ ಪ್ರೀತಿ, ವಿಶ್ವಾಸ ಉಳಿಸಿಕೊಂಡಿರುವುದು ಇದಕ್ಕೆ ನಿದರ್ಶನ ಎಂದು ಹಳೆಯ ವಿದ್ಯಾರ್ಥಿ ಸಾಗರ್ ಪಡಸಲೆ ಹೇಳಿದರು.
ಹಳೆಯ ವಿದ್ಯಾರ್ಥಿಗಳಾದ ಮನ್ಮಥ್ ಮಡಿವಾಳ, ದೇವಿದಾಸ ಢೋಣೆ, ದಿಲೀಪ್ ರಾಜಕುಮಾರ ರಾಯಗೊಂಡೆ, ಪ್ರಕಾಶ್ ಮಾಳೆ, ಅನೀಲ ಜ್ಯಾಂತೆ, ಗಣೇಶ, ಶಿವಕುಮಾರ ಕಪಲಾಪುರೆ, ಭಗವಾನ್, ರಾಜಕುಮಾರ ಜಮಗೆ, ಭಗವಂತ ಸಾಗೆ, ಸತೀಶ್, ಬಸಪ್ಪ ಬಸ್ತೆ, ನರಸಪ್ಪ ಹೊನ್ನಿಕೇರೆ, ನೋಹನ್ ಮುಗನೂರೆ, ಓಂಕಾರ, ುಡುಸಾಬ್, ಆನಂದ ಮಡಿವಾಳ, ವಿಜಯಕುಮಾರ, ತುಕಾರಾಮ, ಭಗವಂತ ರಾಯಗೊಂಡ, ಸೋಮನಾಥ ಸಾಗೆ, ದತ್ತಾತ್ರಿ, ಪೇತ್ರಪ್ಪ, ಮೀನಾ ಉಪ್ಪೆ, ಸುಧಾರಾಣಿ ಔರಾದೆ, ನಾಗಮ್ಮ, ಜಯಶ್ರೀ ಖಂಡ್ರೆ, ಜಯಶ್ರೀ ಶಿವಶೆಟ್ಟೆ, ಲ$್ಮ, ಬಬಿತಾ, ಅಂಬಿಕಾ ಇತರರಿದ್ದರು.