Clash between two groups in Malur 
ರಾಜ್ಯ

ಮಾಲೂರಿನಲ್ಲಿ ಎರಡು ಗುಂಪುಗಳ ಹೊಡೆದಾಟ

ಕೋಲಾರ ಡೆಸ್ಕ್
ಕೋಲಾರ: ಮಾಲೂರು ನಗರದಲ್ಲಿ ಶುಕ್ರವಾರ ರಾತ್ರಿ ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದಾರೆ.
ಹೊಸಕೋಟೆ ರಸ್ತೆಯಲ್ಲಿ ಬೆಳ್ಳಾವಿ ಹಾಗೂ ಕೊಂಡರಹಳ್ಳಿ ಯುಕವಕರ ಗುಂಪಿನ ನಡುವೆ ಗಲಾಟೆಯಾಗಿದ್ದು, ಪೊಲೀಸರ ಮಧ್ಯ ಪ್ರವೇಶಿಸಿ ಗುಂಪು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದರು.
ಬೆಳ್ಳಾವಿ ಗ್ರಾಮದ ಮದನ್​ ಕುಡಿಯಲು ನೀರು ತರಲು ಶುದ್ಧ ನೀರಿನ ಟಕದ ಬಳಿಗೆ ಆಗಮಿಸಿದ್ದಾರೆ. ಇದೇ ವೇಳೆ ಕೊಂಡರಹಳ್ಳಿಯ ಧನುಷ್​ ಸೇರಿ ಇತರರು ಆಗಮಿಸಿ ಮೊದಲಿಗೆ ಮದನ್​ನನ್ನು ಚುಡಾಯಿಸಿದ್ದಾರೆ. ಇದರಿಂದ ಕೋಪಗೊಂಡು ಏಕೆ ಹೀಗೆ ಮಾಡ್ತೀದಿರಾ ಎಂದು ಪ್ರಶ್ನಿಸಿದ್ದಕ್ಕೆ ಕುಡಿದ ಅಮಲಿನಲ್ಲಿದ್ದ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದೆ.
ಹೀಗೆ ಕೆಲ ನಿಮಿಷಗಳು ಕಳೆಯುತ್ತಿದ್ದಂತೆ ಯುವಕರು ಇಬ್ಬರು ಎರಡೂ ಕಡೆಯ ಗ್ರಾಮಸ್ಥರನ್ನು ಸ್ಥಳಕ್ಕೆ ಕರೆಯಿಸಿಕೊಂಡ ಪರಿಣಾಮ ಜನಜಂಗುಳಿ ಸೇರಿತ್ತು, ಇದರಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ವಿಷಯ ತಿಳಿದ ಮಾಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕರನ್ನು ಸಮಾಧಾನಪಡಿಸಲು ಯತ್ನಿಸಿದರು. ಇದಕ್ಕೆ ಬಗ್ಗದ ಕಾರಣ ಲು ಪ್ರಹಾರ ಮಾಡಿ ಚದುರಿಸಿದರು. ಟನೆಗೆ ಕಾರಣರಾದವರನ್ನು ವಶಕ್ಕೆ ಪಡೆದು ನಂತರ ಬಿಟ್ಟು ಕಳುಹಿಸಿದ್ದಾರೆ.