ಹುಣಸಗಿ ಪಟ್ಟಣದ ಹೊರ ವಲಯದಲ್ಲಿ ಲೋಕೋಪಯೋಗಿ ಇಲಾಖೆಯಿಂದ ೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸರ್ಕ್ಯೂಟ್ ಹೌಸ್. 
ರಾಜ್ಯ

ಪುಂಡರ ದಾಳಿಗೆ ನಲುಗಿದ ಸರ್ಕ್ಯೂಟ್ ಹೌಸ್

ಪ್ರಮುಖ ಮುಖ್ಯಾಂಶಗಳು

  • ಅಗತ್ಯ ಸೌಲಭ್ಯ ಕಲ್ಪಿಸದೆ ಉದ್ಘಾಟನೆ
  • ಕಿಟಕಿ ಗಾಜು ಹಾಕಿ ಹಸ್ತಾಂತರಿಸುವAತೆ ಪಿಡಬ್ಲುಡಿ ಇಲಾಖೆ ಸೂಚನೆ
ಹುಣಸಗಿ : ಪಟ್ಟಣದ ಹೊರ ವಲಯದಲ್ಲಿರುವ ಸರ್ಕ್ಯೂಟ್ ಹೌಸ್ ಉದ್ಘಾಟನೆಯಾದ ಕೆಲ ತಿಂಗಳಿನಲ್ಲಿಯೇ ಹೌಸ್‌ನ ಎಲ್ಲ ಕಿಟಕಿಗಳು ಗಾಜು ಕಿಡಿಗೇಡಿಗಳ ಕಾಟದಿಂದ ಪುಡಿ ಪುಡಿಯಾಗಿದ್ದು, ಒಟ್ಟಿನಲ್ಲಿ ಪುಂಡರ ದಾಳಿಯಿಂದ ಸರ್ಕ್ಯೂಟ್ ಹೌಸ್ ಅಕ್ಷರಶಃ ನಲುಗಿದೆ.
೪ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸರ್ಕಾರಿ ಕಟ್ಟಡದ ಕಿಟಕಿಗಳ ಗಾಜು ಒಡೆದಿರುವುದು ಸಾರ್ವಜನಿಕ ಆಸ್ತಿಯ ಸುರಕ್ಷತೆ ಬಗ್ಗೆ ಹತ್ತು ಹಲುವು ಪ್ರಶ್ನೆಗಳು ಕಾಡಲಾರಂಭಿಸಿವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಅಽಕಾರಿಗಳು ಹಾಗೂ ಗಣ್ಯ ಅತಿಥಿಗಳ ವಾಸ್ತವ್ಯಕ್ಕಾಗಿ ಅತ್ಯಾಧುನಿಕ ಸೌಲಭ್ಯದೊಂದಿಗೆ ಈ ಸರ್ಕ್ಯೂಟ್ ಹೌಸ್ ನಿರ್ಮಿಸಲಾಗಿದೆ ಆದರೆ ಇಷ್ಟು ದುಡ್ಡು ಖರ್ಚು ಮಾಡಿ ನಿರ್ಮಿಸಿದರೂ ಉಪಯೋಗಕ್ಕೆ ಬಾರಂತಾಗಿದೆ.
ಉಪಯೋಗಕ್ಕೆ ಬಾರದ ಹೌಸ್: ಸರ್ಕ್ಯೂಟ್ ಹೌಸ್‌ನಲ್ಲಿ ಪೂರ್ಣ ಪ್ರಮಾಣದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದೆ ತರಾತುರಿಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದ್ದಾರೆ. ಆದರೆ ಹೌಸ್‌ನಲ್ಲಿ ಕುಡಿಯಲು ಮತ್ತು ಬಳಸಲು ನೀರಿಲ್ಲ. ಕಾಟ್, ಬೆಡ್ ಇಲ್ಲ, ಸೋ-Á ಇಲ್ಲ. -Àರ್ನಿಚರ್ ಕೆಲಸವೂ ಆಗಿಲ್ಲ ಇಷ್ಟೇಲ್ಲ ಅಗತ್ಯ ಸೌಲಭ್ಯ ಕಲ್ಪಿಸದೆ ಉದ್ಘಾಟನೆಯಾದರೂ ಯಾಕೆ ಮಾಡಿದರೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಜೋರಾಗಿ ಹರಿದಾಡುತ್ತಿದೆ.
ಈ ಕಟ್ಟಡ ನಿರ್ಮಾಣ ಮಾಡಿದ ಗುತ್ತಿಗೆ ದಾರ ಈವರೆಗೆ ಪಿಡಬ್ಲ್ಯುಡಿ ಇಲಾಖೆಗೆ ಹಸ್ತಾಂತರಿಸಿಲ್ಲೆ ಎಂಬುದು ತಿಳಿದು ಬಂದಿದ್ದು, ಇನ್ನೂ ಕಾರ್ಯನಿರತವಾಗದ ಕಟ್ಟಡದ ಕಿಟಕಿಯ ಗಾಜು ಹಾನಿಗೊಳಗಾಗಿರುವುದನ್ನು ಗಮನಿಸಿದ ಪಿಡಬ್ಲ್ಯುಡಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಅಲ್ಲದೆ ಇಂತಹ ಘಟನೆ ಮರುಕಳಿಸದಂತೆ ಸಿಸಿ ಕ್ಯಾಮರಾ ಅಳವಡಿಸುವುದು ಜರೂರಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಸರ್ಕಾರ ಕೋಟ್ಯಂತರ ರೂ. ಹಣ ಖರ್ಚು ಮಾಡಿ ನಿರ್ಮಾಣ ಮಾಡಿರುವ ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡುವುದು ಕಾನೂನು ಬಾಹೀರ ಕೃತ್ಯ. ಈ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವ ಜವಾಬ್ದಾರಿ ಕೇವಲ ಸರ್ಕಾರದಷ್ಟೇ ಕೆಲಸ ಅಲ್ಲ. ಅದು ಪ್ರತಿಯೊಬ್ಬ ನಾಗರಿಕನದ್ದಾಗಿದೆ ಎಂಬುದು ಯಾರು ಮರೆಯುಂವತಿಲ್ಲ ಎಂಬುದು ಅನೇಕರ ಅಭಿಪ್ರಾಯವಾಗಿದೆ.
"

ಸರ್ಕ್ಯೂಟ್ ಹೌಸ್ ಹೆಸರಿಗೆ ಮಾತ್ರ ಉದ್ಘಾಟನೆ ಮಾಡಲಾಗಿದೆ. ಆದರೆ ಅಲ್ಲಿ ಯಾವುದೇ ಮೂಲಸೌಲಭ್ಯಗಳಿಲ್ಲ. ಬಳಕೆಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕೂಡ ಇಲ್ಲ. ಹೀಗಾಗಿ ಇಷ್ಟು ಅವಸರದಲ್ಲಿ ಉದ್ಘಾಟನೆ ಮಾಡುವ ಅಗತ್ಯವಾದರೂ ಏನಿತ್ತು.?| ಕಾಶೀನಾಥ ಹಾದಿಮನಿಜಿಲ್ಲಾಧ್ಯಕ್ಷ ರಾಷ್ಟಿçÃಯ ಭ್ರಷ್ಟಾಚಾರ ವಿರೋಽ ದಳ


"

ಸರ್ಕ್ಯೂಟ್ ಹೌಸ್ ಉದ್ಘಾಟನೆಗೊಂಡಿದ್ದು, ಕಿಟಕಿಯ ಗ್ಲಾಸ್‌ಗಳು ಹಾನಿಯಾಗಿದ್ದು ಇಲಾಖೆ ಗಮನಕ್ಕೆ ಬಂದಿದೆ. ಆದರೆ ಗುತ್ತಿಗೆದಾರರಿಗೆ ದುರಸ್ತಿಮಾಡಿ ಇಲಾಖೆಗೆ ಹಸ್ತಾಂತರಿಸುವAತೆ ಸೂಚನೆ ನೀಡಲಾಗಿದೆ.| ಎಸ್.ಜಿ.ಪಾಟೀಲ್ಎಇಇ ಪಿಡಬ್ಲ್ಯುಡಿ ಸುರಪುರ