ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪ್ರತ್ಯಂಗಿರಾ ದೇವಿ ಅಲಂಕಾರ ಮಾಡಲಾಗಿತ್ತು.
ದೇವನಹಳ್ಳಿ : ಪಟ್ಟಣದ ಹಳೇ ತಾಲೂಕು ಕಚೇರಿ ರಸ್ತೆಯ ಪಾರ್ಕ್ ಸರ್ಕಾರಿ ಶಾಲೆ ಪಕ್ಕದಲ್ಲಿರುವ ಶ್ರೀ ಚೌಡೇಶ್ವರಿದೇವಿ ದೇವಾಲಯದಲ್ಲಿ 13ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರಿತು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾನುವಾರ ಮಹಾಸಂಕಲ್ಪ, ಅಭಿಷೇಕ, ಸ್ವಸ್ತಿ ಪುಣ್ಯಾಹ, ದೇವನಾಂದಿ ಕಳಸಸ್ಥಾಪನೆ, ಅಷ್ಟಾವಧಾನ ಸೇವೆ, ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಸೋಮವಾರ ಬೆಳಗ್ಗೆ ಮಹಾ ಸಂಕಲ್ಪ, ಅಭಿಷೇಕ, ನಂತರ ಬೆಂಗಳೂರಿನ ಮೋಹನ್ಕುಮಾರ್ಶಾಸ್ತ್ರಿ ತಂಡದಿಂದ ನವ ಚಂಡಿಕಾಹೋಮ, ಮಧ್ಯಾಹ್ನ ಪೂರ್ಣಾಹುತಿ ನಂತರ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪ್ರತ್ಯಂಗಿರಾದೇವಿ ಅಲಂಕಾರ ಮಾಡಲಾಗಿತ್ತು. ಶ್ರೀ ಚೌಡೇಶ್ವರಿ ದಾಸೋಹ ಭವನದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ಮಧ್ಯಾಹ್ನ ಅಣಿಘಟ್ಟ ಶ್ರೀ ಮಾರುತಿ ಯೋಗಾಶ್ರಮದ ಪರಶಿವದಾಸ್ ಗುರೂಜಿ ಮತ್ತು ಅಶ್ವತ್ಥ ಗುರೂಜಿ ಶಿಷ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳೆಯರು ಆರತಿ ಕಳಸ ಹೊತ್ತು ದೇವಿಯ ಚಿನ್ನಲೇಪಿತ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
ದೇವಾಲಯಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ, ಪಿ.ಗಂಗಾಧರ, ಪಾಪಣ್ಣ, ಗಂಗಾಧರಪ್ಪ, ಪುರಸಭೆ ಮಾಜಿ ಸದಸ್ಯ ಪಿ.ಜಯರಾಮ್, ಎನ್.ಮುನಿರಾಜು,ಬಸ್ ಮಾಲೀಕ ರಾಜು, ಹನುಮಂತಪ್ಪ, ನಿವೃತ್ತ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ತೇಜ, ಗೋಪಾಲ್, ಶ್ರೀರಾಮಯ್ಯ, ಅಶ್ವತ್ಥ, ಪ್ರಭು, ಶಿಕ್ಷಕ ಪುಟ್ಟಸ್ವಾಮಿ, ಪುಟ್ಟಣ್ಣ, ನಿವೃತ್ತ ಎಂಜಿನಿಯರ್ ನರಸಿಂಹರಾಜು ಇತರರು ಇದ್ದರು.