ಗೌರಿಬಿದನೂರಿನ ಸೆಂಟ್​ ಆನ್ಸ್​ ಸ್ಕೂಲ್​, ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 8ನೇ ಆಲ್​ ಇಂಡಿಯಾ ಓಪನ್​ ಕರಾಟೆ ಚಾಂಪಿಯನ್​ ಶಿಪ್​ ಸ್ಪರ್ಧೆಯಲ್ಲಿ ವಿಜೇತರಾದ ಚಿಂತಾಮಣಿ ಕರಾಟೆ ಪಟುಗಳೊಂದಿಗೆ ಕರಾಟೆ ಶಿಕ್ಷಕ ಲೋಕೇಶ್​, ರೆನ್ಷಿ ನಟರಾಜ್​, ಎಲ್​.ಸೆನ್ಸಾಯ್​ ಮಲ್ಲೇಶ್​ಚಂದ್​ ಇದ್ದರು. 
ರಾಜ್ಯ

ಕರಾಟೆಯಲ್ಲಿ ಚಿಂತಾಮಣಿ ಮಕ್ಕಳ ಸಾಧನೆ

ಗೌರಿಬಿದನೂರಿನ ಸೆಂಟ್​ ಆನ್ಸ್​ ಸ್ಕೂಲ್​, ಪಿಯು ಕಾಲೇಜಿನಲ್ಲಿ ಭಾನುವಾರ ಜಪಾನ್​ ಕರಾಟೆ ಶೋಟೋಕನ್​ ಅಕಾಡೆಮಿ 8ನೇ ಆಲ್​ ಇಂಡಿಯಾ ಓಪನ್​ ಕರಾಟೆ ಚಾಂಪಿಯನ್​ ಶಿಪ್​ ಸ್ಪರ್ಧೆಯಲ್ಲಿ ಚಿಂತಾಮಣಿ ನಗರದ ಆರ್​.ಕೆ. ಶಾಲೆ, ಜ್ಯೋತಿ ಶಾಲೆ, ಆದಿತ್ಯ ಶಾಲೆ, ಪ್ರಗತಿ ಶಾಲೆ, ಕಿಶೋರ್​ ಶಾಲೆ ಹಾಗೂ ದೆಹಲಿ ಪಬ್ಲಿಕ್​ ಶಾಲೆಯ ಮಕ್ಕಳು ಭಾಗವಹಿಸಿ ಜಯಗಳಿಸಿದ್ದಾರೆ.

ಜಪಾನ್​ನ ಒಎಸ್​ ಗೋಜು ರೇ ಕರಾಟೆ ಆ್ಯಂಡ್​ ಸ್ಪೋರ್ಟ್ಸ್​ ಡು ಇಂಡಿಯಾದ ಗ್ರಾಂಡ್​ ಮಾಸ್ಟರ್​ ಕ್ಯೋಶಿ ವಿ. ಲೋಕೇಶ್​, ಕರಾಟೆ ಮಾಸ್ಟರ್​ ರೆನ್ಷಿ ನಟರಾಜ್​ ಮತ್ತು ಕರಾಟೆ ಮಾಸ್ಟರ್​ ಸೆನ್ಸಾಯ್​ ಮಲ್ಲೇಶ್​ಚಂದ್​ ಎಲ್​. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.
ಕಾಟಾಸ್​&ಹೆಣ್ಣು ಮಕ್ಕಳ ಯೆಲ್ಲೋ ಬೆಲ್ಟ್​ ವಿಭಾಗದಲ್ಲಿ ಆದಿತ್ಯ ಶಾಲೆ ಶ್ರೇಯಾ ಪ್ರಥಮ ಸ್ಥಾನ, ಆರ್​.ಕೆ. ಶಾಲೆ ಜಸ್ಲೀನಾ ದ್ವೀತಿಯ, ಡೆಲ್ಲಿ ಪಬ್ಲಿಕ್​ ಶಾಲೆ ಮಂಜುನಾಥ ತೃತೀಯ ಸ್ಥಾನ. ಆರೆಂಜ್​ ಬೆಲ್ಟ್​ ವಿಭಾಗದಲ್ಲಿ ಆರ್​.ಕೆ. ಶಾಲೆ ರಿತ್ವಿಕಾ ರೆಡ್ಡಿ ದ್ವೀತಿಯ ಸ್ಥಾನ, ಗಂಡು ಮಕ್ಕಳ ಆರೆಂಜ್​ ಬೆಲ್ಟ್​ ವಿಭಾಗದಲ್ಲಿ ಆರ್​.ಕೆ.ಶಾಲೆ ವ್ನಿಶ್​ ಪ್ರಥಮ, ಸುಧಾಕರ್​ ದ್ವೀತಿಯಾ ಸ್ಥಾನ. ಪ್ರಥಮ ವರ್ಷದ ಗ್ರೀನ್​ ಬೆಲ್ಟ್​ ವಿಭಾಗದಲ್ಲಿ ಪ್ರಗತಿ ಶಾಲೆ ಚೇತನ್​ ದ್ವೀತಿಯ ಸ್ಥಾನ, ಜ್ಯೋತಿ ಶಾಲೆ ಶ್ರೇಯಸ್​ ತೃತೀಯ. ಬ್ಲೂ ಬೆಲ್ಟ್​ ವಿಭಾಗದಲ್ಲಿ ಜ್ಯೋತಿ ಶಾಲೆ ಕೆ.ಆರ್​.ಟೈಗರ್​ ನಿಖಿಲ್​ ಪ್ರಥಮ. ಪರ್ಪಲ್​ ಬೆಲ್ಟ್​ ವಿಭಾಗದಲ್ಲಿ ಕಿಶೋರ್​ ಶಾಲೆ ಧುಷಾಂತ್​ ಪ್ರಥಮ ಸ್ಥಾನ. ಬ್ರೌನ್​ ಬೆಲ್ಟ್​ ವಿಭಾಗದಲ್ಲಿ ಜ್ಯೋತಿ ಶಾಲೆಯ ಅಂಕಿತ್​ ಪ್ರಥಮ ಸ್ಥಾನ, ಜ್ಯೋತಿ ಶಾಲೆಯ ಶೌರಿಶ್​ ದ್ವೀತಿಯ. 25 ರಿಂದ 30 ಕೆಜಿ ಗಂಡುಮಕ್ಕಳ ಕುಮಿಟೆ ವಿಭಾಗದಲ್ಲಿ ಆರ್​.ಕೆ.ಶಾಲೆ ಚರಿತ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.