Chintamani APMC turns into a muddy field.
ಜಿಲ್ಲೆಯಲ್ಲಿ ಅತಿ ದೊಡ್ಡ ಟೊಮ್ಯಾಟೊ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಿಂತಾಮಣಿ ಮಾರುಕಟ್ಟೆ ನರಕಸದೃಶವಾಗಿದೆ. ಗುತ್ತಿಗೆದಾರರ ಬೇಜವಾಬ್ದಾರಿತನ ಹಾಗೂ ಅಧಿಕಾರಿಗಳ ರ್ನಿಲಕ್ಷ$್ಯದಿಂದಾಗಿ ಇಡೀ ಮಾರುಕಟ್ಟೆ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ಮಾರ್ಕೆಟ್ನ ಚರಂಡಿಯಲ್ಲಿ ಟೊಮ್ಯಾಟೊ ರಾಶಿ ಕೊಳೆತು ಗಬ್ಬು ನಾರುತ್ತಿದೆ, ಅದರ ಮೇಲೆ ವಾಹನಗಳು ಓಡಾಡಿ ಕೆಸರುಗದ್ದೆಯಾಗಿದೆ. ಒಂದು ಸಲ ಬಂದು ಅಧಿಕಾರಿಗಳು ನೋಡಿ. ಕೊಳೆತ ವಾಸನೆಗೆ ಇಲ್ಲಿ ಯಾರೂ ಕಾಫಿ ಕುಡಿಯೋಲ್ಲ, ಟಿಫನ್ ಮಾಡಲ್ಲ. ಆ ರೀತಿ ಇದೆ ಮಾರುಕಟ್ಟೆ ಸ್ಥಿತಿ.
— ಶಂಕರ್ ವ್ಯಾಪಾರಿ
ಮಾರುಕಟ್ಟೆಯ ತುಂಬೆಲ್ಲ ಕೊಳೆತು ನಾರುತ್ತಿರುವ ಟೊಮ್ಯಾಟೊ ರಾಶಿ ಹಾಗೂ ಎಲ್ಲೆಂದರಲ್ಲಿ ಹರಿಯುತ್ತಿರುವ ಕೊಳೆತ ನೀರು, ನಿತ್ಯ ಸಾವಿರಾರು ಟನ್ ವಹಿವಾಟು ನಡೆಯುವ ಈ ಜಾಗದಲ್ಲಿ ಕನಿಷ್ಠ ಸ್ವಚ್ಛತೆಯೂ ಇಲ್ಲದಂತಾಗಿದೆ. ದಿನವಿಡೀ ದುಡಿಯುವ ದಲ್ಲಾಳಿಗಳು, ವ್ಯಾಪಾರಸ್ಥರು ಹಾಗೂ ದೂರದ ಊರುಗಳಿಂದ ಬರುವ ರೈತರು ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿಯಿದೆ.
ಮಾರುಕಟ್ಟೆಗೆ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ, ದೇಶದ ಉತ್ತರ ಭಾಗದ ವಿವಿಧ ರಾಜ್ಯಗಳಿಂದ ಪ್ರತಿನಿತ್ಯ ನೂರಾರು ವ್ಯಾಪಾರಸ್ಥರು ಆಗಮಿಸುತ್ತಾರೆ.
ಟೊಮ್ಯಾಟೋ ಗಲೀಜು ಯಾರಾದರೂ ಬಂದು ನೋಡಿದ್ದಾರಾ? ಗುತ್ತಿಗೆದಾರರು ಅಡ್ರೆಸ್ಗಿಲ್ಲ. ಮೂವರು ಕ್ಲೀನಿಂಗ್ಗೆ ರ್ಬತಾರೆ, ಅರ್ಧ ಗಂಟೆ ಕೆಲಸ ಮಾಡಿ ಹೊರಟು ಬಿಡ್ತಾರೆ. ಅದಕ್ಕೆ ಬೇಕಾದರೆ ನಾವು ಗುತ್ತಿಗೆದಾರರಿಗೆ. ನೋಟಿಸ್ ಕೊಡಿ ಎಂದು ಹೇಳುತ್ತಿದ್ದರೂ ಗಮನಹರಿಸುವವರೇ ಇಲ್ಲ, ಒಂದು ತಿಂಗಳಿಂದ ಟೊಮ್ಯಾಟೊ ಬಿದ್ದಿದ್ದು ಅದರಲ್ಲಿ ಹುಳುಗಳಾಗಿವೆ, ಮಂಡಿಯಲ್ಲಿ ಕೆಲಸ ಮಾಡುವ ಇಬ್ಬರು ಮುದುಕರ ಕಾಟಚಾರಕ್ಕೆ ಬಂದು ಕ್ಲೀನ್ ಮಾಡ್ತಾರೆ.ಹೆಸರು ಹೇಳಲು ಇಚ್ಛಿಸದ ಲಾರಿ ಚಾಲಕ
— ಹೆಸರು ಹೇಳಲು ಇಚ್ಛಿಸದ ಲಾರಿ ಚಾಲಕ
ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಿಂದ ಮಾರುಕಟ್ಟೆಗೆ ಸರಕುಗಳು ಬರುತ್ತವೆ. ಆದರೆ ಸ್ವಚ್ಛತೆಗೆ ಆದ್ಯತೆ ನೀಡುವಲ್ಲಿ ಗುತ್ತಿಗೆದಾರರು ಸಂಪೂರ್ಣ ರ್ನಿಲಕ್ಷ$್ಯ ತಾಳಿದ್ದಾರೆ.
ಚಿಂತಾಮಣಿ ಎಪಿಎಂಸಿಯಲ್ಲಿ ಕಸ ವಿಲೇವಾರಿ ಮಾಡುವ ಗುತ್ತಿಗೆದಾರನ ರ್ನಿಲಕ್ಷದಿಂದ ಟೊಮ್ಯಾಟೋ ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲ. ಟೆಂಡರ್ ಹಣ ನೀರು ಪಾಲು: ಮಾರುಕಟ್ಟೆ ಸ್ವಚ್ಛತೆಗಾಗಿ ಪ್ರತಿವರ್ಷ ಲಾಂತರ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗುತ್ತದೆ. ಆದರೆ ಗುತ್ತಿಗೆದಾರರು ಹಣ ಜೇಬಿಗಿಳಿಸಿಕೊಂಡು ಸ್ವಚ್ಛತೆ ಕೈಬಿಟ್ಟಿದ್ದಾರೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳಿಗೆ ನೂರಾರು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ಮೌನ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಟೊಮ್ಯಾಟೊ ಮಾರ್ಕೆಟ್ನ ಕಸವಿಲೇವಾರಿಗೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ವಹಿಸಿದ್ದೇವೆ, ಅವರು ವಾಹನಗಳನ್ನು ಇಟ್ಟು ಸ್ವಚ್ಛ ಮಾಡ್ತಾ ಇದ್ದಾರೆ, ಇದೀಗ ಟೊಮ್ಯಾಟೊ ಸೀಸನ್. ಹೆಚ್ಚು ಆವಕ ಆಗುತ್ತಿದೆ. ಸ್ವಚ್ಛತೆಯಲ್ಲಿ ವಿಳಂಬವಾಗಿದೆ. ಈ ಬಗ್ಗೆ ಗುತ್ತಿಗೆದಾರನಿಗೆ ನೋಟಿಸ್ ನೀಡಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸುತ್ತೇವೆ.
— ಸುನಿತಾ ಎಪಿಎಂಸಿ ಕಾರ್ಯದರ್ಶಿ
ಮಾರುಕಟ್ಟೆಗೆ ಬರುವ ಕೂಲಿ ಕಾರ್ಮಿಕರ ಸ್ಥಿತಿಯಂತೂ ಹೇಳತೀರದಾಗಿದೆ. ಕೊಳೆತು ನಾರುತ್ತಿರುವ ಟೊಮ್ಯಾಟೊ ತ್ಯಾಜ್ಯ ಮತ್ತು ಕೆಸರಿನಲ್ಲೇ ನಿಂತು ಕೂಲಿ ಆಳುಗಳು ಲಾರಿಗಳಿಗೆ ಟೊಮ್ಯಾಟೊ ಬಾಕ್ಸ್ಗಳನ್ನು ತುಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಕಾರ್ಮಿಕರು ಚರ್ಮ ರೋಗ ಸೇರಿ ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆಯ ದುಸ್ಥಿತಿ ನೋಡಿದರೆ ಎಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆಯೋ ಎಂಬ ಭೀತಿ ವ್ಯಾಪಿಸಿದೆ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಡೆಂ, ಮಲೇರಿಯಾದಂತಹ ಕಾಯಿಲೆಗಳ ಆತಂಕ ಎದುರಾಗಿದೆ. ನಾವು ಬೆವರು ಸುರಿಸಿ ಬೆಳೆದ ಬೆಳೆಯನ್ನು ತಂದು ಮಾರಲು ಇಲ್ಲಿ ಜಾಗವಿಲ್ಲದಂತಾಗಿದೆ. ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ಸೌಕರ್ಯಗಳೇ ಇಲ್ಲ ಎಂದರೆ ಹೇಗೆ? ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.