ಚಂದಾಪುರದ ರಾಮನಗರದಲ್ಲಿ ಮಂಗಳವಾರ ಕರೆದಿದ್ದ ಚಿಂಚೋಳಿ ರೈಲು ಮಾರ್ಗ ಬೇಡಿಕೆ ಸಮಿತಿ ಸಭೆಯಲ್ಲಿ ಗೌರವ ಸಲಹೆಗಾರ ಮುಕುಂದ ದೇಶಪಾಂಡೆ ಮಾತನಾಡಿದರು. ಶಿವಶರಣಪ್ಪ ಜಾಪಟ್ಟಿ, ಸೂರ್ಯಕಾಂತ ಹುಲಿ ಇದ್ದರು. 
ರಾಜ್ಯ

ಚಿಂಚೋಳಿಗೆ ಬೇಕು ರೈಲು ಸಂಪರ್ಕ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಮುಕುಂದ ದೇಶಪಾಂಡೆ ಹೇಳಿಕೆ
  • ಚಂದಾಪುರದಲ್ಲಿ ಮಾರ್ಗ ಬೇಡಿಕೆ ಸಭೆ
ಚಿಂಚೋಳಿ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ರೈಲು ಮಾರ್ಗದ ಬೇಡಿಕೆ ಈಡೇರುವವರೆಗೆ ಸಂಟಿತ ಹೋರಾಟದ ಅಗತ್ಯವಿದೆ ಎಂದು ರೈಲು ಮಾರ್ಗ ಸಮಿತಿ ಗೌರವ ಸಲಹೆಗಾರ ಮುಕುಂದ ದೇಶಪಾಂಡೆ ಹೇಳಿದರು.
ಚಂದಾಪುರದ ರಾಮನಗರದಲ್ಲಿ ಮಂಗಳವಾರ ಕರೆದಿದ್ದ ತಾಲೂಕು ರೈಲು ಮಾರ್ಗ ಬೇಡಿಕೆ ಸಮಿತಿ ಪ್ರಥಮ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಬಹುವರ್ಷದ ರೈಲು ಮಾರ್ಗದ ಬೇಡಿಕೆಯನ್ನು ತೀವ್ರ ಸ್ವರೂಪದಿಂದ ಮುನ್ನಡೆಸಲೆಂದೇ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ. ಸಮಿತಿ ಗುರಿ ಮತ್ತು ಧ್ಯೇಯೋದ್ದೇಶ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದಾಗಲೇ ಬೇಡಿಕೆಗೆ ಸ್ಪಂದನೆ ಸಿಗಲಿದೆ. ಈ ನಿಟ್ಟಿನಲ್ಲಿ ಸಂಟಿತರಾಗಿ ಪ್ರಯತ್ನಿಸೋಣ ಎಂದರು.
ಸಮಿತಿ ಅಧ್ಯ ಶಿವಶರಣಪ್ಪ ಜಾಪಟ್ಟಿ, ಸೂರ್ಯಕಾಂತ ಹುಲಿ, ನಾಗರಾಜ ಪಾಟೀಲ್​ ಮಾತನಾಡಿ, ಗಡಿ ತಾಲೂಕಿನ ಅಭಿವೃದ್ಧಿಗೆ ಇಥೆನಾಲ್​ ಕಂಪನಿ ಪೂರಕವಾಗಿದೆ. ಅದರಂತೆ ಈ ಭಾಗದಿಂದ ರೈಲು ಮಾರ್ಗವಾದರೆ ಚಿಂಚೋಳಿ ಭವಿಷ್ಯದಲ್ಲಿ ಸಮಗ್ರ ಪ್ರಗತಿಯತ್ತ ಸಾಗುವುದರಲ್ಲಿ ಸಂದೇಹವಿಲ್ಲ. ಬೇಡಿಕೆ ಈಡೇರುವವರೆಗೆ ಜನತೆ ಸಹಕಾರ ನೀಡಿದರೆ ಗೆಲುವು ನಮ್ಮದಾಗಲಿದೆ ಎಂದು ಹೇಳಿದರು.
ಪ್ರಮುಖರಾದ ನಂದಿಕುಮಾರ ಪಾಟೀಲ್​, ಸುರೇಶ ದೇಶಪಾಂಡೆ, ರಾಜೇಂದ್ರ ತಾಜಲಾಪುರ, ಸುರೇಶ ಸುಂಕದ, ಭೀಮರಾವ ಗಣಾಪುರ, ಶಂಕರ ಶಿವಪುರಿ, ರಾಮಣ್ಣ ಗೋಪನಪಳ್ಳಿ, ಅಭಿಷೇಕ ಮಲಕನೂರ, ಮಂಜುನಾಥ ಸ್ವಾಮಿ, ಶ್ರೀನಿವಾಸ ಪೆಂಚನಪಳ್ಳಿ ಇತರರಿದ್ದರು.