ನಗರದ ನಯನ ಸಭಾಂಗಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಚಿದಾನಂದಮೂರ್ತಿಯವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಸಾಹಿತಿ ಡಾ. ಹಂಪನಾ ಉದ್ಘಾಟಿಸಿದರು.  
ರಾಜ್ಯ

ನೆಲ-ಜಲ-ಭಾಷೆಗಾಗಿ ಪ್ರಾಣವನ್ನೇ ಮುಡುಪಿಟ್ಟವರು ಚಿಮೂ

ಪ್ರಮುಖ ಮುಖ್ಯಾಂಶಗಳು

  • * ಹಿರಿಯ ಸಾಹಿತಿ ಡಾ. ಹಂ.ಪ. ನಾಗರಾಜಯ್ಯ ಹೇಳಿಕೆ
  • * ಚಿಮೂ ಸಮಗ್ರ ಸಾಹಿತ್ಯ ಸಂಪುಟ ಹಾಗೂ ವಿವಿಧ ಮರು ಮುದ್ರಣ ಕೃತಿ ಬಿಡುಗಡೆ
ಕನ್ನಡ ಪುಸ್ತಕ ಪ್ರಾಧಿಕಾರವು ನಯನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎಂ. ಚಿದಾನಂದಮೂರ್ತಿಯವರ ಸಮಗ್ರ ಸಾಹಿತ್ಯ ಸಂಪುಟಗಳು ಹಾಗೂ ವಿವಿಧ ಮರು ಮುದ್ರಣ ಕೃತಿಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಚಿದಾನಂದಮೂರ್ತಿಯವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಕೊಡುಗೆಯನ್ನು ಒಂದು ಹಿಡಿತದಲ್ಲಿ ಅಳತೆ ಮಾಡಲಾಗದು. ಸೃಜನಶೀಲ, ಸೃಜನೇತರ ಬರಹಗಳ ಜೊತೆಜೊತೆಗೆ ಅವರ ಸಂಶೋಧನಾಶೀಲ ವಿಚಾರ ವೈಖರಿ ಅಚ್ಚರಿಗೊಳಿಸುವಂತಹದ್ದು. ಅವರ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಕೃತಿ ಸಂಶೋಧಕರ ಪಾಲಿಗೆ ಭಗವದ್ಗೀತೆಯಾಗಿದೆ ಎಂದು ಬಣ್ಣಿಸಿದರು.
ಕೃತಿಯ ಸಂಪಾದಕ ಡಾ. ಬಸವರಾಜ ಕಲ್ಗುಡಿ ಮಾತನಾಡಿ, ಚಿದಾನಂದಮೂರ್ತಿ ಅವರು ಬಹುಮುಖಿ ಸಂವೇದನೆ ಮತ್ತು ಬಹುಮುಖಿ ಚಿಂತನೆಯುಳ್ಳ ಅಪರೂಪದ ವ್ಯಕ್ತಿ ಅವರು ಬರೆದ ಸಾಹಿತ್ಯದ ಪ್ರಮಾಣ ಬಹಳ ದೊಡ್ಡದು ಈಗ ನಾವು 15 ಸಂಪುಟಗಳಲ್ಲಿ ಅವರ ಕೃತಿಗಳನ್ನು ವಿಂಗಡಿಸಿದ್ದೇವೆ. ಆದರೆ ಅಪ್ರಕಟಿತವಾದ ಇನ್ನೂ ಬಹುದೊಡ್ಡ ಸಾಹಿತ್ಯ ಭಂಡಾರವೇ ಅವರ ಬಳಿ ಇದೆ. ಪುಸ್ತಕ ಪ್ರಾಧಿಕಾರ ಈ ಸಮಗ್ರ ಸಾಹಿತ್ಯವನ್ನು ಪ್ರಕಟಿಸುವ ಮೂಲಕ ಡಾ. ಚಿದಾನಂದಮೂರ್ತಿಯವನ್ನು ಗೌರವಿಸುವ ಪ್ರಶಂಸನೀಯ ಕೆಲಸ ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಎಂ. ಚಿದಾನಂದಮೂರ್ತಿಯವರ ಮಗ ವಿನಯ್ ಚಿದಾನಂದಮೂರ್ತಿ, ಡಾ. ಸಿ.ಆರ್. ಚಂದ್ರಶೇಖರ, ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ಹೊಸಗನ್ನಡ ಅರುಣೋದಯ ಕೃತಿ ಲೇಖಕ ಶ್ರೀನಿವಾಸ ಹಾವನೂರ ಅವರ ಪುತ್ರಿ ನಿವೇದಿತ ಹೊನ್ನತ್ತಿ, ಟಿ.ಎಸ್. ವೆಂಕಣ್ಣಯ್ಯ ಅವರ ಮಗ ಟಿ.ಎಸ್. ಶ್ರೀಕಂಠಯ್ಯ ಭಾಗವಹಿಸಿದ್ದರು.

ದೇವಾಲಯಗಳ ಹುಂಡಿಗಳಿಗೆ ಹಣಹಾಕುವ ಜನ ಪುಸ್ತಕಕೊಳ್ಳಲು ಹಿಂದುಮುಂದು ನೋಡುತ್ತಾರೆ. ಇಂತಹ ಭಾವನೆ ಬದಲಾಗಬೇಕು. ಮನೆಗೊಂದು ಪೂಜಾಕೊಠಡಿ ಇರುವಂತೆ ಮನೆಗೊಂದು ಗ್ರಂಥಾಲಯ ಇರಬೇಕು.