ಬೆಳಗಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಜಾಗೃತಿ ಜಾಥಾದಲ್ಲಿ ಮುಖ್ಯಶಿಕ್ಷಕ ವಿಶ್ವನಾಥ ಮೆಳ್ಳಿ, ಶಿಕ್ಷಕರಾದ ಚಂದ್ರಗಿರಿಯಪ್ಪ, ಮಹಾಂತಮ್ಮ, ಸಿದ್ದಯ್ಯ, ತಿರುಪತಿ, ಮಂಜುನಾಥ, ಆಜಿಮಾ, ಸುಜಾತಾ, ಜೈತುಂಬಿ ಇತರರಿದ್ದರು.
ಅಳವಂಡಿ: ಪೋಲಿಯೋ ಮಹಾಮಾರಿಯಿಂದ ಮಕ್ಕಳನ್ನು ರಕ್ಷಿಸಲು ಲಸಿಕೆ ಅತ್ಯಗತ್ಯವಾಗಿದೆ ಎಂದು ಮುಖ್ಯಶಿಕ್ಷಕ ವಿಶ್ವನಾಥ ಮೆಳ್ಳಿ ತಿಳಿಸಿದರು.
ಬೆಳಗಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಲ್ಸ್ ಪೋಲಿಯೋ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಪಾಲಕರು ನಿರ್ಲಕ್ಷ್ಯ ವಹಿಸದೇ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಪೋಲಿಯೋಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಗ್ರಾಮದ ಬೀದಿಗಳಲ್ಲಿ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಮೆರವಣಿಗೆ ಮೂಲಕ ಸಂಚರಿಸಿ ಪೋಲಿಯೋ ಜಾಗೃತಿ ಮೂಡಿಸಿದರು.
ಶಿಕ್ಷಕರಾದ ಚಂದ್ರಗಿರಿಯಪ್ಪ, ಮಹಾಂತಮ್ಮ, ತಿರುಪತಿ ವಡ್ಡರ, ಸಿದ್ದಯ್ಯ ಪೂಜಾರ, ಮಂಜುನಾಥ, ಆಜಿಮಾ, ಅಂಗನವಾಡಿ ಕಾರ್ಯಕರ್ತೆ ಫರ್ವೀನ್ ಬಾನು, ಆರೋಗ್ಯ ಸುರಕ್ಷತಾಧಿಕಾರಿ ಸುಜಾತಾ ಇಟಗಿ, ಆಶಾ ಕಾರ್ಯಕರ್ತೆ ಜೈತುಂಬಿ ಹಾಗೂ ವಿದ್ಯಾರ್ಥಿಗಳಿದ್ದರು.