ರಾಮದುರ್ಗದ ಬಸವ ಗಾರ್ಡನ್ನಲ್ಲಿ ಹಮ್ಮಿಕೊಂಡಿದ್ದ ಬಸವಶ್ರೀ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಮಲ್ಲಿಕಾರ್ಜುನ ರೂಢಗಿ, ಡಾ.ಮತ್ಯುಂಜಯ ಶೆಟ್ಟರ, ಪ್ರದಿಪಕುಮಾರ ಪಟ್ಟಣ, ಮಲ್ಲಣ್ಣ ಯಾದವಾಡ, ಗಿರೀಶ ಉದೋಶಿ, ಶಶಿಧರ ಮಾಳವಾಡ, ಪ್ರಭಾ ಪುಟಾಣಿ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ರಾಮದುರ್ಗ
ಮಕ್ಕಳ ಗುಣಾತ್ಮಕ ಶಿಣಕ್ಕೆ ಉತ್ತಮ ಸಂಸ್ಕಾರದ ಅಗತ್ಯವಿದ್ದು, ಬಾಲ್ಯದಲ್ಲೇ ಪೋಷಕರು ಸಂಸ್ಕಾರದ ಜತೆಗೆ ನೈತಿಕ ಮೌಲ್ಯ ತಿಳಿಸುವತ್ತ ಗಮನ ಹರಿಸಬೇಕು ಎಂದು ಕರ್ನಾಟಕ ಬಣಜಿಗ ಸಮುದಾಯದ ೇಮಾಭಿವದ್ಧಿ ಸಂದ ಅಧ್ಯ ಮಲ್ಲಿಕಾರ್ಜುನ ರೂಢಗಿ ಹೇಳಿದರು.
ಬಸವ ಗಾರ್ಡನ್ನಲ್ಲಿ ಶುಕ್ರವಾರ ಬಣಜಿಗ ಸಮುದಾಯದ ತಾಲೂಕು ಟಕ ವತಿಯಿಂದ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಬಸವಶ್ರೀ ಪ್ರತಿಭಾ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸಂವು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವಿದ್ಯಾನಿಧಿ ಸ್ಥಾಪನೆ ಜಾರಿ ಕುರಿತು ಯೋಜನೆ ಹಾಕಿಕೊಂಡಿದ್ದು, ಶ್ರೀದಲ್ಲಿ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಅಗತ್ಯ ನೆರವು ಕಲ್ಪಿಸಲಾಗುವುದು ಎಂದರು.
ಹಿಂದುಸ್ತಾನಿ ಗಾಯಕ ಡಾ.ಮತ್ಯುಂಜಯ ಶೆಟ್ಟರ ಮಾತನಾಡಿ, ಬಣಜಿಗರು ಜೀವನದಲ್ಲಿ ಶಿವ ಶರಣರ ವಚನ ಅಳವಡಿಸಿ ವ್ಯಾಪಾರದೊಂದಿಗೆ ಜೀವನ ನಡೆಸಿದ್ದಾರೆ. ಅಲ್ಲದೆ ರಾಜ್ಯದ ಹಲವಾರು ಶಿಣ ಸಂಸ್ಥೆ ತೆರೆಯುವಲ್ಲಿ ಪ್ರಮುಖ ಪಾತ್ರ ವಹಿಸಿ ಶಿಣ ೇತ್ರ ಸೇರಿದಂತೆ ವಿವಿಧ ರಂಗಗಳ ಅಭಿವದ್ಧಿಗೆ ಕೊಡುಗೆ ನೀಡಿದ್ದಾರೆ ಎಂದರು.
ವಿರಕ್ತಮಠ ಟ್ರಸ್ಟ್ ಅಧ್ಯ ಪ್ರದಿಪಕುಮಾರ ಪಟ್ಟಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿದರು. ತಾಲೂಕು ಟಕದ ಅಧ್ಯ ಶಶಿಧರ ಮಾಳವಾಡ, ಜಿಲ್ಲಾಧ್ಯ ಗಿರೀಶ ಉದೋಶಿ, ಗೌರವಾಧ್ಯ ಹಂಪಣ್ಣವರ, ತಾಲೂಕು ಮಹಿಳಾ ಟಕದ ಅಧ್ಯೆ ಪ್ರಭಾ ಪುಟಾಣಿ, ಯುವ ಟಕದ ಅಧ್ಯ ಸಂಜಯ ಆರಿಬೆಂಚಿ, ಕಾರ್ಯದರ್ಶಿ ಈರಣ್ಣ ಬುಡ್ಡಾಗೋಳ, ಪ್ರೊ.ಎಸ್.ಎಂ. ಸಕ್ರಿ, ಉಪಾಧ್ಯ ಶಿವಯೋಗಿ ಚಿಕ್ಕೋಡಿ, ರೇಣುಕಾ ಬಂತಿ, ಉಮೇಶ ಗೋಲನ್ನವರ ಇತರರಿದ್ದರು.