ಯಕ್ಕುಂಡಿ ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ರಜೆ ಮುಗಿಸಿ ಶಾಲೆಗೆ ಮರಳಿದ ಮಕ್ಕಳಿಗೆ ಗಣ್ಯರು ಹಾಗೂ ಶಿಕ್ಷಕರು ಪಠ್ಯ ಪುಸ್ತಕ ನೀಡಿ ಸ್ವಾಗತಿಸಿದರು. ಶರ್​ೀ ನದ್​ಾ, ವಿಜಯ ಪೂಜೇರ, ಶೇಖವ್ವ ತಿಮ್ಮೇಶಿ ಇತರರಿದ್ದರು. 
ರಾಜ್ಯ

ಮಕ್ಕಳ ಭವಿಷ್ಯಕ್ಕೆ ಜಾಗೃತಿ ಅಗತ್ಯ

ಯಕ್ಕುಂಡಿ: ಪ್ರಸ್ತುತ ದಿನಗಳಲ್ಲಿ ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಜತೆಗೆ ಅವರ ಬೆಳವಣಿಗೆ ಮತ್ತು ಭವಿಷ್ಯದ ಬಗ್ಗೆ ಜಾಗತರಾಬೇಕು ಎಂದು ಬೆಳಗಾವಿಯ ಡಯಟ್​ ಉಪನ್ಯಾಸಕ ಶರ್​ೀ ನದ್​ಾ ಹೇಳಿದರು.
ಕರ್ನಾಟಕ ಪಬ್ಲಿಕ್​ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ, ಶಾಲಾ ದಾಖಲಾತಿ ಆಂದೋಲನ ಹಾಗೂ ಪಾಲಕರು&ಶಿಕರ ಮಹಾಸಭೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಹೆತ್ತವರು ಹಾಗೂ ಶಿಕ್ಷಕರ ಮೇಲಿದೆ. ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಂಡು ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೆಪಿಎಸ್​ ಶಾಲೆಯ ಉಪ ಪ್ರಾಚಾರ್ಯ ವಿಜಯ ಪೂಜೇರ ಮಾತನಾಡಿ, ವಿದ್ಯಾರ್ಥಿಗಳು ಮೊಬೆಲ್​ ಗೀಳು ಬಿಟ್ಟು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಮೀಸಲಿರಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಪೂರ್ವದಲ್ಲಿ ಬೇಸಿಗೆಯ ರಜೆ ಮುಗಿಸಿ ಶಾಲೆಗೆ ಮರಳಿದ ಮಕ್ಕಳಿಗೆ ಹೂವು, ಪಠ್ಯಪುಸ್ತಕ ಹಾಗೂ ಸಿಹಿ ಹಂಚಿ ಸ್ವಾಗತಿಸಲಾಯಿತು. ಶಿಕ ರಮೇಶ ಗಾಣಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಅಧ್ಯೆ ಶೇಖವ್ವ ತಿಮ್ಮೇಶಿ, ಪ್ರಾಚಾರ್ಯ ಎ.ಬಿ.ಮಿರಜಕರ, ಮುಖ್ಯಶಿಕ್ಷಕರಾದ ಸುರೇಶ ಬಡ್ಲಿ, ಶಂಕರ ಲಮಾಣಿ, ಶಿಕಿ ಬಿ.ಎಂ.ಲಿಗಾಡೆ ಇತರರಿದ್ದರು. ಶಿಕಿ ಮಂಜುಳಾ ತೇಗೂರ ನಿರೂಪಿಸಿದರು. ಸಿ.ಎಸ್​.ಹುಡೇದ ವಂದಿಸಿದರು.