ನೆಲಮಂಗಲ ತಾಲೂಕಿನ ದೊಡ್ಡಬೆಲೆ ಸರ್ಕಾರಿ ಪೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಮತ್ತು ಮಹಿಳೆಯರ ವಿಶೇಷ ಗ್ರಾಮ ಸಭೆಯನ್ನು ದೊಡ್ಡಬೆಲೆ ಗ್ರಾಪಂ ಸದಸ್ಯ ಕೃಷ್ಣಪ್ಪ ಉದ್ಘಾಟಿಸಿದರು. ನಾಗೇಶ್​, ಪಿಡಿಒ ಇನಾಂದಾರ್​ ಇತರರು ಇದ್ದರು.  
ರಾಜ್ಯ

ನಾಳಿನ ಭಾರತಕ್ಕೆ ಮಕ್ಕಳೇ ರಾಯಭಾರಿಗಳು / TYAMAGONDLU

ತ್ಯಾಮಗೊಂಡ್ಲು : ವಿಶೇಷ ಹಕ್ಕುಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಮಾಹಿತಿ ನೀಡಬೇಕು. ಮಕ್ಕಳನ್ನು ಧೈರ್ಯ ಮತ್ತು ತಿಳುವಳಿಕೆಯುಳ್ಳವರನ್ನಾಗಿಸುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲಿದೆ ಎಂದು ದೊಡ್ಡಬೆಲೆ ಗ್ರಾಪಂ ಸದಸ್ಯ ನಿಂಬೇನಹಳ್ಳಿ ಕೃಷ್ಣಪ್ಪ ಹೇಳಿದರು.
ನೆಲಮಂಗಲ ತಾಲೂಕಿನ ದೊಡ್ಡಬೆಲೆ ಸರ್ಕಾರಿ ಪೌಢಶಾಲೆಯಲ್ಲಿ ದೊಡ್ಡಬೆಲೆ ಗ್ರಾಪಂನಿಂದ ಮಂಗಳವಾರ ಆಯೋಜಿಸಿದ್ದ ವಿಶೇಷ ಮಕ್ಕಳ ಹಾಗೂ ಮಹಿಳೆಯರ ಗ್ರಾಮಸಭೆಯಲ್ಲಿ ಮಾತನಾಡಿದರು. ದೇಶದ ಭವಿಷ್ಯಕ್ಕಾಗಿ ಮಕ್ಕಳ ಭವಿಷ್ಯ ಉಜ್ವಲವಾಗಿಸಬೇಕು. ಮಕ್ಕಳನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಹೊಣೆ ಎಲ್ಲರ ಮೇಲಿದೆ. ಇಂದಿನ ಮಕ್ಕಳು ನಾಳಿನ ಭಾರತವನ್ನು ರೂಪಿಸುವ ಪ್ರಜೆಗಳು ಎಂದರು.
ಸಭೆಯಲ್ಲಿ ಶಾಲಾಮಕ್ಕಳು ನೀರಿನ ಸಮಸ್ಯೆ, ಹೊರಗಿನವರು ಶಾಲಾ ಮೈದಾನ ಉಪಯೋಗಿಸಿ ಗಲೀಜು ಮಾಡುತ್ತಿರುವ ಬಗ್ಗೆ, ಶೌಚಗೃಹ ಸಮಸ್ಯೆ, ಗ್ರಾಪಂನಿಂದ ಆಟೋಪಕರಣಗಳನ್ನು ನೀಡುವ ಬಗ್ಗೆ ಪಿಡಿಒ ಗಮನ ಸೆಳೆದರು.
ಪಿಡಿಒ ವೆಂಕಟೇಶ್​ ಇನಾಮ್​ದಾರ್​ ಮಾತನಾಡಿ, ಕಾನೂನು ಮಾತನಾಡುವುದಕ್ಕಿಂತ ಅನುಸರಿಸುವುದರತ್ತ ಪ್ರತಿಯೊಬ್ಬರು ಗಮನಹರಿಸಬೇಕು. ಗ್ರಾಪಂ ವ್ಯಾಪ್ತಿಯ ಸಮಸ್ಯೆಗಳನ್ನು ಗ್ರಾಪಂ ಕಾರ್ಯಾಲಯಕ್ಕೆ ತಿಳಿಸಿದರೆ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಜತೆಗೆ ಮಕ್ಕಳ ಸಮಸ್ಯೆಗಳನ್ನು ಶೀಘ್ರದಲ್ಲೆ ನಿವಾರಿಸುವುದಾಗಿ ತಿಳಿಸಿದರು.
ನೆಲಮಂಗಲ ಕೆನರಾ ಬ್ಯಾಂಕ್​ ಅಧಿಕಾರಿ ಸಂಪತ್​ಕುಮಾರ್​ ಅವರು ಸಿಎಸ್​ಆರ್​ ನಿಧಿಯಿಂದ ಶಾಲೆಗೆ ಅನುಕೂಲವಾಗುವ ಸೌಲಭ್ಯ ದೊರಕಿಸಿಕೊಡುವ ಭರವಸೆ ನೀಡಿದರು.
ಗ್ರಾಪಂ ಸದಸ್ಯ ನಾಗೇಶ್​, ನೋಡಲ್​ ಅಧಿಕಾರಿ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವರಾಂ, ಡಾ.ಗುಣಶೀಲಾ, ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಸುಜಾತಾ, ಮುಖ್ಯ ಶಿಕ್ಷಕ ಮಲ್ಲಪ್ಪ ಎ.ಹಡಪದ, ಹಿರಿಯ ಶಿಕ್ಷಕ ಗೋಪಿನಾಥ್​, ಗ್ರಾಪಂ ಕಾರ್ಯದಶಿ ಡಿ.ಪಾರ್ಥಸಾರಥಿ, ಬಿಲ್​ ಕಲೆಕ್ಟರ್​ ಮಂಜುನಾಥ್​ ಇತರರು ಇದ್ದರು.